KPSC KREIS ನೇಮಕಾತಿ: 465 ಪ್ರಥಮ ದರ್ಜೆ ಸಹಾಯಕರ ಕಮ್ ಕಂಪ್ಯೂಟರ್ ಆಪರೇಟರ್ (FDA) ನೇಮಕಾತಿ ಕುರಿತಂತೆ ಮಹತ್ವದ ಪ್ರಕಟಣೆ: Additional Selection List Released
ಕರ್ನಾಟಕ ಲೋಕಸೇವಾ ಆಯೋಗದಿಂದ ಮಹತ್ವದ ಪತ್ರಿಕಾ ಪ್ರಕಟಣೆಯೊಂದು ಪ್ರಕಟವಾಗಿದೆ. ಆಯೋಗದಿಂದ ಅಧಿಸೂಚನೆ ಹೊರಡಿಸಲಾಗಿದ್ದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿನ ಪ್ರಥಮ ದರ್ಜೆ ಸಹಾಯಕರ ಕಂ ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿಯನ್ನು KPSC ಯ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗದಿಂದ 2017ನೇ ಇಸವಿಯಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆ ಇದಾಗಿದ್ದು ಇದರ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ…
ದಿ:23-06-2017ರನ್ವಯ ಅಧಿಸೂಚಿಸಿರುವ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದ & ಹೈದರಾಬಾದ್ ಕರ್ನಾಟಕ ವೃಂದದ ಒಟ್ಟು 465 ಪ್ರಥಮ ದರ್ಜೆ ಸಹಾಯಕರ ಕಂ ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿತ್ತು. ಅದರಂತೆ ಕರ್ನಾಟಕ ನಾಗರೀಕ ಸೇವೆಗಳ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳ 1978 ರನ್ವಯ ಉಳಿಕೆ ಮೂಲ ವೃಂದ ಹಾಗೂ ಹೈದರಾಬಾದ್ ಕರ್ನಾಟಕ ವೃಂದದ ಹುದ್ದೆಗಳಿಗೆ ಶೇಕಡ 10% ರಷ್ಟು ಹೆಚ್ಚುವರಿ ಪಟ್ಟಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿರುತ್ತದೆ.
ಆಯೋಗದ ಅಧಿಸೂಚನೆ ಸಂಖ್ಯೆ:ಆರ್ (2)1084/17-18/ಪಿ ಎಸ್.ಸಿ, ದಿ:23-06-2017ರಲ್ಲಿ ಅಧಿಸೂಚಿಸಲಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿನ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಏಕಲವ್ಯ ಮಾದರಿ/ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಲ್ಲಿನ ಪ್ರಥಮ ದರ್ಜೆ ಸಹಾಯಕರು ಕಂ ಕಂಪ್ಯೂಟರ್ ಆಪರೇಟರ್ – 465(375+90ಹೈ.ಕ) ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ವೃಂದ ಮತ್ತು ನೇಮಕಾತಿ) ನಿಯಮಗಳು – 2011 ರಂತೆ ಹಾಗೂ ಮಾನ್ಯ ಉಚ್ಛ ನ್ಯಾಯಾಲಯ ಧಾರವಾಡ ಪೀಠವು ರಿಟ್ ಅರ್ಜಿ ಪ್ರಕರಣ ಸಂಖ್ಯೆ:101656/2021 ರಲ್ಲಿ ನೀಡಿರುವ ಆದೇಶದನ್ವಯ ಸಿದ್ಧಪಡಿಸಿ ದಿನಾಂಕ:30-11-2020 ರಂದು ಪ್ರಕಟಿಸಲಾಗಿತ್ತು. ಪ್ರಸ್ತುತ ಸರ್ಕಾರದ ದಿನಾಂಕ:23-11-2022ರ ನಡವಳಿಗಳ ಆದೇಶ ಸಂಖ್ಯೆ:ಸಕಇ 216 ಎಂಡಿಎಸ್ 2021ರಲ್ಲಿ ನೀಡಿರುವ ನಿರ್ದೇಶನಗಳನ್ವಯ ಕ್ರಮವಹಿಸಿ ಸದರಿ ಹುದ್ದೆಗಳ ಹೆಚ್ಚುವರಿ ಪಟ್ಟಿಯನ್ನು ಈ ಮೂಲಕ ಪ್ರಕಟಿಸಿದೆ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.
Important Links
1 thought on “KPSC KREIS ನೇಮಕಾತಿ: 465 ಪ್ರಥಮ ದರ್ಜೆ ಸಹಾಯಕರ ಕಮ್ ಕಂಪ್ಯೂಟರ್ ಆಪರೇಟರ್ (FDA) ನೇಮಕಾತಿ ಕುರಿತಂತೆ ಮಹತ್ವದ ಪ್ರಕಟಣೆ: Additional Selection List Released”