VIMUL Recruitment 2023: ವಿಜಯಪುರ & ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ
ವಿಜಯಪುರ & ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ವಿಯಯಪುರ ವತಿಯಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಇದರಲ್ಲಿ ಖಾಲಿ ಇರುವ ಒಟ್ಟು 40 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಇದರಲ್ಲಿ ಖಾಲಿ ಇರುವ ಸಹಾಯಕರು, ಕಿರಿಯ ತಾಂತ್ರಿಕರು, ಹಾಲು ರವಾನೆಗಾರರು ಸೇರಿದಂತೆ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಳಗೆ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
KMF VIMUL ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.
ಉದ್ಯೋಗ ಮಾಹಿತಿ: ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 2674 ಗ್ರೂಪ್ ಸಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ಹುದ್ದೆಗಳ ವಿವರ/ Post Details:
ಸಹಾಯಕ ವ್ಯವಸ್ಥಾಪಕರು- 06 |
ತಾಂತ್ರಿಕ ಅಧಿಕಾರಿ- 02 |
ವಿಸ್ತರಣಾಧಿಕಾರಿ ದರ್ಜೆ 3- 08 |
ಕೆಮಿಸ್ಟ್ ದರ್ಜೆ 2 – 03 |
ಕಿರಿಯ ಸಿಸ್ಟಂ ಆಪರೇಟರ್- 03 |
ಆಡಳಿತ ಸಹಾಯಕ ದರ್ಜೆ- 02 |
ಮಾರುಕಟ್ಟೆ ಸಹಾಯಕರು- 02 |
ಕಿರಿಯ ತಾಂತ್ರಿಕರು- 02 |
ಹಾಲು ರವಾನೆಗಾರರು- 06 |
ಒಟ್ಟು ಹುದ್ದೆಗಳು – 40 |
ವೇತನ/ Salary
ಸಹಾಯಕ ವ್ಯವಸ್ಥಾಪಕರು- 52650-97100 |
ತಾಂತ್ರಿಕ ಅಧಿಕಾರಿ- 43100-83900 |
ವಿಸ್ತರಣಾಧಿಕಾರಿ ದರ್ಜೆ 3- 33450-62600 |
ಕೆಮಿಸ್ಟ್ ದರ್ಜೆ 2 – 27650-52650 |
ಕಿರಿಯ ಸಿಸ್ಟಂ ಆಪರೇಟರ್- 27650-52650 |
ಆಡಳಿತ ಸಹಾಯಕ ದರ್ಜೆ- 27650-52650 |
ಮಾರುಕಟ್ಟೆ ಸಹಾಯಕರು- 27650-52650 |
ಕಿರಿಯ ತಾಂತ್ರಿಕರು- 21400-42000 |
ಹಾಲು ರವಾನೆಗಾರರು- 21400-42000 |
ಉದ್ಯೋಗ ಮಾಹಿತಿ: ಇಗ್ನೋದಲ್ಲಿ ಖಾಲಿ ಇರುವ 200 ಕಿರಿಯ ಸಹಾಯಕ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ಅರ್ಹತೆಗಳು/ Eligibility Details
Educational Qualification :
ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ವಿಮುಲ್) ನೇಮಕಾತಿ ಅಧಿಸೂಚನೆಯ ಪ್ರಕಾರ ಪ್ರತಿಯೊಂದು ಪದನಾಮದ ಹುದ್ದೆಗೂ ಪ್ರತ್ಯೇಕ ವಿದ್ಯಾರ್ಹತೆ ನಿಗದಿಪಡಿಸಿದ್ದು ಆಯಾಯ ಹುದ್ದೆಯ ಪದನಾಮಕ್ಕೆ ಅನುಸಾರ ಹತ್ತನೇ, ಪಿಯುಸಿ, ಪದವಿ, ಐಟಿಐ, ಡಿಪ್ಲೊಮಾ, ಸ್ನಾತಕೋತ್ತರ ಮುಗಿದವರಿಗೆ ಉದ್ಯೋಗಾವಕಾಶಗಳು ಇಭ್ಯವಿರುತ್ತವೆ.
Age Limit/ ವಯೋಮಿತಿ:
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ಅಭ್ಯರ್ಥಿಗಳು ಕನಿಷ್ಟ 18 ವರ್ಷವನ್ನು ಪೂರೈಸಿರತಕ್ಕದ್ದು. ಹಾಗೆಯೇ ಗರಿಷ್ಟ ವಯೋಮಿತಿ ಕೆಳಗಿನಂತಿರುತ್ತದೆ.
ಎಸ್.ಸಿ, ಎಸ್.ಟಿ & ಪ್ರವರ್ಗ 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ : 40 ವರ್ಷ
ಇತರೆ ಹಿಂದೂಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ: 38 ವರ್ಷ
ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ : 35 ವರ್ಷ
Application Fee:
1) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ & ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕ ರೂ 500/- & ಬ್ಯಾಂಕ್ ಶುಲ್ಕ ಪ್ರತ್ಯೇಕ
2) ಇತರೆ ವರ್ಗದ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕ ರೂ 1000/- & ಬ್ಯಾಂಕ್ ಶುಲ್ಕ ಪ್ರತ್ಯೇಕ
3)ಅರ್ಜಿ ಶುಲ್ಕವನ್ನು ಪಾವತಿಸುವುದಕ್ಕೆ ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಆನ್ಲೈನ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬೇಕು.
Selection Process/ ಆಯ್ಕೆವಿಧಾನ:
ಈ ನೇಮಕಾತಿಯ ಆಯ್ಕೆಗೆ ಲಿಖಿತ ಪರೀಕ್ಷೆ & ಸಂದರ್ಶನವನ್ನು ನಡೆಸಲಾಗುತ್ತದೆ. ಅದರಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ
ಅರ್ಜಿ ಸಲ್ಲಿಸುವ ವಿಧಾನ/ How to apply
ಈ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 24.03.2023 ರಿಂದ 24.04.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು ಸಂಘದ ವೆಬ್ ಸೈಟ್ www.bimul.coop ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು VIMUL ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಪ್ರಮುಖ ದಿನಾಂಕಗಳು/ Important Dates:
ಅರ್ಜಿ ಹಾಕುವ ಪ್ರಾರಂಭದ ದಿನಾಂಕ : 24-03-2023
ಅರ್ಜಿ ಹಾಕುವ ಕೊನೆಯ ದಿನಾಂಕ: 24-04-2023
Important Links/ ಪ್ರಮುಖ ಲಿಂಕುಗಳು:
Pingback: ಕೇಂದ್ರ ಸರ್ಕಾರದಿಂದ ಖಾಲಿ ಇರುವ 9223 ಹುದ್ದೆಗಳ ನೇರ ನೇಮಕಾತಿಗೆ ಹತ್ತನೇ ಮುಗಿದವರಿಂದ ಅರ್ಜಿ ಆಹ್ವಾನ: CRPF Constable Recruitmen
Pingback: RGUHS ಬೆಂಗಳೂರು ನೇಮಕಾತಿ 2023 : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನೇಮಕಾತಿ ಅಧಿಸೂಚನೆ - KPSC Jobs
Pingback: KPSC ಯಿಂದ 960 ಪ್ರಥಮ ದರ್ಜೆ ಸಹಾಯಕರ (FDA) ನೇಮಕಾತಿ ಕುರಿತಂತೆ ಮಹತ್ವದ ಪ್ರಕಟಣೆ: Additional Selection List Released - KPSC Jobs
Pingback: เว็บบาคาร่า ไม่มีขั้นต่ำ ยอดนิยม ที่เชื่อถือได้ ต้อง LSM99