KPSC ಯಿಂದ ವಿವಿಧ ಇಲಾಖೆಗಳ ಸಹಾಯಕ ನಗರ ಯೋಜಕರು, ಜೂನಿಯರ್ ಇಂಜಿನೀಯರ್, ಎಲೆಕ್ಟ್ರೀಷಿಯನ್ ಗ್ರೇಡ್ 1 & 2 ನೇಮಕಾತಿ:- ಅರ್ಹತಾ ಪಟ್ಟಿ ಬಿಡುಗಡೆ: Important Instructions about Document Verification: KPSC Various Posts Eligibility Lists May 13
ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆಗಳು ಹೊರಗೆ ಬಿದ್ದಿವೆ. ಆಯೋಗದಿಂದ ಅಧಿಸೂಚನೆ ಹೊರಡಿಸಲಾಗಿದ್ದ ಕರ್ನಾಟಕ ಪೌರಾಡಳಿತ & ನಗರ ಸ್ಥಳೀಯಾಡಳಿತ ಇಲಾಖೆಯ ಎಲೆಕ್ಟ್ರೀಷಿಯನ್ ಗ್ರೇಡ್ 1 & 2 ಹುದ್ದೆಗಳು ಹಾಗೂ ನಗರ ಯೋಜನಾ ಇಲಾಖೆಯ ಸಹಾಯಕ ನಗರ ಯೋಜಕರು ಹುದ್ದೆಗಳ ಮೂಲ ದಾಖಲೆಗಳ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.
& ದಿನಾಂಕವನ್ನು KEA ಯ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ದಿನಾಂಕ 12-05-2023 & 15-05-2023 ರಂದು ಕೆಇಎ ಕಛೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಯಲಿದೆ. ಡಾಕ್ಯುಮೆಂಟೇಷನ್ ವೆರಿಫಿಕೇಶನ್ ಅಭ್ಯರ್ಥಿಗಳ ಲಿಸ್ಟ್ & ದಿನಾಂಕ ಹಾಗೂ ಸೂಚನೆಗಳನ್ನು ಕೆಳಗೆ ನೀಡಿರುವ ವಎಬ್ಸೈಟ್ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ…
ಕರ್ನಾಟಕ ಲೋಕಸೇವಾ ಆಯೋಗದಿಂದ ದಿನಾಂಕ 12-05-2023 ರಂದು Assistant Town Planner, Electrician Grade 1 & 2, Junior Engineer ಹುದ್ದೆಗಳ 1:3 ಅರ್ಹತಾ ಪಟ್ಟಿಯನ್ನು KPSC ಯ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿರುತ್ತದೆ. ಅರ್ಹತಾ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯೋಗ ನಿಗದಿಪಡಿಸಿದಂತೆ ಮೂಲ ದಾಖಲೆಗಳ ಪರಿಶೀಲನೆಗೆ ಕರೆಯಲಾಗುವುದು.
ಮೂಲ ದಾಖಲೆ ಪರಿಶೀಲನೆಗೆ ಸಂಬಂಧಿಸಿದ ಪ್ರಮುಖ ಸೂಚನೆಗಳು:
1) ಮೂಲ ದಾಖೆಗಳ ಪರಿಶೀಲನೆಗೆ ಹಾಜರಾಗುವ ಯಾವುದೇ ಅಭ್ಯರ್ಥಿಗಳಿಗೆ TA & ನೀಡಲಾಗುವುದಿಲ್ಲ. ದಾಖಲೆಗಳ ಪರಿಶೀಲನೆ ಮತ್ತು ನಂತರದ ನೇಮಕಾತಿ ಪ್ರಕ್ರಿಯೆಯು ಕಾಲಕಾಲಕ್ಕೆ ನೇಮಕಾತಿಯ ನಿಬಂದನೆಗಳು ಸಂಬಂಧಿತ ಸರ್ಕಾರಿ ನಿಯಮಗಳು / ಆದೇಶಗಳು / ಅಧಿಸೂಚನೆಗಳು / ಮಾನ್ಯ ನ್ಯಾಯಾಲಯ/ಗಳ ಆದೇಶದ ಷರತ್ತಿಗೆ ಒಳಪಟ್ಟಿರುತ್ತದೆ.
2) ಆಯೋಗವು ನಿಗದಿ ಪಡಿಸಿದ ಹುದ್ದೆವಾರು ವೇಳಾ ಪಟ್ಟಿಯಂತೆ, ಅಭ್ಯರ್ಥಿಗಳು ನಿಗದಿತ ಸಮಯದಲ್ಲಿ ಅರ್ಜಿಯಲ್ಲಿ ನಮೂದಿಸಿರುವ ವಿದ್ಯಾರ್ಹತೆ ಹಾಗೂ ಮೀಸಲಾತಿಗಳ ಅನುಸಾರ ಕಡ್ಡಾಯವಾಗಿ ಮೂಲ ದಾಖಲೆಗಳನ್ನು ಪ್ರಾಧಿಕಾರದಲ್ಲಿ ಸಲ್ಲಿಸಿ ಪರಿಶೀಲಿಸಿಕೊಳ್ಳತಕ್ಕದ್ದು.
3) ಅರ್ಹತಾ ಪಟ್ಟಿಯಲ್ಲಿ ಹೆಸರಿಸಿದ ಮಾತ್ರಕ್ಕೆ ಅಭ್ಯರ್ಥಿಯು, ನೇಮಕಾತಿಗೆ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ, ಮತ್ತು ಅಭ್ಯರ್ಥಿತ್ವವು ಮೂಲ ದಾಖಲೆಗಳ ಪರಿಶೀಲನೆ, ಅರ್ಹತಾ ಷರತ್ತುಗಳು ಮತ್ತು ಸರ್ಕಾರ / ಸಕ್ಷಮ ಪ್ರಾಧಿಕಾರದಿಂದ ಕಾಲಕಾಲಕ್ಕೆ ಹೊರಡಿಸಲಾದ ನಿಯಮಗಳ ಷರತ್ತಿಗೆ ಒಳಪಟ್ಟಿರುತ್ತದೆ.
4) ಆಯೋಗದಿಂದ ನಡೆಸಲಾಗುವ ಮೂಲ ದಾಖಲೆಗಳ ಪರಿಶೀಲನೆಗೆ ಗೈರು ಹಾಜರಾದಲ್ಲಿ ಮತ್ತೊಮ್ಮೆ ಮೂಲ ದಾಖಲೆಗಳ ಪರಿಶೀಲನೆಗೆ ಕಾಲಾವಕಾಶ ನೀಡಲಾಗುವುದಿಲ್ಲ.
ಪ್ರಮುಖ ಲಿಂಕುಗಳು/ Important Links
ಅರ್ಹತಾ ಪಟ್ಟಿ/ Eligibility Lists
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.