ಕರ್ನಾಟಕ ಆರ್ಥಿಕ ಇಲಾಖೆಯಲ್ಲಿ ಖಾಲಿ ಇರುವ ಅಸೋಸಿಯೇಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ವೇತನ ರೂ. 50000-60000 : FPI Benagluru Recruitment Notification 2023
ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಅಡಿಯಲ್ಲಿ ಬರುವ ವಿತ್ತೀಯ ಕಾರ್ಯನೀತಿ ಸಂಸ್ಥೆಯಲ್ಲಿ (ವಿಕಾಸಂ) ಖಾಲಿ ಇರುವ ಸಂಶೋಧನಾ ಫೆಲೋ & ಸಂಶೋಧನಾ ಅಸೋಸಿಯೇಟ್ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಇದರಲ್ಲಿ ಖಾಲಿ ಇರುವ ಸಂಶೋಧನಾ ಫೆಲೋ & ಸಂಶೋಧನಾ ಅಸೋಸಿಯೇಟ್ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು 30-06-2023 ಕೊನೆಯ ದಿನಾಂಕವಾಗಿದ್ದು, ಈ ನೇಮಕಾತಿ ಕುರಿತು ಹೆಚ್ಚಿನ ವಿವರಗಳಿಗೆ ಇಲ್ಲಿ ತಿಳಿಯಬಹುದು. ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ವಿತ್ತೀಯ ಕಾರ್ಯನೀತಿ ಸಂಸ್ಥೆ (ವಿಕಾಸಂ) – ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಸಂಶೋಧನಾ ಫೆಲೋ & ಸಂಶೋಧನಾ ಅಸೋಸಿಯೇಟ್ ಹುದ್ದೆಗಳಿಗೆ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಕುರಿತಂತೆ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.
ವೇತನ ಶ್ರೇಣಿ/ Salary Scale
ಸಂಶೋಧನಾ ಫೆಲೋ: ಪ್ರತಿ ತಿಂಗಳು ರೂ. 55000-60000 ನೀಡಲಾಗುತ್ತದೆ.
ಸಂಶೋಧನಾ ಅಸೋಸಿಯೇಟ್ : ಪ್ರತಿ ತಿಂಗಳು ರೂ. 35000-40000 ನೀಡಲಾಗುತ್ತದೆ.
Post Details/ ಹುದ್ದೆಗಳ ವಿವರ:
ಹುದ್ದೆಯ ಹೆಸರು : ಸಂಶೋಧನಾ ಫೆಲೋ & ಸಂಶೋಧನಾ ಅಸೋಸಿಯೇಟ್
ಹುದ್ದೆಗಳ ಸಂಖ್ಯೆ : 02
ಉದ್ಯೋಗ ಸ‍್ಥಳ: ಬೆಂಗಳೂರು
ಗುತ್ತಿಗೆಯ ಅವಧಿ: 02 ವರ್ಷ
ಸಂಶೋಧನಾ ಫೆಲೋ – 01 ಹುದ್ದೆ |
ಸಂಶೋಧನಾ ಅಸೋಸಿಯೇಟ್- 01 ಹುದ್ದೆ |
ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಗ್ರೂಪ್ ಎ & ಬಿ ಬೋಧಕೇತರ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ವಯೋಮಿತಿ/ Age limit (As on 30-06-2023)
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಗರಿಷ್ಟ 40 ವರ್ಷವನ್ನು ಮೀರುವಂತಿಲ್ಲ.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ
ಇತರೆ ಹಿಂದೂಳಿದ ವರ್ಗ (OBC) : 03 ವರ್ಷ
ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.
ಶೈಕ್ಷಣಿಕ ಅರ್ಹತೆಗಳು/ Educational Qualification:
ಟಿಪ್ಪಣಿ: ಯಾವುದೇ ಅಭ್ಯರ್ಥಿಯು, ಮೇಲಿನ ವಿಷಯಗಳಲ್ಲಿ ಉನ್ನತ ವ್ಯಾಸಂಗ ಮತ್ತು ವಿಶೇಷ ಅಧ್ಯಯನಗಳನ್ನು ಮಾಡಲು ಬಯಸಿದರೆ, ನೇಮಕಾತಿ ಉದ್ದೇಶಗಳಾದ ಸಂಶೋಧನೆ ಮತ್ತು ಇತರ ಚಟುವಟಿಕೆಗಳಿಗೆ ಮತ್ತು ನಿರೀಕ್ಷಿಸಲ್ಪಟ್ಟ ಫಲಿತಾಂಶಗಳ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವಾಗದಿದ್ದಲ್ಲಿ, ಸಂಸ್ಥೆಯು ಪ್ರೋತ್ಸಾಹಿಸಲಿದೆ. ಅರ್ಹತೆ:
ಕೃಷಿ ಇಲಾಖೆಯಲ್ಲಿ ಖಾಲಿ ಇರುವ 260 ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ಸಂಶೋಧನಾ ಫೆಲೋ (Research Fellow):
ಎ) ಅಭ್ಯರ್ಥಿಯು ಅರ್ಥಶಾಸ್ತ್ರದ ಯಾವುದೇ ವಿಭಾಗದಲ್ಲಿ ವಿಶೇಷ ಪರಿಣಿತಿ, ಬಿಸಿನೆಸ್ ಮ್ಯಾನೆಜ್‌ಮೆಂಟ್, ವಾಣಿಜ್ಯ ಶಾಸ್ತ್ರ ಸಂಖ್ಯಾ ಶಾಸ್ತ್ರ (ಸ್ಟ್ಯಾಟಿಸ್ಟಿಕ್ಸ್) ಇನ್‌ಫರ್ಮೇಶನ್ ಟೆಕ್ನಾಲಾಜಿ, ಮಾನವ ಸಂಪನ್ಮೂಲಗಳು, ಸಾರ್ವಜನಿಕ ಆಡಳಿತ, ಡೆವಲೆಪ್‌ಮೆಂಟ್ ಸ್ಟಡೀಸ್, ಪಾಪುಲೇಶನ್ ಸ್ಟಡೀಸ್, ಪಬ್ಲಿಕ್ ಪಾಲಿಸಿ, ಅಗ್ರಿಕಲ್ಮರ್ ಎಕಾನಾಮಿಕ್ಸ್ ಮತ್ತು ಸ್ಟ್ಯಾಟಿಸ್ಟಿಕ್ಸ್ ವಿಷಯಗಳಲ್ಲಿ ಕನಿಷ್ಠ ಒಟ್ಟು 60% ಅಂಕಗಳೊಂದಿಗೆ ಅಥವಾ ಸಮಾನ ಶ್ರೇಣಿಯೊಂದಿಗೆ, ಮಾನ್ಯತೆ ಹೊಂದಿರುವ ಯಾವುದೇ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಹೊಂದಿರಬೇಕು.
ಬಿ) ಅಭ್ಯರ್ಥಿಯು ಪಿಎಚ್‌ಡಿ ಅಥವಾ ಎಂ.ಫಿಲ್ ವಿದ್ಯಾರ್ಹತೆ ಹೊಂದಿರಬೇಕು ಅಥವಾ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರಬೇಕು. ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶಾಶ್ವತ ನೋಂದಣಿ ಪಡೆದಿರಬೇಕು.
ಸಿ) ಅಭ್ಯರ್ಥಿಯು ಕನಿಷ್ಠ 2 ವರ್ಷಗಳ ಸಂಶೋಧನಾ ಅನುಭವ ಹೊಂದಿರಬೇಕು.
ಡಿ) ಕಂಪ್ಯೂಟರ್‌ಗಳಲ್ಲಿ ಎಂಎಸ್ ಆಫೀಸ್ ಬಳಕೆ, ವಿಶೇಷವಾಗಿ ಸಮಾಜ ವಿಜ್ಞಾನ ಸಂಶೋಧನಾ ಕ್ಷೇತ್ರಗಳಲ್ಲಿ ಬಳಸಲ್ಪಡುವ ಸಾಫ್ಟ್ವೇರ್ ಪ್ಯಾಕೇಜುಗಳಾದ ಇ-ವ್ಯೂಸ್, ಸ್ಮಾಟಾ (STATA), ಎಸ್ ಪಿ ಎಸ್ ಎಸ್(SPSS), ಇತ್ಯಾದಿಗಳನ್ನು ಸಂಶೋಧನೆಯಲ್ಲಿ ಬಳಸುವ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಇ) ಬೋಧನಾ ಅನುಭವ ಮತ್ತು ದತ್ತಾಂಶ ವಿಶ್ಲೇಷಣಾ ತಂತ್ರಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಎಫ್) ರೆಫರಿಡ್ ಜರ್ನಲ್‌ಗಳಲ್ಲಿ ಸಂಶೋಧನೆ ಲೇಖನಗಳನ್ನು ಪ್ರಕಟಿಸಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಜಿ) ವಿತ್ತೀಯ ಕಾರ್ಯನೀತಿ ಸಂಸ್ಥೆಯು ಕೈಗೊಳ್ಳುವ ಸಂಶೋಧನೆ / ತರಬೇತಿ | ಸಮಾಲೋಚನೆಗಳ ನಿರ್ದಿಷ್ಟ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಉದಾಹರಣೆಗೆ ತೆರಿಗೆ (ಜಿ.ಎಸ್.ಟಿ & ಅಬಕಾರಿ), ವೆಚ್ಚ, ಸಾಲ ಮತ್ತು ಹೊಣೆಗಾರಿಕೆಗಳು, ವಿತ್ತೀಯ ವಿಕೇಂದ್ರಿಕರಣ, ಲೆಕ್ಕ ಪತ್ರ ಮತ್ತು ಲೆಕ್ಕ ಪರಿಶೋಧನೆ ಮತ್ತು ಯೋಜನಾ ನಿರ್ವಹಣೆ (ಇವುಗಳ ವಿವರಗಳನ್ನು ಅರ್ಜಿ ನಮೂನೆಯ ಅನುಬಂಧದಲ್ಲಿ ನೀಡಲಾಗಿದೆ)
ಎಚ್) ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಸಮಾನ ಅರ್ಹತೆ ಹೊಂದಿದ್ದಲ್ಲಿ ಕನ್ನಡ ಭಾಷೆಯ ಮೇಲೆ ಪ್ರಭುತ್ವವನ್ನು ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಸಂಶೋಧನಾ ಅಸೋಸಿಯೇಟ್ (Research Associate):
ಎ) ಅರ್ಜಿದಾರರು ಅರ್ಥಶಾಸ್ತ್ರದ ಯಾವುದೇ ವಿಭಾಗದಲ್ಲಿ ವಿಶೇಷ ಪರಿಣಿತಿ, ಬಿಸಿನೆಸ್ ಮ್ಯಾನೆಜ್‌ಮೆಂಟ್, ವಾಣಿಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ(ಸ್ಟ್ಯಾಟಿಸ್ಟಿಕ್ಸ್) ಇನ್‌ಫರ್ಮೇಶನ್ ಟೆಕ್ನಾಲಾಜಿ, ಮಾನವ ಸಂಪನ್ಮೂಲಗಳು, ಸಾರ್ವಜನಿಕ ಆಡಳಿತ, ಡೆವಲೆಪ್‌ಮೆಂಟ್ ಸ್ಟಡೀಸ್, ಪಾಪುಲೇಶನ್ ಸ್ಟಡೀಸ್, ಪಬ್ಲಿಕ್ ಪಾಲಿಸಿ, ಅಗ್ರಿಕಲ್ಮರ್ ಎಕಾನಾಮಿಕ್ಸ್ ಮತ್ತು ಸ್ಟ್ಯಾಟಿಸ್ಟಿಕ್ಸ್ ಪರಿಣಿತಿ ಕ್ಷೇತ್ರಗಳ ವಿಷಯಗಳಲ್ಲಿ ಕನಿಷ್ಠ ಒಟ್ಟು 55% ಅಂಕಗಳೊಂದಿಗೆ ಅಥವಾ ಸಮಾನ ಶ್ರೇಣಿಯೊಂದಿಗೆ, ಮಾನ್ಯತೆ ಹೊಂದಿರುವ ಯಾವುದೇ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಹೊಂದಿರಬೇಕು.
ಬಿ) ಸಂಶೋಧನೆ ಲೇಖನಗಳನ್ನು ಪ್ರಕಟಿಸಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಸಿ) ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಸಮಾನ ಅರ್ಹತೆ ಹೊಂದಿದ್ದಲ್ಲಿ ಕನ್ನಡ ಭಾಷೆಯ ಮೇಲೆ ಪ್ರಭುತ್ವವನ್ನು ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಹುದ್ದೆಯ ಅವಧಿ/ Period of Contract:
ಸಂಶೋಧನಾ ಫೆಲೋ ಮತ್ತು ಸಂಶೋಧನಾ ಅಸೋಸಿಯೇಟ್‌ಗಳ ಆರಂಭಿಕ ನೇಮಕಾತಿ ಅವಧಿಯು 2 ವರ್ಷಗಳಾಗಿದ್ದು, ಕಾರ್ಯಕ್ಷಮತೆಯ ಮೌಲ್ಯಮಾಪನವನ್ನು ಆಧರಿಸಿ ಮತ್ತೆ 2 ವರ್ಷಗಳವರೆಗೆ ವಾರ್ಷಿಕವಾಗಿ ವಿಸ್ತರಿಸಬಹುದಾಗಿದೆ. ಒಟ್ಟಾರೆ ಹುದ್ದೆಯ ಅವಧಿಯು ಗರಿಷ್ಠ 4 ವರ್ಷಗಳ ಅವಧಿಗೆ ಮಾತ್ರ ಸೀಮಿತವಾಗಿದೆ.
ಅರ್ಜಿ ಶುಲ್ಕ/ Application Fees:
ಅರ್ಜಿ ಶುಲ್ಕವಿರುವುದಿಲ್ಲ
ಆಯ್ಕೆ ವಿಧಾನ/ Selection Procedure:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ & ಸಂದರ್ಶನದ ಮೂಲಕ ಆಯ್ಕೆಮಾಡಲಾಗುತ್ತದೆ.
ಅರ್ಜಿ ಹಾಕುವ ವಿಧಾನ/ Application Submission Method:
ಆಸಕ್ತ ಹಾಗೂ ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿನಮೂನೆ, ಇತ್ತೀಚಿನ ಫೋಟೊ, ಅಗತ್ಯ ವಿದ್ಯಾರ್ಹತೆ, ಅನುಭವ & ಇನ್ನಿತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ ದಿನಾಂಕ: 30.06.2023 ರ ಒಳಗಾಗಿ ನಿರ್ದೇಶಕರು, ವಿತ್ತಿಯ ಕಾರ್ಯನೀತಿ ಸಂಸ್ಥೆ, ಕೆಂಗೇರಿ ಪೋಸ್ಟ್, ಬೆಂಗಳೂರು- ಮೈಸೂರು ರಸ್ತೆ, ಕೆಂಗೇರಿ, ಬೆಂಗಳೂರು-560060 ಈ ವಿಳಾಸಕ್ಕೆ ಸಲ್ಲಿಸುವುದು ಅಥವಾ ಇಮೇಲ್ ಮುಖಾಂತರ ಕಳುಹಿಸಬಹುದು. ಈ ನೋಟಿಫಿಕೇಶನ್ ಲಿಂಕ್ ಡೌನ್ಲೋಡ್ ಮಾಡಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
Important Date/ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 24-05-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-06-2023
Important Links/ ಪ್ರಮುಖ ಲಿಂಕುಗಳು:
ಅರ್ಜಿ ನಮೂನೆ/ Application Format:
Pingback: ಕರ್ನಾಟಕ ಆರ್ಥಿಕ ಇಲಾಖೆಯಲ್ಲಿ ಖಾಲಿ ಇರುವ ಅಸೋಸಿಯೇಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ವೇತನ ರೂ. 50000-60000 : ಎಫ್
Pingback: ಕರ್ನಾಟಕ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ 806 ಕಛೇರಿ ಸಹಾಯಕ ಸೇರಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾ
Pingback: Alamo 15 Trigger