KEA ಯಿಂದ 4 ಇಲಾಖೆಗಳಲ್ಲಿ ಖಾಲಿ ಇರುವ 670 ಹುದ್ದೆಗಳ ನೇಮಕಾತಿ ಕುರಿತಂತೆ ತಾತ್ಕಾಲಿಕ ಫಲಿತಾಂಶ ಪ್ರಕಟ: ಅರ್ಜಿ ಸಲ್ಲಿಸಿದವರು ಕೂಡಲೇ ನೋಡಿ: KEA  4 Dept. Provisional Marks

Click here to Share:

KEA ಯಿಂದ 4 ಇಲಾಖೆಗಳಲ್ಲಿ ಖಾಲಿ ಇರುವ 670 ಹುದ್ದೆಗಳ ನೇಮಕಾತಿ ಕುರಿತಂತೆ ತಾತ್ಕಾಲಿಕ ಫಲಿತಾಂಶ ಪ್ರಕಟ: ಅರ್ಜಿ ಸಲ್ಲಿಸಿದವರು ಕೂಡಲೇ ನೋಡಿ: KEA  4 Dept. Provisional Marks

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕರ್ನಾಟಕ ಸರ್ಕಾರದ ವಿವಿಧ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ 2023ರ ಅಕ್ಟೋಬರ್ & ನವೆಂಬರ್ ತಿಂಗಳಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆಯ ಅನುಸಾರ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ ಪ್ರಸ್ತುತ ತಾತ್ಕಾಲಿಕ ಫಲಿತಾಂಶದ ಕುರಿತಂತೆ ಮಹತ್ವದ ಪ್ರಕಟಣೆಯನ್ನು ಹೊರಡಿಸಲಾಗಿದೆ. ರಾಜ್ಯ ಸರ್ಕಾರದ 4 ಇಲಾಖೆ/ ಸಂಸ್ಥೆಗಳಲ್ಲಿ ಖಾಲಿ ಇರುವ 650 ಕ್ಕೂ ಹೆಚ್ಚು ಹುದ್ದೆಗಳ ಭರ್ತಿ ಕುರಿತಂತೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ತಾತ್ಕಾಲಿಕ ಫಲಿತಾಂಶಕ್ಕೆ ಯಾವುದಾದರೂ ಆಕ್ಷೇಪಣೆ ಇದ್ದರೇ ನಿಗದಿತ ದಿನಾಂಕದ ಒಳಗಾಗಿ ಆಕ್ಷೇಪಣೆಯನ್ನು ಸಲ್ಲಿಸಬಹುದು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಇರುವ ಸಂಶೋಧನಾ ಅಧಿಕಾರಿ ಹುದ್ದೆಗಳ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ, ಬೆಂಗಳೂರು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಬೆಂಗಳೂರು, ಮತ್ತು ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್ ಲಿಮಿಟೆಡ್ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಸಂಬಂಧ ದಿನಾಂಕ 28-10-2023 ಮತ್ತು 29-10-2023 ಹಾಗು 18-11-2023 ರಿಂದ 25-11-2023 ವರೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ದಿನಾಂಕ 07-03-2024 ರಂದು ಪ್ರಕಟಿಸಲಾಗಿದೆ.

ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ 9144 ಹುದ್ದೆಗಳ ಬೃಹತ್ ಭರ್ತಿಗೆ ಭರ್ತಿಗೆ ಅರ್ಜಿ ಆಹ್ವಾನ

ಯಾವುದಾದರು ಪತ್ರಿಕೆ ಫಲಿತಾಂಶ ಪ್ರಕಟವಾಗದೇ ಇರುವ ಅಭ್ಯರ್ಥಿಗಳು :

ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿ, ಯಾವುದಾದರು ಪತ್ರಿಕೆಯ ವಿವರಗಳು ಪ್ರಕಟವಾಗದೆ ಇದ್ದಲ್ಲಿ ಅಂತಹ ಅಭ್ಯರ್ಥಿಗಳು ನಿಗದಿತ ಲಿಂಕ್ ನಲ್ಲಿಯೇ ನೀಡಲಾಗಿರುವ “ಯಾವುದೇ ಪತ್ರಿಕೆಯ ಸ್ಕೋರ್ ಕಾಣಿಸದಿದ್ದರೆ ಇಲ್ಲಿ ಕ್ಲಿಕ್ ಮಾಡಿ” ಎಂಬುದನ್ನು ಆಯ್ಕೆ ಮಾಡಿ ವಿವರಗಳನ್ನು ದಿನಾಂಕ 14-03-2024 ರೊಳಗೆ ಅಪ್‌ಲೋಡ್ ಮಾಡಲು ಸೂಚಿಸಿದೆ.

RDPR ಇಲಾಖೆಯಲ್ಲಿ ಖಾಲಿ ಇರುವ 8081 PDO, ಗ್ರಾ. ಪಂ ಕಾರ್ಯದರ್ಶಿ & SPDO ಹುದ್ದೆಗಳ ನೇಮಕಾತಿ ಕುರಿತಂತೆ ಅಧಿಸೂಚನೆ

ತಾತ್ಕಾಲಿಕ ಫಲಿತಾಂಶದ ಬಗ್ಗೆ ಆಕ್ಷೇಪಣೆ :

ಪ್ರಕಟಿಸಲಾಗಿರುವ ತಾತ್ಕಾಲಿಕ ಫಲಿತಾಂಶದ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ 15-03-2024 ರಿಂದ 20-03-2024 ರೊಳಗೆ ಪ್ರಾಧಿಕಾರದ ಆಕ್ಷೇಪಣೆ ಲಿಂಕ್ ಮೂಲಕ ಸಲ್ಲಿಸಬಹುದಾಗಿದೆ.

ತಾತ್ಕಾಲಿಕ ಫಲಿತಾಂಶದ ಲಿಂಕ್

SCORE CHECK

NOTICE


Click here to Share:
Bookmark the permalink.

About sdkpscjob

www.kpscjobs.com Educator & Blogger