KPTCL & ESCOM Recruitment: AE, JE & Junior Assistant- How to Attend Document Verification

Click here to Share:

KPTCL & ESCOM Recruitment: AE, JE & Junior Assistant- How to Attend Document Verification

ಕರ್ನಾಟಕ ವಿದ್ಯುತ್ ಪ್ರಸರಣ ನಿಯಮಿತ ಮತ್ತು ವಿವಿಧ ಎಸ್ಕಾಂಗಳಲ್ಲಿ ಸಹಾಯಕ ಇಂಜಿನಿಯರ್ (ವಿದ್ಯುತ್ /ಸಿವಿಲ್), ಕಿರಿಯ ಇಂಜಿನಿಯರ್ (ವಿದ್ಯುತ್/ಸಿವಿಲ್) ಹಾಗೂ ಕಿರಿಯ ಸಹಾಯಕ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ, ಈಗಾಗಲೇ ಅಧಿಸೂಚನೆಯಲ್ಲಿ ದಾಖಲಾತಿ ಪರಿಶೀಲನೆಗೆ ಸಿದ್ಧಪಡಿಸಿರುವ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು, ಸರ್ಕಾರದ Digilocker ತಂತ್ರಾಂಶವನ್ನು ಬಳಸಿಕೊಂಡು ಆನ್‌ಲೈನ್ ಮೂಲಕ ದಾಖಲಾತಿಗಳ ಪರಿಶೀಲನೆಯನ್ನು ನಡೆಸಲು ಉದ್ದೇಶಿಸಲಾಗಿದೆ. ಈ ಸಂಬಂಧವಾಗಿ ನಿಗಮದ ದಿನಾಂಕ 01.03.2023 ರ ಅಧಿಸೂಚನೆಯಲ್ಲಿ ತಿಳಿಸಿರುವ ಅಭ್ಯರ್ಥಿಗಳು ಈ ಕೆಳಗೆ ತಿಳಿಸಿರುವಂತೆ ಸೂಕ್ತ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡು ದಾಖಲಾತಿಗಳನ್ನು ನಿಗಮದ website ನಲ್ಲಿ ಸೂಕ್ತ ರೀತಿಯಲ್ಲಿ upload ಮಾಡುವಂತೆ ತಿಳಿಸಲಾಗಿದೆ.

ದಾಖಲಾತಿ ಪರಿಶೀಲನೆ ಪಟ್ಟಿಯಲ್ಲಿ ಸೇರಿರುವಂತಹ ಎಲ್ಲಾ ಅಭ್ಯರ್ಥಿಗಳು ಮೊದಲಿಗೆ Digilocker ತಂತ್ರಾಂಶದಲ್ಲಿ Register ಮಾಡಿಕೊಂಡು, ತಮ್ಮ ಆಧಾರ ಸಂಖ್ಯೆಯೊಂದಿಗೆ Login ಆಗಿ, 10ನೇ ತರಗತಿ, ಎರಡನೇ ಪಿಯುಸಿ/12ನೇ ತರಗತಿ ಅಂಕಪಟ್ಟಿ, ಪದವಿ/ಡಿಪ್ಲೊಮಾ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಹೆಚ್.ಕೆ. ಪ್ರಮಾಣ ಪತ್ರ, UDID Card ಪ್ರಮಾಣ ಪತ್ರಗಳನ್ನು Issued documents ನಲ್ಲಿ ಪಡೆಯತಕ್ಕದ್ದು (Digilocker ತಂತ್ರಾಂಶದಲ್ಲಿ Register ಮಾಡಿಕೊಂಡು ದಾಖಲಾತಿಗಳನ್ನು Issued documents ನಲ್ಲಿ ಪಡೆಯುವ ವಿಧಾನವನ್ನು ವೆಬ್‌ಸೈಟ್ ನಲ್ಲಿ ತಿಳಿಸಲಾಗಿದೆ).

ಉದ್ಯೋಗ ಮಾಹಿತಿ: ರೇಷ್ಮೆ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ-

Digilocker ತಂತ್ರಾಂಶದಲ್ಲಿ ಲಭ್ಯವಿಲ್ಲದೇ ಇರುವಂತಹ ದಾಖಲೆಗಳನ್ನು ಅಭ್ಯರ್ಥಿಗಳು 200 kb ಮೀರದಂತಹ pdf document ಗಳಾಗಿ ಸ್ಕ್ಯಾನ್ ಮಾಡಿಕೊಂಡು ತಂತ್ರಾಂಶದ Document Upload ವಿಭಾಗದಲ್ಲಿ ಸಂಬಂಧಪಟ್ಟ ಮೀಸಲಾತಿ ಮುಂದೆ ಅಪ್‌ಲೋಡ್ ಮಾಡುವುದು (Document Upload ಮಾಡುವ ವಿಧಾನವನ್ನು ಮತ್ತು ನಮೂನೆಗಳನ್ನು ವೆಬ್‌ಸೈಟ್ ನಲ್ಲಿ ತಿಳಿಸಲಾಗಿದೆ).

ಅಭ್ಯರ್ಥಿಗಳು ಎಲ್ಲಾ ದಾಖಲಾತಿಗಳನ್ನು ಅಪ್-ಲೋಡ್ ಮಾಡಿದ ನಂತರ, ತಮ್ಮ ಆಧಾರ ಸಂಖ್ಯೆಯೊಂದಿಗೆ e-sign ಮಾಡುವುದು. e-sign ಮಾಡುವ ಮುನ್ನ ತಾವು ಎಲ್ಲಾ ದಾಖಲಾತಿಗಳನ್ನು ನಿಗಧಿತ ನಮೂನೆಗಳಲ್ಲಿ ಅಪ್-ಲೋಡ್ ಮಾಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳತಕ್ಕದ್ದು ಹಾಗೂ ಅದರ ಒಂದು ಮುದ್ರಿತ ಪ್ರತಿಯನ್ನು/soft-copy ಪಡೆದಿಟ್ಟುಕೊಳ್ಳತಕ್ಕದ್ದು.

ಉದ್ಯೋಗ ಮಾಹಿತಿ: SDA & FDA ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಮುಂದುವರೆದು, ದಾಖಲಾತಿಗಳ ಪರಿಶೀಲನೆಗಾಗಿ, ಎಲ್ಲಾ ಅವಶ್ಯಕ ಮಾಹಿತಿಯನ್ನು ಕವಿಪ್ರನಿನಿ ವೆಬ್‌ಸೈಟ್ https://kptcl.karnataka.gov.in/ ರಲ್ಲಿ ಪಡೆಯತಕ್ಕದ್ದು. ದಾಖಲಾತಿ ಅಪ್‌ಲೋಡ್ ಮಾಡಲು ಅಭ್ಯರ್ಥಿಗಳಿಗೆ ಕವಿಪ್ರನಿನಿ ವೆಬ್‌ಸೈಟ್ https://kptcl.karnataka.gov.in/ ರಲ್ಲಿ ದಿನಾಂಕ: 14.03.2023 ರಿಂದ 20.03.2023 ರವರೆಗೆ ಅವಕಾಶವನ್ನು ಕಲ್ಪಿಸಲಾಗಿರುತ್ತದೆ.

ದಿನಾಂಕ: 20.03.2023 ರ ನಂತರ ದಾಖಲಾತಿ ಅಪ್‌ಲೋಡ್ ಮಾಡಲು ಅಭ್ಯರ್ಥಿಗಳಿಗೆ ಯಾವುದೇ ರೀತಿಯಲ್ಲಿ ಅವಕಾಶವನ್ನು ನೀಡಲಾಗುವುದಿಲ್ಲ. ನಿಗಧಿತ ಕಾಲಾವಧಿಯೊಳಗೆ ದಾಖಲಾತಿಗಳನ್ನು ಅಪ್‌ಲೋಡ್ ಮಾಡದ ಅಭ್ಯರ್ಥಿಗಳನ್ನು ಗೈರುಹಾಜರೆಂದು ಪರಿಗಣಿಸಿ, ಇವರಿಗೆ ನೇಮಕಾತಿಗೆ ಯಾವುದೇ ಆಸಕ್ತಿಯಿಲ್ಲವೆಂದು ಭಾವಿಸಿ, ನೇಮಕಾತಿ ಪ್ರಕ್ರಿಯೆಯಿಂದ ಅನರ್ಹಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದ್ದರಿಂದ ಆಯ್ಕೆಯಾದ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅಪ್‌ಲೋಡ್ ಮಾಡಿ.

ಉದ್ಯೋಗ ಮಾಹಿತಿ: ಕೆನರಾ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Important Links/ ಪ್ರಮುಖ ಲಿಂಕುಗಳು:

Download the Notice

DV List

Official Website

ಇತ್ತೀಚಿನ ಎಲ್ಲ ನೇಮಕಾತಿಗಳು

 

JOIN TO WHATSAPP

 


Click here to Share:
Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *