ಕರ್ನಾಟಕ ವಿಧಾನಸಭೆಯಲ್ಲಿ ಯಾವುದೇ ಪದವಿ ಆದವರಿಗೆ ಕನ್ನಡ ವರದಿಗಾರರು ಹುದ್ದೆಗಳಿಗೆ ಅರ್ಜಿ ಆಹ್ವಾನ: KLA Reporter Recruitment 2024
ಕರ್ನಾಟಕ ವಿಧಾನ ಸಭೆ ಸಚಿವಾಲಯದಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಉಳಿಕೆ ವೃಂದ & ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಕನ್ನಡ ವರದಿಗಾರರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. KLC ನಲ್ಲಿ ಖಾಲಿ ಇರುವ ವರದಿಗಾರರು ಹುದ್ದೆಗಳ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು 30-04-2024 ರ ಒಳಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಬಹುದು. ಇದರ ಅಧಿಸೂಚನೆ & ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Karnataka Legislative Assembly ನಲ್ಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.
ಹುದ್ದೆಗಳ ವಿವರ/ Post Details:
ಹುದ್ದೆಗಳ ಹೆಸರು: ವರದಿಗಾರರು
ಉಳಿಕೆ ಮೂಲ ವೃಂದ (NHK Cadre)- 03 ಹುದ್ದೆಗಳು |
ಸ್ಥಳೀಯ ವೃಂದ (HK)- 03 |
ಒಟ್ಟು ಹುದ್ದೆಗಳು- 06 |
ವೇತನ/ Salary Scale:
ವರದಿಗಾರರು: ವೇತನ ಶ್ರೇಣಿ: 37900-70850 (ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.
ಶೈಕ್ಷಣಿಕ ಅರ್ಹತೆಗಳು/ Educational Qualification:
ಕನ್ನಡ ವರದಿಗಾರರು:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯನ್ನು ಹೊಂದಿರಬೇಕು.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಪ್ರವೀಣ ದರ್ಜೆಯ ಕನ್ನಡ ಶೀಘ್ರಲಿಪಿ & ಪ್ರೌಢ ದರ್ಜೆಯ ಕನ್ನಡ ಬೆರಳಚ್ಚು ಪರೀಕ್ಷೆಗಳಲ್ಲಿ ಉತ್ತೀರ್ಣ ಹೊಂದಿರಬೇಕು.
ಆಂಗ್ಲ ವರದಿಗಾರರು:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯನ್ನು ಹೊಂದಿರಬೇಕು.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಪ್ರವೀಣ ದರ್ಜೆಯ ಆಂಗ್ಲ ಶೀಘ್ರಲಿಪಿ & ಪ್ರೌಢ ದರ್ಜೆಯ ಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ ಉತ್ತೀರ್ಣ ಹೊಂದಿರಬೇಕು.
ವಯೋಮಿತಿ/ Age limit:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ಪೂರೈಸಿರಬೇಕು & 35 ವರ್ಷವನ್ನು ಮೀರಿರಬಾರದು.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ
ಇತರೆ ಹಿಂದೂಳಿದ ವರ್ಗ (OBC) : 03 ವರ್ಷ
ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ/ Application Fees:
ಸಾಮಾನ್ಯ ಅರ್ಹತಾ ಅಭ್ಯರ್ಥಿಗಳಿಗೆ: ರೂ. 500/-
ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ : ರೂ. 500/-
ಪ.ಜಾ/ ಪಪಂ/ ಕೆ1 ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕ ಇರುವುದಿಲ್ಲ
ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಇಂಡಿಯನ್ ಪೋಸ್ಟಲ್ ಆರ್ಡರ್ ಮುಖಾಂತರ ಪಾವತಿ ಮಾಡಬಹುದು.
ಆಯ್ಕೆವಿಧಾನ/ Selection procedure:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ/ ಕೌಶಲ್ಯ ಪರೀಕ್ಷೆ ನಡೆಸಲಾಗುತ್ತದೆ
ಅರ್ಜಿ ಹಾಕುವ ವಿಧಾನ/ Application Submission Method:
ಆಸಕ್ತ ಹಾಗೂ ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಇತ್ತೀಚಿನ ಫೋಟೊ, ಅಗತ್ಯ ವಿದ್ಯಾರ್ಹತೆ, ಅನುಭವ & ಇನ್ನಿತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ ದಿನಾಂಕ: 30.04.2024 ರ ಒಳಗಾಗಿ ಖುದ್ದಾಗಿ ಅಥವಾ ಅಂಚೆ ಮೂಲಕ ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ- 5074 ವಿಧಾನಸೌಧ, ಬೆಂಗಳೂರು- 560001 ಇವರ ವಿಳಾಸಕ್ಕೆ ಸಲ್ಲಿಸುವುದು. ಈ ನೋಟಿಫಿಕೇಶನ್ ಲಿಂಕ್ ಡೌನ್ಲೋಡ್ ಮಾಡಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ.
Important Date/ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 14-03-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 30-04-2024
Important Links/ ಪ್ರಮುಖ ಲಿಂಕುಗಳು:
ಅಧಿಸೂಚನೆ/ Notification: NHK & HK
Pingback: ಕೆಇಎ ಯಿಂದ ಪಿಯುಸಿ ಮುಗಿದವರಿಗೆ 2500 ಹುದ್ದೆಗಳ ಬೃಹತ್ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ: Apply for BMTC 2500 Vacancies - KPSC Job
Pingback: ಏರ್ಪೊರ್ಟ್ ಸರ್ವಿಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ 422 ಹುದ್ದೆಗಳಿಗೆ 10ನೇ ಪಾಸದವರಿಂದ ಅರ್ಜಿ ಆಹ್ವಾನ: AIASL Apply now 2024 - KPSC
Pingback: RDPR ಇಲಾಖೆಯಲ್ಲಿ ಖಾಲಿ ಇರುವ 247 PDO ಹುದ್ದೆಗಳ ನೇಮಕಾತಿಗೆ ಆನ್ಲೈನ್ ಅರ್ಜಿ ಆರಂಭ- ಕೂಡಲೇ ಅರ್ಜಿ ಸಲ್ಲಿಸಿ: Apply Online for RDPR PDO