ಕರ್ನಾಟಕದ ಸೌಹಾರ್ದ ಸಹಕಾರ ಬ್ಯಾಂಕ್ ನಲ್ಲಿ ಖಾಲಿ ಇರುವ ಕ್ಲರ್ಕ್, ಅಕೌಂಟೆಂಟ್ & ಸೇವಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ: Karnataka Cooperative Bank Recruitment 2023
ಕರ್ನಾಟಕದ ಸಹಕಾರ ಬ್ಯಾಂಕ್ ನಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಶ್ರೀನಿಧಿ ಸೌಹಾರ್ದ ಕೋಆಪರೇಟಿವ್ ಬ್ಯಾಂಕ್ ನಿಯಮಿತ, ಬೆಂಗಳೂರು ವತಿಯಿಂದ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಶ್ರೀನಿಧಿ ಸೌಹಾರ್ದ ಕೋಆಪರೇಟಿವ್ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವ ಸಹಾಯಕ ವ್ಯವಸ್ಥಾಪಕರು, ಹಿರಿಯ ಸಹಾಯಕರು, ಕಿರಿಯ ಸಹಾಯಕ & ಸೇವಕ ಹುದ್ದೆಗಳ ಭರ್ತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಒಟ್ಟು 18 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ & ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು. 17-07-2023 ಅರ್ಜಿ ಹಾಕಲು ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.
ಶ್ರೀನಿಧಿ ಸೌಹಾರ್ದ ಕೋಆಪರೇಟಿವ್ ಬ್ಯಾಂಕ್ ನಿಯಮಿತ ಬೆಂಗಳೂರು ಇಲ್ಲಿ ಖಾಲಿ ಇರುವ ಕಿರಿಯ ಸಹಾಯಕ & ಸೇವಕ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ/ Post Details
ಶಾಖಾ ವ್ಯವಸ್ಥಾಪಕರು – 03 ಹುದ್ದೆಗಳು |
ಕಂಪ್ಯೂಟರ್ ಪ್ರೊಗ್ರಾಮರ್- 01 ಹುದ್ದೆ |
ಸಹಾಯಕ ವ್ಯವಸ್ಥಾಪಕರು- 05 ಹುದ್ದೆಗಳು |
ಹಿರಿಯ ಸಹಾಯಕರು- 02 ಹುದ್ದೆಗಳು |
ಕಿರಿಯ ಸಹಾಯಕರು – 06 ಹುದ್ದೆಗಳು |
ಸೇವಕರು/ ವಾಹನ ಚಾಲಕರು – 01 ಹುದ್ದೆ |
ವೇತನ ಶ್ರೇಣಿ/ Salary Scale:
ಶಾಖಾ ವ್ಯವಸ್ಥಾಪಕರು – 43100-83900 |
ಕಂಪ್ಯೂಟರ್ ಪ್ರೊಗ್ರಾಮರ್- 43100-83900 |
ಸಹಾಯಕ ವ್ಯವಸ್ಥಾಪಕರು- 37900-70850 |
ಹಿರಿಯ ಸಹಾಯಕರು- 33450-62600 |
ಕಿರಿಯ ಸಹಾಯಕರು – 30350-58250 |
ಸೇವಕರು/ ವಾಹನ ಚಾಲಕರು – 21400-42000 |
ವಿದ್ಯಾರ್ಹತೆ/ Educational Qualification :
ಶ್ರೀನಿಧಿ ಸೌಹಾರ್ದ ಕೋಆಪರೇಟಿವ್ ಬ್ಯಾಂಕ್ ನಿಯಮಿತ, ಬೆಂಗಳೂರು ನೇಮಕಾತಿ ಅಧಿಸೂಚನೆಯ ಪ್ರಕಾರ ಪ್ರತಿಯೊಂದು ಪದನಾಮದ ಹುದ್ದೆಗೂ ಪ್ರತ್ಯೇಕ ವಿದ್ಯಾರ್ಹತೆ ನಿಗದಿಪಡಿಸಿದ್ದು ಆಯಾಯ ಹುದ್ದೆಯ ಪದನಾಮಕ್ಕೆ ಅನುಸಾರ ಕೆಳಕಂಡಂತೆ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಶಾಖಾ ವ್ಯವಸ್ಥಾಪಕರು/ Bank Manager:
ಮಾನ್ಯತೆ ಪಡೆದ ಕರ್ನಾಟಕ ರಾಜ್ಯದ ಅಂಗೀಕೃತ ವಿಶ್ವವಿದ್ಯಾಲಯದಿಂದ ಬ್ಯಾಂಕಿಂಗ್/ ಅಕೌಂಟೆನ್ಸಿ/ ಅರ್ಥಶಾಸ್ತ್ರ/ ಸಂಖ್ಯಾಶಾಸ್ತ್ರ/ ಗಣಿತಶಾಸ್ತ್ರ/ಬ್ಯೂಸಿನೆಸ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಪದವಿ/ ಸ್ನಾತಕೋತ್ತರ ಪದವಿ ಮುಗಿದಿರಬೇಕು. ಸಂಬಂಧಿಸಿದ ಕ್ಷೇತ್ರದಲ್ಲಿ ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು
ಕಂಪ್ಯೂಟರ್ ಪ್ರೋಗ್ರಾಮರ್/ Computer Programmer:
ಮಾನ್ಯತೆ ಪಡೆದ ಕರ್ನಾಟಕ ರಾಜ್ಯದ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಸಿಎ/ ಬಿಟೆಕ್ (ಕಂಪ್ಯೂಟರ್) ಪದವಿ ಮುಗಿದಿರಬೇಕು. ಸಂಬಂಧಿಸಿದ ಕ್ಷೇತ್ರದಲ್ಲಿ ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು
ಸಹಾಯಕ ವ್ಯವಸ್ಥಾಪಕರು/ Assistant Manager:
ಮಾನ್ಯತೆ ಪಡೆದ ಕರ್ನಾಟಕ ರಾಜ್ಯದ ಅಂಗೀಕೃತ ವಿಶ್ವವಿದ್ಯಾಲಯದಿಂದ ಬ್ಯಾಂಕಿಂಗ್/ ಅಕೌಂಟೆನ್ಸಿ/ ಅರ್ಥಶಾಸ್ತ್ರ/ ಸಂಖ್ಯಾಶಾಸ್ತ್ರ/ ಗಣಿತಶಾಸ್ತ್ರ/ಬ್ಯೂಸಿನೆಸ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಪದವಿ/ ಸ್ನಾತಕೋತ್ತರ ಪದವಿ ಮುಗಿದಿರಬೇಕು. ಸಂಬಂಧಿಸಿದ ಕ್ಷೇತ್ರದಲ್ಲಿ ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು
ಹಿರಿಯ ಸಹಾಯಕರು/ Senior Assistant:
ಮಾನ್ಯತೆ ಪಡೆದ ಕರ್ನಾಟಕ ರಾಜ್ಯದ ಅಂಗೀಕೃತ ವಿಶ್ವವಿದ್ಯಾಲಯದಿಂದ ಬ್ಯಾಂಕಿಂಗ್/ ಅಕೌಂಟೆನ್ಸಿ/ ಅರ್ಥಶಾಸ್ತ್ರ/ ಸಂಖ್ಯಾಶಾಸ್ತ್ರ/ ಗಣಿತಶಾಸ್ತ್ರ/ಬ್ಯೂಸಿನೆಸ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಪದವಿ/ ಸ್ನಾತಕೋತ್ತರ ಪದವಿ ಮುಗಿದಿರಬೇಕು. ಸಂಬಂಧಿಸಿದ ಕ್ಷೇತ್ರದಲ್ಲಿ ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು.
ಕಿರಿಯ ಸಹಾಯಕರು/Clerk:
ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ಸೇವಕ/Peon:
ಹತ್ತನೇ/ ಪಿಯುಸಿ ವಿದ್ಯಾರ್ಹತೆ & ದ್ವಿಚಕ್ರ & ನಾಲ್ಕು ಚಕ್ರದ ವಾಹನ ಪರವಾನಗಿ ಇರಬೇಕು.
ಆರೋಗ್ಯ & ಕುಟುಂಬ ಇಲಾಖೆಯಲ್ಲಿ ಖಾಲಿ ಇರುವ ಅಟೆಂಡೆಂಟ್, ತಾಂತ್ರಿಕ ಸಹಾಯಕ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Age Limit/ ವಯೋಮಿತಿ:
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ಅಭ್ಯರ್ಥಿಗಳು ಕನಿಷ್ಟ 18 ವರ್ಷವನ್ನು ಪೂರೈಸಿರತಕ್ಕದ್ದು.
ಹಾಗೆಯೇ ಗರಿಷ್ಟ ವಯೋಮಿತಿ ಕೆಳಗಿನಂತಿರುತ್ತದೆ.
ಎಸ್.ಸಿ, ಎಸ್.ಟಿ & ಪ್ರವರ್ಗ 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ : 40 ವರ್ಷ
ಇತರೆ ಹಿಂದೂಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ: 38 ವರ್ಷ
ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ : 35 ವರ್ಷ
ಅರ್ಜಿ ಶುಲ್ಕ/ Application Fee:
1) 1 ರಿಂದ 4 ಕ್ರಮ ಸಂಖ್ಯೆಯ ಹುದ್ದೆಗಳು: ಅರ್ಜಿ ಶುಲ್ಕ ರೂ 300/- & ಬ್ಯಾಂಕ್ ಶುಲ್ಕ ಪ್ರತ್ಯೇಕ
2) ಸೇವಕ ಹುದ್ದೆಗಳು : ಅರ್ಜಿ ಶುಲ್ಕ ರೂ 150/- & ಬ್ಯಾಂಕ್ ಶುಲ್ಕ ಪ್ರತ್ಯೇಕ
ಅರ್ಜಿ ಶುಲ್ಕವನ್ನು ಶ್ರೀನಿಧಿ ಸೌಹಾರ್ದ ಕೋಆಪರೇಟಿವ್ ಬ್ಯಾಂಕ್ ನಿಯಮಿತ, ಬೆಂಗಳೂರು ಅವರ ಹೆಸರಿಗೆ ಪಾವತಿಯಾಗುವಂತೆ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕು.
Selection Process/ ಆಯ್ಕೆವಿಧಾನ:
ಈ ನೇಮಕಾತಿಯ ಆಯ್ಕೆಗೆ ಲಿಖಿತ ಪರೀಕ್ಷೆ & ಸಂದರ್ಶನದವನ್ನು ನಡೆಸಲಾಗುತ್ತದೆ. ಅದರಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ
ಅರ್ಜಿ ಸಲ್ಲಿಸುವ ವಿಧಾನ/ How to apply
ಅರ್ಜಿ ನಮೂನೆಯನ್ನು ಶ್ರೀನಿಧಿ ಸೌಹಾರ್ದ ಕೋಆಪರೇಟಿವ್ ಬ್ಯಾಂಕ್ ನಿಯಮಿತ, ಬೆಂಗಳೂರು ಅದರ ಅಧಿಕೃತ ವೆಬ್ಸೈಟ್ ನಲ್ಲಿ ಪಡೆಯಬಹುದು & ನಮೂನೆಯ ಅಂಕಣಗಳನ್ನು ಸಂಪೂರ್ಣವಾಗಿ ತುಂಬಿ ಇದಕ್ಕೆ ಇತ್ತೀಚೆನ ಭಾವಚಿತ್ರ & ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಲಕೋಟೆಯ ಮೇಲೆ ಯಾವ ಹುದ್ದೆಗ ಅರ್ಜಿ ಸಲ್ಲಿಸುತ್ತಿದ್ದೀರಿ ಎಂದು ಸ್ಪಷ್ಟವಾಗಿ ನಮೂದಿಸಿ ದಿನಾಂಕ 17-07-2023 ರ ಒಳಗಾಗಿ ಶ್ರೀನಿಧಿ ಸೌಹಾರ್ದ ಕೋಆಪರೇಟಿವ್ ಬ್ಯಾಂಕ್ ನಿಯಮಿತ, ಆಡಳಿತ ಕಛೇರಿ, ನಂ 113, ಆರ್.ವಿ ರಸ್ತೆ,ವಿವಿ ಪುರಂ ಬೆಂಗಳೂರು – 560004 ಇಲ್ಲಿಗೆ ರಿಜಿಸ್ಟರ್ ಪೋಸ್ಟ್/ ಖುದ್ದಾಗಿ ಸಲ್ಲಿಸಬಹುದಾಗಿರುತ್ತದೆ.
ಪ್ರಮುಖ ದಿನಾಂಕಗಳು/ Important Dates:
ಅರ್ಜಿ ಹಾಕುವ ಪ್ರಾರಂಭದ ದಿನಾಂಕ : 02-07-2023
ಅರ್ಜಿ ಹಾಕುವ ಕೊನೆಯ ದಿನಾಂಕ: 17-07-2023
Important Links/ ಪ್ರಮುಖ ಲಿಂಕುಗಳು:
ಅರ್ಜಿ ನಮೂನೆ/ Application Format
Pingback: ಕರ್ನಾಟಕದ ಸೌಹಾರ್ದ ಸಹಕಾರ ಬ್ಯಾಂಕ್ ನಲ್ಲಿ ಖಾಲಿ ಇರುವ ಕ್ಲರ್ಕ್, ಅಕೌಂಟೆಂಟ್ ಮತ್ತು ಸೇವಕ ಹುದ್ದೆಗಳ ನೇಮಕಾತಿ
Pingback: ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತದಲ್ಲಿ (ಕಿಯೋನಿಕ್ಸ್) ಗ್ರೂಪ್ ಬಿ & ಸಿ ಹುದ್ದೆಗಳಿಗೆ
Pingback: ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ:: Karnataka High Court Group D Jobs 2023 - KPSC Jobs
Pingback: ಗುಡಿ ಕೈಗಾರಿಕೆ ನಿಗಮದಲ್ಲಿ ಹೊಸ ನೇಮಕಾತಿ ಅಧಿಸೂಚನೆ: ವೇತನ ರೂ. 72000/- Central Cottage Corporation jobs 2023 - KPSC Jobs
Hi sair I m babusab chittargi