ಜಿಲ್ಲಾಧಿಕಾರಿಗಳ ಕಾರ್ಯಲಯದಿಂದ ಅಧಿಸೂಚನೆ- ಲೋಡರ್ಸ್ & ಕ್ಲೀನರ್ಸ್ ಹುದ್ದೆಗಳು- District Office Recruitment 2022
ತುಮಕೂರು ಜಿಲ್ಲಾಧಿಕಾರಿಗಳ ಕಛೇರಿಯಿಂದ ಅಧಿಸೂಚನೆಯನ್ನು ಪ್ರಕಟಿಸಿದ್ದು ಜಿಲ್ಲೆಯ ತುರುವೇಕೆರೆ & ಚಿಕ್ಕನಾಯಕನಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಖಾಲಿ ಇರುವ ಲೋಡರ್ಸ್ & ಕ್ಲೀನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಲೋಡರ್ಸ್ & ಕ್ಲೀನರ್ಸ್ ಹುದ್ದೆಗಳನ್ನು ಮಾಸಿಕ ಗೌರವ ಧನ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಲು ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Application invited from District Office of Tumkur District for filling up Loders & Cleaners in Turuvekre & Chikkanayakanahalli Pattana Panchayath Tumkur District on Temporary basis. Interested and eligible local candidates can apply for such posts through application format.
ವಿದ್ಯಾರ್ಹತೆ ಇಲ್ಲದೇ ಕನ್ನಡ ಮಾತನಾಡಲು ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಈ ನೇಮಕಾತಿಯ ಸಂಪೂರ್ಣ ವಿವರಗಳನ್ನು ಇಲ್ಲಿ ಪಡೆಯಿರಿ.
Post Details/ ಹುದ್ದೆಗಳ ವಿವರ:
ತುರವೇಕೆರೆ : ತುರುವೇಕೆರೆ ಪಟ್ಟಣ ಪಂಚಾಯತಿಯಲ್ಲಿ ಲೋಡರ್ಸ್ ಹುದ್ದೆಗಳು ಮಾತ್ರ ಖಾಲಿ ಇದ್ದು ಒಟ್ಟು 04 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.
ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಖಾಲಿ ಇರುವ ಲೋಡರ್ಸ್ & ಕ್ಲೀನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಲೋಡರ್ಸ್ ಹುದ್ದೆಗಳ ಸಂಖ್ಯೆ 06 ಹಾಗೂ ಕ್ಲೀನರ್ಸ್ ಹುದ್ದೆಗಳ ಸಂಖ್ಯೆ 01
Age limit/ ವಯೋಮಿತಿ:
ಅಧಿಕೃತ ನೋಟಿಫಿಕೇಶನ್ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ವರ್ಷ ತುಂಬಿರಬೇಕು & ಗರಿಷ್ಟ ವಯೋಮಿತಿ 55 ವರ್ಷವನ್ನು ಮೀರಿರಬಾರದು.
Salary/ ವೇತನ:
ಅಧಿಕೃತ ನೋಟಿಫಿಕೇಶನ್ ಪ್ರಕಾರ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಕಾರ್ಮಿಕರಿಗೆ ಸರ್ಕಾರದ ನಿಯಮಾನುಸಾರ ನೀಡುವ ವೇತನವನ್ನು ನೀಡಲಾಗುತ್ತದೆ
Education / ವಿದ್ಯಾರ್ಹತೆ:
ಅಧಿಕೃತ ನೋಟಿಫಿಕೇಶನ್ ಪ್ರಕಾರ ಅಭ್ಯರ್ಥಿಗಳು ಯಾವುದೇ ವಿದ್ಯಾರ್ಹತೆ ಇಲ್ಲದಿದ್ದರೂ ಅರ್ಜಿ ಹಾಕಬಹುದು.
ಕನ್ನಡ ಮಾತನಾಡಲು ಗೊತ್ತಿರಬೇಕು.
ಸಂಬಂಧಿಸಿದ ಪುರಸಭೆಯಲ್ಲಿ ಕೆಲಸ ಮಾಡುತ್ತಿರುವ ಯಾವುದೇ ನೌಕರರು ಮಾತ್ರ ಅರ್ಜಿ ಸಲ್ಲಿಸಬಹುದು.
Application fees/ ಅರ್ಜಿ ಶುಲ್ಕ:
ಅಧಿಕೃತ ನೋಟಿಫಿಕೇಶನ್ ಪ್ರಕಾರ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ನಿಗದಿಪಡಿಸಿಲ್ಲ.
Application Submission Method/ ಅರ್ಜಿ ಸಲ್ಲಿಸುವ ವಿಧಾನ :
ಅಧಿಕೃತ ನೋಟಿಫಿಕೇಶನ್ ಪ್ರಕಾರ ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಡೆದು ಭರ್ತಿ ಮಾಡಿ, ಅರ್ಜಿ ನಮೂನೆಯ ಜೊತೆಗೆ ಎಲ್ಲ ದಾಖಲಾತಿಗಳೊಂದಿಗೆ 31-07-2022 ರೊಳಗೆ ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ತುಮಕೂರು ಜಿಲ್ಲೆಗೆ ಸಲ್ಲಿಸತಕ್ಕದ್ದು.
Last date apply/ ಕಡೆಯ ದಿನಾಂಕ:
ಅಧಿಕೃತ ನೋಟಿಫಿಕೇಶನ್ ಪ್ರಕಾರ 31-07-2022 ಕೊನೆಯ ದಿನಾಂಕವಾಗಿರುತ್ತದೆ.
Important Link
Notification & Application Format
ಹೆಚ್ಚಿನ ವಿವರಗಳಿಗೆ ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ತುಮಕೂರು ಜಿಲ್ಲೆಯನ್ನು ಸಂಪರ್ಕಿಸುವುದು