ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಕ್ಲರ್ಕ್, ಗ್ರಂಥಾಲಯ ಸಹಾಯಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: IWST LDC & MTS Recruitment 2024
ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವಾಲಯದಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಇದರ ಅಡಿಯಲ್ಲಿ ಬರುವ ವುಡ್ ಸೈನ್ಸ್ & ಟೆಕ್ನಾಲಜಿ ಸಂಸ್ಥೆ, ಬೆಂಗಳೂರಿನಲ್ಲಿ ಖಾಲಿ ಇರುವ ಕ್ಲರ್ಕ್, ಎಂಟಿಎಸ್ ಹಾಗೂ ಲೈಬ್ರೆರಿ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು 03-01-2025 ರ ಒಳಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಬಹುದು. ಇದರ ಅಧಿಸೂಚನೆ & ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್ ನಲ್ಲಿ ಖಾಲಿ ಇರುವ 72 ಹುದ್ದೆಗಳ ನೇಮಕಾತಿ
ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.
ಕರ್ನಾಟಕ ಬ್ಯಾಂಕ್ ನಲ್ಲಿ ಖಾಲಿ ಇರುವ ಪ್ರೊಬೇಶನರಿ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ-
ಹುದ್ದೆಗಳ ವಿವರ/ Post Details:
ಸಂಸ್ಥೆ/ ಇಲಾಖೆ: Institute of Wood Science and Technology
ಹುದ್ದೆಗಳ ಹೆಸರು: ಲೋವರ್ ಡಿವಿಸನ್ ಕ್ಲರ್ಕ್, ಎಂಟಿಎಸ್ ಹಾಗೂ ಲೈಬ್ರೆರಿ ಅಸಿಸ್ಟೆಂಟ್
ಹುದ್ದೆಗಳ ಸಂಖ್ಯೆ: 17
ಕೆಲಸದ ಸ್ಥಳ: ಬೆಂಗಳೂರು
ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
ಲೈಬ್ರೆರಿ ಇನ್ಫಾರ್ಮೇಶನ್ ಅಸಿಸ್ಟೆಂಟ್ | 01 |
ಲೋವರ್ ಡಿವಿಸನ್ ಕ್ಲರ್ಕ್ | 04 |
ಮಲ್ಟಿ ಟಾಸ್ಕಿಂಗ್ ಸ್ಟಾಫ್ | 12 |
ವೇತನ/ Salary Scale:
ಕೇಂದ್ರ ಸರ್ಕಾರದ ನಿಯಮಾವಳಿಗಳನ್ವಯ ವೇತನ & ಇನ್ನಿತರ ಸೌಲಭ್ಯಗಳು ದೊರೆಯುತ್ತವೆ.
ಶೈಕ್ಷಣಿಕ ಅರ್ಹತೆಗಳು/ Educational Qualification:
ಲೈಬ್ರೆರಿ ಇನ್ಫಾರ್ಮೇಶನ್ ಅಸಿಸ್ಟೆಂಟ್: ಲೈಬ್ರೆರಿ ಸೈನ್ಸ್ ವಿಷಯದಲ್ಲಿ ಪದವಿಯನ್ನು ಮುಗಿಸಿರಬೇಕು.
ಲೋವರ್ ಡಿವಿಸನ್ ಕ್ಲರ್ಕ್: 12ನೇ ತರಗತಿ ಉತ್ತೀರ್ಣ ಹೊಂದಿರಬೇಕು ಹಾಗೂ ಕಂಪ್ಯೂಟರ್ ನಲ್ಲಿ ಇಂಗ್ಲೀಷ್ ಟೈಪಿಂಗ್ ಗೊತ್ತಿರಬೇಕು.
ಮಲ್ಟಿ ಟಾಸ್ಕಿಂಗ್ ಸ್ಟಾಫ್: 10ನೇ ತರಗತಿ ಉತ್ತೀರ್ಣ ಹೊಂದಿರಬೇಕು.
ವಯೋಮಿತಿ/ Age limit:
ದಿನಾಂಕ 03-01-2025 ಕ್ಕೆ ಸರಿಯಾಗಿ ಕನಿಷ್ಟ 18 ವರ್ಷ ತುಂಬಿರಬೇಕು. ಗರಿಷ್ಟ 27 ವರ್ಷದವರೆಗೂ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದವರಗೆ ಗರಿಷ್ಟ ವಯೋಮಿತಿಯಲ್ಲಿ 05 ವರ್ಷ ಹಾಗೂ ಇತರೆ ಹಿಂದೂಳಿದ ವರ್ಗದವರಿಗೆ 03 ವರ್ಷ ಸಡಿಲಿಕೆ ದೊರೆಯುತ್ತದೆ.
ಅರ್ಜಿ ಶುಲ್ಕ/ Application Fees:
ಸಾಮಾನ್ಯ, OBC & EWS ಅಭ್ಯರ್ಥಿಗಳಿಗೆ : ರೂ. 800/-
ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡ/ ಅಂಗವಿಕಲ ಅಭ್ಯರ್ಥಿಗಳಿಗೆ: & ಎಲ್ಲ ಮಹಿಳೆಯರಿಗೆ: ಅರ್ಜಿ ಶುಲ್ಕವಿಲ್ಲ
ಆಯ್ಕೆವಿಧಾನ/ Selection procedure:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ/ ಸಂದರ್ಶನ ನಡೆಸಲಾಗುತ್ತದೆ
ಅರ್ಜಿ ಹಾಕುವ ವಿಧಾನ/ Application Submission Method:
ಆಸಕ್ತ ಹಾಗೂ ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಇತ್ತೀಚಿನ ಫೋಟೊ, ಅಗತ್ಯ ವಿದ್ಯಾರ್ಹತೆ, ಅನುಭವ & ಇನ್ನಿತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ ದ್ವಿಪ್ರತಿಯಲ್ಲಿ ದಿನಾಂಕ: 03.01.2025 ರ ಒಳಗಾಗಿ ಖುದ್ದಾಗಿ ಅಥವಾ ಅಂಚೆ ಮೂಲಕ ಅಧಿಸೂಚನೆಯಲ್ಲಿ ತಿಳಿಸಿರುವ ವಿಳಾಸಕ್ಕೆ ಸಲ್ಲಿಸುವುದು. ಈ ನೋಟಿಫಿಕೇಶನ್ ಲಿಂಕ್ ಡೌನ್ಲೋಡ್ ಮಾಡಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ.
ಭಾರತೀಯ ರೈಲ್ವೇ ತಾಂತ್ರಿಕ & ಆರ್ಥಿಕ ಸೇವೆಗಳ ನಿಗಮ (RITES) ನಲ್ಲಿ ಖಾಲಿ ಇರುವಹುದ್ದೆಗಳಿಗೆ ಅರ್ಜಿ ಆಹ್ವಾನ
Important Date/ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 03-01-2024
Important Links/ ಪ್ರಮುಖ ಲಿಂಕುಗಳು: