ಕರ್ನಾಟಕ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ 313 ಗ್ರೂಪ್ ಸಿ ಹುದ್ದೆಗಳ ಬೃಹತ್ ಭರ್ತಿಗೆ ಅರ್ಜಿ ಆಹ್ವಾನ: Apply Online KPSC Group C in Various Dept. 2024

Click here to Share:

ಕರ್ನಾಟಕ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ 313 ಗ್ರೂಪ್ ಸಿ ಹುದ್ದೆಗಳ ಬೃಹತ್ ಭರ್ತಿಗೆ ಅರ್ಜಿ ಆಹ್ವಾನ: Apply Online KPSC Group C in Various Dept. 2024

ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆ & ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯ ವೃಂದದಲ್ಲಿ  ಖಾಲಿ ಇರುವ  ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. “ ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಹೊರಡಿಸಲಾಗಿರುವ ಅಧಿಸೂಚನೆಗಳಿಗೆ ಹಾಗೂ ಮುಂದಿನ ಒಂದು ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಟ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಿ ಆದೇಶಿಸಿದೆ” ಈ ಪ್ರಯುಕ್ತ ವಯೋಮಿತಿಯಲ್ಲಿ ಸಡಿಲಿಕೆ ಮಾಡಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-10-2024 ಆಗಿರುತ್ತದೆ. ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ.  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು‌ ಕೆಳಗೆ‌ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 232 ಹಾಸ್ಟೇಲ್ ವಾರ್ಡನ್ ಹುದ್ದೆಗಳ ಭರ್ತಿಗೆ ಅಧಿಸೂಚನೆ

ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆ & ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.

ಪ್ರಾಥಮಿಕ & ಪ್ರೌಢಶಾಲಾ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 5287 ಖಾಯಂ ಶಿಕ್ಷಕ ಹುದ್ದೆಗಳ ನೇಮಕಾತಿ ಆರಂಭ

ಹುದ್ದೆಗಳ ವಿವರ/ Post Details:

ಸಿವಿಲ್ ಕಿರಿಯ ಇಂಜಿನಿಯರ್ (ಜಲ ಸಂಪನ್ಮೂಲ ಇಲಾಖೆ 270 ಹುದ್ದೆಗಳು
ಮೆಕ್ಯಾನಿಕಲ್ ಕಿರಿಯ ಇಂಜಿನಿಯರ್ (ಜಲ ಸಂಪನ್ಮೂಲ ಇಲಾಖೆ 30 ಹುದ್ದೆಗಳು
ಸಹಾಯಕ ಗ್ರಂಥಾಪಾಲಕ 13
ಒಟ್ಟು ಹುದ್ದೆಗಳು 313 ಹುದ್ದೆಗಳು

ವೇತನ/ Salary

ಹುದ್ದೆಗಳ ಹೆಸರು ವೇತನ ಶ್ರೇಣಿ
ಕಿರಿಯ ಇಂಜಿನಿಯರ್ 33450-62600
ಗ್ರಂಥಾಲಯ ಸಹಾಯಕ 30350-58250

ಕರ್ನಾಟಕ ಸರ್ಕಾರದ ವೇತನ ನಿಯಮಾವಳಿಗಳ ಪ್ರಕಾರ ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.

ಶೈಕ್ಷಣಿಕ ಅರ್ಹತೆಗಳು/ Educational Qualification:

ಕಿರಿಯ ಇಂಜಿನಿಯರ್ (JE) : ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ಸಂಸ್ಥೆಯಿಂದ ಮೂರು ವರ್ಷಗಳ CIVIL / MECHANICAL Diploma in Engineering ವಿದ್ಯಾರ್ಹತೆಯನ್ನು ಹೊಂದಿರಬೇಕು.

ಗ್ರಂಥಾಲಯ ಸಹಾಯಕ: ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ಸಂಸ್ಥೆಯಿಂದ ಮೂರು ವರ್ಷಗಳ Diploma in Library Science ವಿದ್ಯಾರ್ಹತೆಯನ್ನು ಹೊಂದಿರಬೇಕು.

ಅರ್ಜಿ ಶುಲ್ಕ/ Application Fees:

ಸಾಮಾನ್ಯ ಅರ್ಹತಾ ಅಭ್ಯರ್ಥಿಗಳಿಗೆ : ರೂ. 600/-

ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ: ರೂ. 300/-

ಪ.ಜಾ/ ಪಪಂ/ ಕೆ1 / ಅಂಗವಿಕಲ ಸೇರಿದ ಅಭ್ಯರ್ಥಿಗಳಿಗೆ : ಶುಲ್ಕ ವಿನಾಯಿತಿ

ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 50/-

ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್/ ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಯುಪಿಐ ಬಳಸಿಕೊಂಡು ಆನ್ಲೈನ್ ಮೂಲಕ  ಪಾವತಿ ಮಾಡಬಹುದು.

ವಯೋಮಿತಿ/ Age limit:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ಪೂರೈಸಿರಬೇಕು & 38 ವರ್ಷವನ್ನು ಮೀರಿರಬಾರದು.

 ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 43 ವರ್ಷ

ಇತರೆ ಹಿಂದೂಳಿದ ವರ್ಗ (OBC) : 41 ವರ್ಷ

ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.

 

ಆಯ್ಕೆವಿಧಾನ/ Selection procedure:

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ

ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಪತ್ರಿಕೆ & ನಿರ್ದಿಷ್ಟ ಪತ್ರಿಕೆಗಳನ್ನು ಹೊಂದಿದ್ದು, ಪ್ರತಿಯೊಂದು ಪತ್ರಿಕೆಯು 100 ಅಂಕಗಳನ್ನು ಹೊಂದಿರುತ್ತದೆ. ಒಟ್ಟು 200 ಅಂಕಗಳಿಗೆ ಪರೀಕ್ಷೆ ಇರುತ್ತದೆ.

ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನವಿದ್ದು ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದು ಭಾಗ ಅಂಕಗಳನ್ನು ಕಳೆಯಲಾಗುತ್ತದೆ.

 ಅರ್ಜಿ ಹಾಕುವ ವಿಧಾನ/ Application Submission Method:

ಈ  ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 29.04.2024 ರಿಂದ 10.06.2024ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು ಆಯೋಗದ  ವೆಬ್ ಸೈಟ್ www.kpsc.kar.nic.in  ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗೆ ನೀಡಲಾಗಿದೆ..

KPSC ಯಿಂದ ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ವೇತನ ರೂ. 43200/-

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 15-10-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-10-2024

 

 

Important Links/ ಪ್ರಮುಖ ಲಿಂಕುಗಳು:

Application Reopen Notice

ಅಧಿಸೂಚನೆ/ Notification:

ಅರ್ಜಿ ಸಲ್ಲಿಸಿ/ Apply Online:

ವೆಬ್ಸೈಟ್/ Website :


Click here to Share:
Bookmark the permalink.

About sdkpscjob

www.kpscjobs.com Educator & Blogger

Comments are closed.