ಕರ್ನಾಟಕ ವಿಧಾನಸಭೆಯಲ್ಲಿ ಖಾಲಿ ಇರುವ ಕಂಪ್ಯಟರ್ ಆಪರೇಟರ್, ವರದಿಗಾರರು & ದಲಾಯತ್ ಹುದ್ದೆಗಳಿಗೆ ಅರ್ಜಿ ಆಹ್ವಾನ: KLA Various Posts Recruitment 2024

Click here to Share:

ಕರ್ನಾಟಕ ವಿಧಾನಸಭೆಯಲ್ಲಿ ಖಾಲಿ ಇರುವ ಕಂಪ್ಯಟರ್ ಆಪರೇಟರ್, ವರದಿಗಾರರು & ದಲಾಯತ್ ಹುದ್ದೆಗಳಿಗೆ ಅರ್ಜಿ ಆಹ್ವಾನ: KLA Various Posts Recruitment 2024

ಕರ್ನಾಟಕ ವಿಧಾನ ಸಭೆ ಸಚಿವಾಲಯದಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು,  ಉಳಿಕೆ  ವೃಂದದಲ್ಲಿ (HK) ಖಾಲಿ ಇರುವ ಕನ್ನಡ ಹಾಗೂ ಆಂಗ್ಲ ವರದಿಗಾರರು & ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  KLA ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು 25-11-2024 ರ ಒಳಗೆ ಅರ್ಜಿ ಸಲ್ಲಿಸಬಹುದು.  ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಬಹುದು. ಇದರ ಅಧಿಸೂಚನೆ & ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

ಕರ್ನಾಟಕ PWD ಇಲಾಖೆಯಲ್ಲಿ ಖಾಲಿ ಇರುವ 42 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ವೇತನ ರೂ. 83000/-

Karnataka Legislative Assembly  ನಲ್ಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.

ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಸಿ ಗ್ರೂಪ್ ಹುದ್ದೆಗಳ ನೇಮಕಾತಿ

ಹುದ್ದೆಗಳ ವಿವರ/ Post Details:

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಕನ್ನಡ ವರದಿಗಾರರು 03
ಆಂಗ್ಲ ವರದಿಗಾರರು 01
ಕಂಪ್ಯೂಟರ್ ಆಪರೇಟರ್ 03
ದಲಾಯತ್ 16
ಸ್ವೀಪರ್ 01
ಒಟ್ಟು ಹುದ್ದೆಗಳು 24 ಹುದ್ದೆಗಳು

ವೇತನ/ Salary Scale:

ವರದಿಗಾರರು: ವೇತನ ಶ್ರೇಣಿ: 61300-112900 (ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.

ಕಂಪ್ಯೂಟರ್ ಆಪರೇಟರ್ : ವೇತನ ಶ್ರೇಣಿ: 49050-92500 (ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.

ದಲಾಯತ್ : ವೇತನ ಶ್ರೇಣಿ: 27000-46675 (ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.

ಸ್ವೀಪರ್ : ವೇತನ ಶ್ರೇಣಿ: 27000-46675 (ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.

ಶೈಕ್ಷಣಿಕ ಅರ್ಹತೆಗಳು/ Educational Qualification:

ಕನ್ನಡ ವರದಿಗಾರರು:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ  ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯನ್ನು ಹೊಂದಿರಬೇಕು.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಪ್ರವೀಣ ದರ್ಜೆಯ ಕನ್ನಡ  ಶೀಘ್ರಲಿಪಿ & ಪ್ರೌಢ ದರ್ಜೆಯ ಕನ್ನಡ ಬೆರಳಚ್ಚು ಪರೀಕ್ಷೆಗಳಲ್ಲಿ ಉತ್ತೀರ್ಣ ಹೊಂದಿರಬೇಕು.

ಆಂಗ್ಲ ವರದಿಗಾರರು:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ  ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯನ್ನು ಹೊಂದಿರಬೇಕು.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಪ್ರವೀಣ ದರ್ಜೆಯ ಆಂಗ್ಲ ಶೀಘ್ರಲಿಪಿ & ಪ್ರೌಢ ದರ್ಜೆಯ ಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ ಉತ್ತೀರ್ಣ ಹೊಂದಿರಬೇಕು.

ಕಂಪ್ಯೂಟರ್ ಆಪರೇಟರ್: ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ  ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಸಿಎ ಪದವಿಯನ್ನು ಹೊಂದಿರಬೇಕು.

ದಲಾಯತ್: 7ನೇ ತರಗತಿಯಲ್ಲಿ ಉತ್ತೀರ್ಣ ಹೊಂದಿರಬೇಕು.

ಸ್ವೀಪರ್: 4ನೇ ತರಗತಿಯಲ್ಲಿ ಉತ್ತೀರ್ಣ ಹೊಂದಿರಬೇಕು.

ವಯೋಮಿತಿ/ Age limit:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ಪೂರೈಸಿರಬೇಕು & 35 ವರ್ಷವನ್ನು ಮೀರಿರಬಾರದು.

 ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ

ಇತರೆ ಹಿಂದೂಳಿದ ವರ್ಗ (OBC) : 03 ವರ್ಷ

ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ/ Application Fees:

ಸಾಮಾನ್ಯ ಅರ್ಹತಾ ಅಭ್ಯರ್ಥಿಗಳಿಗೆ: ರೂ. 500/-

ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ : ರೂ. 500/-

ಪ.ಜಾ/ ಪಪಂ/ ಕೆ1  ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕ ಇರುವುದಿಲ್ಲ

ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಇಂಡಿಯನ್ ಪೋಸ್ಟಲ್ ಆರ್ಡರ್ ಮುಖಾಂತರ ಪಾವತಿ ಮಾಡಬಹುದು.

ಆಯ್ಕೆವಿಧಾನ/ Selection procedure:

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ/ ಕೌಶಲ್ಯ ಪರೀಕ್ಷೆ  ನಡೆಸಲಾಗುತ್ತದೆ

ಅರ್ಜಿ ಹಾಕುವ ವಿಧಾನ/ Application Submission Method:

ಆಸಕ್ತ ಹಾಗೂ ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಇತ್ತೀಚಿನ ಫೋಟೊ,  ಅಗತ್ಯ ವಿದ್ಯಾರ್ಹತೆ, ಅನುಭವ & ಇನ್ನಿತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ ದಿನಾಂಕ: 25.11.2024 ರ ಒಳಗಾಗಿ ಖುದ್ದಾಗಿ ಅಥವಾ ಅಂಚೆ ಮೂಲಕ ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ- 5074 ವಿಧಾನಸೌಧ, ಬೆಂಗಳೂರು- 560001 ಇವರ ವಿಳಾಸಕ್ಕೆ  ಸಲ್ಲಿಸುವುದು. ಈ ನೋಟಿಫಿಕೇಶನ್ ಲಿಂಕ್ ಡೌನ್ಲೋಡ್ ಮಾಡಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ.

ಕರ್ನಾಟಕ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ 313 ಗ್ರೂಪ್ ಸಿ ಹುದ್ದೆಗಳ ಬೃಹತ್ ಭರ್ತಿಗೆ ಅರ್ಜಿ ಆಹ್ವಾನ

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 25-10-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 25-11-2024

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification: 

ವೆಬ್ಸೈಟ್/ Website :


Click here to Share:
Tagged . Bookmark the permalink.

About sdkpscjob

www.kpscjobs.com Educator & Blogger

Comments are closed.