ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ (6-8 ನೇ ತರಗತಿ) ಖಾಲಿ ಇರುವ 15000 ಶಿಕ್ಷಕರ ನೇಮಕಾತಿಗೆ ಕರ್ನಾಟಕ ರಾಜ್ಯಪತ್ರದಲ್ಲಿ ದಿನಾಂಕ 20-01-2022ರಂದು ಅಧಿಸೂಚನೆ ಹೊರಬಿದ್ದಿದೆ. ಈ ಮೂಲಕ ವೃಂದ & ನೇಮಕಾತಿ ನಿಯಮಗಳನ್ನು ರೂಪಿಸಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ನೇಮಕಾತಿ ತಿದ್ದುಪಡಿ ನಿಯಮಗಳು 2020 ಅನ್ನು ರಚಿಸಿ ಅಧಿಸೂಚನೆ ಹೊಡಿಸಲಾಗಿದೆ.
ಈ ಹಿಂದೆ ಮಾಡಲಾಗಿದ್ದ ಕರಡು ನಿಯಮಗಳಿಗೆ ಕೆಲವು ವಿಷಯಗಳ ಅಭ್ಯರ್ಥಿಗಳಿಂದ ವಿರೋಧ ವ್ಯಕ್ತವಾಗಿತ್ತು ಕೆಲವು ಶೈಕ್ಷಣಿಕ ಅರ್ಹತೆ ಹೊಂದಿದ್ದರೂ ಅರ್ಜಿ ಸಲ್ಲಿಸುವುದರಿಂದ ವಂಚಿತರಾಗುತ್ತಿದ್ದರೂ ಆ ಕಾರಣಕ್ಕಾಗಿ ಸರ್ಕಾರ ನಿಯಮಗಳಲ್ಲಿ ಸೂಕ್ತ ತಿದ್ದುಪಡಿ ತಂದು ಹೊಸ ನಿಯಮಾವಳಿಗಳ ಕರಡನ್ನು ಬಿಡುಗಡೆ ಮಾಡಿದೆ.
ಇದರಲ್ಲಿ 10,000 ಹುದ್ದೆಗಳು ರಾಜ್ಯ ವಂದಕ್ಕೆ ಸೇರಿಸುತ್ತವೆ & ಇನ್ನುಳಿದ 5000 ಹುದ್ದೆಗಳು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಾಗಿವೆ. ಈ ಹುದ್ದೆಗಳ ನೇಮಕಾತಿ ಕುರಿತಂತೆ ವಿವರಗಳನ್ನು ಇಲ್ಲಿ ಚರ್ಚಿಸೋಣ.
ಶೈಕ್ಷಣಿಕ ವಿದ್ಯಾರ್ಹತೆ:
ಪದವಿಯಲ್ಲಿ ಕನಿಷ್ಟ ಶೇ. 50 ಅಂಕಗಳೊಂದಿಗೆ ಉತ್ತೀರ್ಣ & ಪ್ರಾಥಮಿಕ ಶಿಕ್ಷಣದಲ್ಲಿ ಎರಡು ವರ್ಷಗಳ ಡಿಪ್ಲೋಮ ಉತ್ತೀರ್ಣರಾಗಿರಬೇಕು. (Graduate Degree & 2 Years DEd with 50% marks)
ಅಥವಾ
ಪಿಯುಸಿಯಲ್ಲಿ ಕನಿಷ್ಟ ಶೇ. 50 ಅಂಕಗಳೊಂದಿಗೆ ಉತ್ತೀರ್ಣ & ನಾಲ್ಕು ವರ್ಷಗಳ ಬ್ಯಾಚುಲರ್ ಆಫ್ ಎಲಿಮೆಂಟರಿ ಎಜುಕೇಷನ್ ಪದವಿ/ ನಾಲ್ಕು ವರ್ಷಗಳ ಬ್ಯಾಚುಲರ್ ಆಫ್ ಎಜುಕೇಷನ್ ನಲ್ಲಿ ಉತ್ತೀರ್ಣರಾಗಿರಬೇಕು. (Degree & 4 year Bachelor of Elementary Education with 50& of marks)
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ 1/ ವಿಕಲಚೇತನ ಅಭ್ಯರ್ಥಿಗಳಿಗೆ ಶೇ. 45 ಅಂಕಗಳನ್ನು ಪಿಯುಸಿ / ಪದವಿಯಲ್ಲಿ ಪಡೆದಿದ್ದರೆ ಅರ್ಹರಾಗಿರುತ್ತಾರೆ.
ಮೇಲ್ಕಾಣಿಸಿದ ವಿದ್ಯಾರ್ಹತೆಯೊಂದಿಗೆ ಕರ್ನಾಟಕ ಅಥವಾ ಭಾರತ ಸರ್ಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಪತ್ರಿಕೆ 2 ರಲ್ಲಿ ಅರ್ಹತೆ ಗಳಿಸಿರಬೇಕು.
ಭಾಷಾ ಶಿಕ್ಷಕರು:
ಸಂಬಂಧಿಸಿದ ಭಾಷಾ ವಿಷಯದ ಜೊತೆಗೆ ಕೆಳಗೆ ನೀಡಲಾಗಿರುವ ಯಾವುದಾದರೊಂದು ವಿಷಯವನ್ನು ಪದವಿಯಲ್ಲಿ ಐಚ್ಛಿಕ ವಿಷಯವನ್ನಾಗಿ ಮೂರು ವರ್ಷ ಅಧ್ಯಯನ ಮಾಡಿರಬೇಕು.
ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ, ಉರ್ದು, ತೆಲುಗು, ತಮಿಳು, ಮಲಯಾಳಿ. ಕೊಂಕಣಿ, ಸಂಸ್ಕೃತ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ, ಸಮಾಜಶಾಸ್ತ್ರ
Karnataka TET Previous Old question Papers/ KAR-TET Model Question Paper:
ಗಣಿತ & ವಿಜ್ಞಾನ ಶಿಕ್ಷಕರು:
ಪದವಿಯಲ್ಲಿ ಗಣಿತ (Mathematics) , ಬೌತಶಾಸ್ತ್ರ (Physics) ವನ್ನು ಐಚ್ಚಿಕವನ್ನಾಗಿ ಕಡ್ಡಾಯವಾಗಿ ಓದಿರಬೇಕು ಅದರ ಜೊತೆಗೆ ಮುಂದೆ ನೀಡಲಾಗಿರುವ ಯಾವುದಾದರೊಂದ ವಿಷಯವನ್ನು ಓದಿರಬೇಕು. Chemistry, Computer Science, Electronics, Statastics, Geography, Geology & Biotechnology
ಅಥವಾ
ಇಂಜಿನಿಯರಿಂಗ್ ಅಭ್ಯರ್ಥಿಗಳು (Graduates in Architecture ಹೊರತುಪಡಿಸಿ) Mathematics ಅನ್ನು ಕನಿಷ್ಟ ಮೂರು/ ನಾಲ್ಕು ಸೆಮಿಸ್ಟರ್ ಗಳು ಓದಿ ಇನ್ನುಳಿದ ಸೆಮಿಸ್ಟರ್ ಗಳಲ್ಲಿ Applied Mathematics ಅನ್ನು ಕಡ್ಡಾಯವಾಗಿ ಓದಿರಬೇಕು.
Biological Science Teacher :
ಪದವಿಯಲ್ಲಿ Chemistry ಯನ್ನು ಕಡ್ಡಾಯವಾಗಿ ಮೂರು ವರ್ಷ ಓದಿರಬೇಕು ಜೊತೆಗೆ Botany/ Zoology/ Sericulture/ Environmental Science/ Genetics/ Mathematics ನಲ್ಲಿ ಯಾವುದಾದರೂ ಎರಡು ವಿಷಯಗಳಲ್ಲಿ ಓದಿರಬೇಕು.
ಸಮಾಜ ವಿಜ್ಞಾನ ಶಿಕ್ಷಕರು:
History/ Economics/ Geography/ Political Science ನಲ್ಲಿ ಯಾವುದಾದರೂ ಎರಡು ವಿಷಯಗಳನ್ನು ಪದವಿಯಲ್ಲಿ ಓದಿರಬೇಕು
ಅಥವಾ
ಸಮಾಜ ವಿಜ್ಞಾನ ವಿಷಯದಲ್ಲಿ ಒಂದು ವಿಷಯವನ್ನು ಐಚ್ಚಿಕವಾಗಿ ಹಾಗೂ ಭಾಷಾ ವಿಷಯಗಳಲ್ಲಿ ಒಂದು ವಿಷಯವನ್ನು ಐಚ್ಛಿಕವಾಗಿ ಓದಿರಬೇಕು.
Army Public School- 8700 Teachers Recruitment- No need TET- Apply now
ವಯೋಮಿತಿ:
ಕನಿಷ್ಟ ವಯೋಮಿತಿ: 22 ವರ್ಷ
ಸಾಮಾನ್ಯ : 40 ವರ್ಷ
2A/ 2B/ 3A/ 3B : 43 ವರ್ಷ
ಪ.ಜಾ, ಪ.ಪಂ, ಪ್ರವರ್ಗ 1 : 45 ವರ್ಷ
ಆಯ್ಕೆ ವಿಧಾನ:
Competitive Examination | 0.50 |
Marks Secured in TET | 0.20 |
Marks Secured in Graduate Degree | 0.20 |
ಶMarks Secured in Teacher Education Course | 0.10 |
ಪದವಿ ಕಾಲೇಜುಗಳಲ್ಲಿ 9000 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನ- ಸಂಬಳ 32000|
ಪರೀಕ್ಷಾ ವಿಧಾನ:
ಪತ್ರಿಕೆ 1:
ಎಲ್ಲರಿಗೂ ಕಡ್ಡಾಯವಾಗಿರುತ್ತದೆ.
ವಿಷಯ | ಅಂಕಗಳು |
ಸಾಮಾನ್ಯ ಕನ್ನಡ ಭಾಷೆ | 25 |
ಸಾಮಾನ್ಯ ಅಂಗ್ಲ ಭಾಷೆ | 25 |
ಸಾಮಾನ್ಯ ಜ್ಞಾನ | 25 |
ಶೈಕ್ಷಣಿಕ ಮನೋವಿಜ್ಞಾನ & ವಿಕಸನ, ಬೋಧನಾ ವಿಧಾನ | 55 |
ಮೌಲ್ಯ ಶಿಕ್ಷಣ & ಅರೋಗ್ಯ ಶಿಕ್ಷಣ | 15 |
ಗಣಕ & ಪ್ರಬುದ್ದತೆ ಬಗ್ಗೆ | 10 |
ಒಟ್ಟು ಅಂಕಗಳು | 150 |
ಪತ್ರಿಕೆ 2:
ಭಾಷೆ, ಅಂಗ್ಲ ಗಣಿತ & ವಿಜ್ಞಾನ ಹಾಗೂ ಸಮಾಜ ಪಾಠಗಳ ಶಿಕ್ಷಕರಿಗೆ ಮಾತ್ರ | |
ವಿಷಯ | ಅಂಕಗಳು |
ಆಯಾ ವಿಷಯದ ಜ್ಞಾನ –MCQ | 50 |
ಆಯಾ ವಿಷಯದ ಜ್ಞಾನ – ವಿವರಣಾತ್ಮಕ | 100 |
ಒಟ್ಟು | 150 |
ಪೇಪರ್ 2 ರ ಪತ್ರಿಕೆಯಲ್ಲಿ ಕನಿಷ್ಠ ಶೇ. 50 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.
ಪತ್ರಿಕೆ 3: ಭಾಷಾ ಸಾಮರ್ಥ್ಯ ಪರೀಕ್ಷೆ
ಗಣಿತ & ವಿಜ್ಞಾನ ಹಾಗೂ ಸಮಾಜ ಪಾಠಗಳ ಶಿಕ್ಷಕರಿಗೆ ಮಾತ್ರ | |
ವಿಷಯ | ಅಂಕಗಳು |
ಆಯಾ ಬೋಧನಾ ಮಾಧ್ಯಮದ ಬಾಷಾ ಸಾಮರ್ಥ್ಯ – ವಿವರಣಾತ್ಮಕ ಪರೀಕ್ಷೆ (ಭಾಷಾ ಬಳಕೆಯ ಸಾಮರ್ಥ್ಯ, ಗ್ರಹಿಸುವಿಕೆ, ಶಬ್ಧ ಭಂಡಾರ & ಬರವಣಿಗೆ ಸಾಮರ್ಥ್ಯಗಳು | 100 |
ಒಟ್ಟು | 100 |
ಪೇಪರ 3 ರಲ್ಲಿ ಕನಿಷ್ಟ ಶೇ. 60 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.
ಎಲ್ಲಾ ಮೂರು ಪತ್ರಿಕೆಗಳ ಅಂಕಗಳನ್ನು ಆಯ್ಕೆಗೆ ಪರಿಗಣಿಸಲಾಗುವುದು.
Download the Draft Notification