KEA – ಕರ್ನಾಟಕ ಸರ್ಕಾರದ 5 ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ: Post Details, Qualification, Salary, Age & Selection: KEA Recruitment notification 2023

Click here to Share:

KEA – ಕರ್ನಾಟಕ ಸರ್ಕಾರದ 5 ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ: Post Details, Qualification, Salary, Age & Selection: KEA Recruitment notification 2023

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಹೊಸ ಅಧಿಸೂಚನೆಯನ್ನು ಪ್ರಕಟಿಸಿದೆ. ಕರ್ನಾಟಕ ಸರ್ಕಾರದ ವಿವಿಧ ಒಟ್ಟು 5 ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂಕ್ಷಿಪ್ತ ಅಧಿಸೂಚನೆಯನ್ನು ಪ್ರಕಟಿಸಿದೆ. ಕರ್ನಾಟಕದ ಕೆಳಕಂಡ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಿರಿ. Click to Below link for Notification & Apply Online

ಸರ್ಕಾರದ ನಿರ್ದೇಶನದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಕೆಳಗಿನ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸುತ್ತಿದೆ.

Karnataka Examination Authority (KEA) released short notification posts in 5 various departments, Government of Karnataka. The more details regarding this recruitment can find here.

ಹುದ್ದೆಗಳು ಖಾಲಿ ಇರುವ ಇಲಾಖೆಗಳು/ Departments

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಬೆಂಗಳೂರು.

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ, ಬೆಂಗಳೂರು

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಬೆಂಗಳೂರು

ಕರ್ನಾಟಕ ಸ್ಟೇಟ್ಸ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್, ಬೆಂಗಳೂರು

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು

 

ಉದ್ಯೋಗ ಮಾಹಿತಿ: ಜಲ ಸಂಪನ್ಮೂಲ ಇಲಾಖೆಯಲ್ಲಿ 400 ಹುದ್ದೆಗಳ ನೇಮಕಾತಿ

 

ಮೇಲೆ ಸೂಚಿಸಿರುವ ಪ್ರತಿಯೊಂದು ಸಂಸ್ಥೆಯಲ್ಲಿನ ನೇಮಕಾತಿಯ ಹುದ್ದೆಗಳ ಹೆಸರು, ಒಟ್ಟು ಹುದ್ದೆಗಳ ಸಂಖ್ಯೆ, ಹುದ್ದೆವಾರು ಮತ್ತು ವರ್ಗವಾರು ಖಾಲಿ ಹುದ್ದೆಗಳು ಹಾಗು ವಿವಿಧ ಹುದ್ದೆಗಳಿಗೆ ನಿಗದಿಪಡಿಸಿರುವ ವಯಸ್ಸು, ಅರ್ಹತಾ ಷರತ್ತುಗಳು, ಶೈಕ್ಷಣಿಕ ಅರ್ಹತೆಗಳು, ಸರ್ಧಾತ್ಮಕ ಪರೀಕ್ಷೆಯ ಪೇಪರ್‌ಗಳು, ಆಯ್ಕೆಯ ವಿಧಾನ ಮತ್ತು ನೇಮಕಾತಿ ಹಾಗು ಇತರ ವಿವರಗಳನ್ನು ಸದ್ಯದಲ್ಲಿಯೇ ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗುವುದು.

ಉದ್ಯೋಗ ಮಾಹಿತಿ: ಕರ್ನಾಟಕ ಕೃಷಿ ಇಲಾಖೆಯಲ್ಲಿ ಸಹಾಯಕರು, ಕಂಪ್ಯೂಟರ್ ಆಪರೇಟರ್ & ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ವಿಧಾನ/ How to Apply

ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನಲ್ಲಿ ಸೂಕ್ತವಾದ URL ಅನ್ನು ಆಯ್ಕೆ ಮಾಡುವ ಮೂಲಕ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ನೊಂದಣಿ ಮಾಡಿಕೊಳ್ಳಲು, ಅರ್ಜಿ ಸಲ್ಲಿಸಲು ಹಾಗು ಶುಲ್ಕ ಪಾವತಿಸಲು ವೇಳಾಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

ಪರೀಕ್ಷೆಯ ವೇಳಾಪಟ್ಟಿ/ Schedule of Exam:

ಈ ಅಧಿಸೂಚನೆಯಲ್ಲಿ ಸೂಚಿಸಲಾಗಿರುವ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು 2023 ರ ಜೂನ್-ಜುಲೈ ಅವಧಿಯಲ್ಲಿ ನಡೆಸುವ ಸಾಧ್ಯತೆ ಇದ್ದು, ಸ್ಪರ್ಧಾತ್ಮಕ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಮಾತ್ರ ನಡೆಸಲಾಗುವುದು. ಅಭ್ಯರ್ಥಿಗಳು ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು.

ಪ್ರಮುಖ ಸೂಚನೆಗಳು/ Important Instructions:

  1. ಕೇವಲ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು, ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವುದು ಅಭ್ಯರ್ಥಿಗಳಿಗೆ ಈ ಮೇಲಿನ ಹುದ್ದೆಗಳಿಗೆ ನೇಮಕಾತಿಯ ಯಾವುದೇ ಹಕ್ಕನ್ನು ನೀಡುವುದಿಲ್ಲ, ನೇಮಕಾತಿಯು ಸರ್ಕಾರವು ನಿಗದಿಪಡಿಸಬಹುದಾದ ಅರ್ಹತಾ ಮಾನದಂಡಗಳಿಗೆ ಒಳಪಟ್ಟಿರುತ್ತದೆ.
  2. ಮೇಲಿನ ಯಾವುದೇ ನಿಯಮಗಳು & ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ ವ್ಯತ್ಯಾಸ ಅಥವಾ ಅಸ್ಪಷ್ಟತೆ ಕಂಡು ಬಂದಲ್ಲಿ, ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977 (ತಿದ್ದುಪಡಿಗಳು) ಹಾಗು ಕರ್ನಾಟಕ ಸರ್ಕಾರದ ನೇಮಕಾತಿ ಅಧಿಸೂಚನೆಗಳು / ಆದೇಶಗಳರಲ್ಲಿರುವಂತೆ ಅನ್ವಯಿಸುತ್ತದೆ.

Important Links

Notification

Official Website


Click here to Share:
Tagged . Bookmark the permalink.

About sdkpscjob

www.kpscjobs.com Educator & Blogger

3 Responses to KEA – ಕರ್ನಾಟಕ ಸರ್ಕಾರದ 5 ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ: Post Details, Qualification, Salary, Age & Selection: KEA Recruitment notification 2023

  1. Pingback: lost mary vape mo5000

  2. This is very attention-grabbing, You’re a very professional blogger I have joined your rss feed and stay up for searching for more of your wonderful post Also, I have shared your site in my social networks!

  3. Sherry Roble says:

    canadian pharmacy 24 – walmart online pharmacy canadian pharmacy coupon code

Leave a Reply

Your email address will not be published. Required fields are marked *