ಕೆಪಿಎಸ್ಸಿ ಯಿಂದ 384 ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆ ಕುರಿತಂತೆ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ: KPSC KAS EXAM SCHEDULE 2024

Click here to Share:

ಕೆಪಿಎಸ್ಸಿ ಯಿಂದ 384 ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆ ಕುರಿತಂತೆ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ: KPSC KAS EXAM SCHEDULE 2024

ಕರ್ನಾಟಕ ಲೋಕಸೇವಾ ಆಯೋಗದಿಂದ ಕೆಎಎಸ್ ಹುದ್ದೆಗಳ ಭರ್ತಿ‌ ಕುರಿತಂತೆ ಪರೀಕ್ಷಾ ದಿನಾಂಕವನ್ನು ಮುಂದೂಡಲಾಗಿದೆ. ದಿನಾಂಕ 25-08-2024 ರಂದು ಕೆಎಎಸ್ ಪರೀಕ್ಚೆಯನ್ನು ನಡೆಸಲು ನಿರ್ಧರಿಸಲಾಗಿತ್ತು ಆದರೆ ಈ ಕುರಿತಂತೆ ಅಭ್ಯರ್ಥಿಗಳು ಪರೀಕ್ಷೆ ಮುಂದೂಡಲು ಹಲವು ಬಾರಿ ಮನವಿ ಮಾಡಿದ್ದರು. ಈ ಕುರಿತಂತೆ ರಾಜ್ಯ ಸರ್ಕಾರದ ಜೊತೆಗೆ ಚರ್ಚಿಸಿ ಕೆಎಎಸ್ ಪರೀಕ್ಷೆಗಳನ್ನು ಎರಡು ದಿನಗಳ ಕಾಲ ಮುಂದೂಡಿ ಕರ್ನಾಟಕ ಲೋಕಸೇವಾ ಆಯೋಗದಿಂದ ಪ್ರಕಟಣೆ ಹೊರಬಿದ್ದಿದೆ. 

ಭಾರತೀಯ ಅನಿಲ ನಿಗಮದಲ್ಲಿ ಖಾಲಿ ಇರುವ ಕಿರಿಯ ಲೆಕ್ಕಿಗ, ಲೆಕ್ಕ ಸಹಾಯಕ, ಜೆಇ ಸೇರಿದಂತೆ 391ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯನ್ನು ದಿನಾಂಕ:25-08-2024ರಂದು ನಡೆಸಲು ನಿಗದಿಪಡಿಸಲಾಗಿತ್ತು. ಸದರಿ ದಿನದಂದು ಐ.ಬಿ.ಪಿ.ಎಸ್. ಪರೀಕ್ಷೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ, ಮಾನ್ಯ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚಿಸಲಾಗಿ ಸದರಿ ಪೂರ್ವಭಾವಿ ಪರೀಕ್ಷೆಗೆ ಆಯೋಗವು ಎಲ್ಲಾ ಪರೀಕ್ಷಾ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಕಾಲಾವಕಾಶ ನೀಡದೆ, ಬೇರೆ ಪರೀಕ್ಷೆಗಳೊಂದಿಗೆ Overlap ಆಗದಂತೆ ಅಲ್ಪಕಾಲ ಮುಂದೂಡಲು ನಿರ್ಧರಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ದಿನಾಂಕ:27-08-2024ರಂದು ಪೂರ್ವಭಾವಿ ಪರೀಕ್ಷೆಯನ್ನು ನಡೆಸಲು ಮರುನಿಗದಿಪಡಿಸಲು ಆಯೋಗವು ತೀರ್ಮಾನಿಸಿದೆ. ಅಭ್ಯರ್ಥಿಗಳು ದಿನಾಂಕ:15-08-2024ರ ನಂತರ ಪ್ರವೇಶ ಪತ್ರವನ್ನು ಆಯೋಗದ ಅಂತರ್ಜಾಲದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಉಳಿದಂತೆ ಯಾವುದೇ ರೀತಿಯ ಬದಲಾವಣೆಗಳು ಇರುವುದಿಲ್ಲ.

ಭಾರತೀಯ ಪಶ್ಚಿಮ ಕೇಂದ್ರ  ರೈಲ್ವೇಯಲ್ಲಿ ಖಾಲಿ ಇರುವ ವಿವಿಧ 3317 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಮುಂದುವರೆಸುತ್ತಾ, ದಿನಾಂಕ:27-08-2024 ಕಾರ್ಯ ನಿರ್ವಹಣಾ (working day) ದಿನವಾಗಿರುವುದರಿಂದ ಈಗಾಗಲೇ ಅಭ್ಯರ್ಥಿಗಳನ್ನು ಹಂಚಿಕೆ ಮಾಡಲಾದ ರಾಜ್ಯದ ಎಲ್ಲಾ ಜಿಲ್ಲೆಗಳ ಪರೀಕ್ಷಾ ಉಪಕೇಂದ್ರಗಳಿಗೆ ವಿಶೇಷ/ಸಾರ್ವತ್ರಿಕ ರಜೆಯನ್ನು ಘೋಷಿಸಲು ಹಾಗೂ ಸದರಿ ಹುದ್ದೆಗೆ ಅರ್ಜಿ ಸಲ್ಲಿಸಿರುವ ರಾಜ್ಯ ಸರ್ಕಾರದ ಸೇವಾನಿರತ ಅಭ್ಯರ್ಥಿಗಳಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಘೋಷಿಸಲು ಕ್ರಮ ಕೈಗೊಳ್ಳಲಾಗುತ್ತದೆ.

Important Link/ ಪ್ರಮುಖ ಲಿಂಕು:

ಅಧಿಕೃತ ಜಾಲತಾಣ/ Website

 

 


Click here to Share:
Bookmark the permalink.

About sdkpscjob

www.kpscjobs.com Educator & Blogger