ಮೈಸೂರು ಸೇಲ್ಸ್ ನಲ್ಲಿ ಖಾಲಿ ಇರುವ ಗುಮಾಸ್ತ, ಮಾರಟ ಪ್ರತಿನಿಧಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: MSIL Recruitment 2023
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್, ಬೆಂಗಳೂರು ಇಲ್ಲಿ ಖಾಲಿ ಇರುವ ಸಹಾಯಕ ವ್ಯವಸ್ಥಾಪಕರು ಮಾರಾಟ ಪ್ರತಿನಿಧಿ, ಗುಮಾಸ್ತ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ. ಒಟ್ಟು 71 ಹುದ್ದೆಗಳ ನೇರ ನೇಮಕಾತಿ ನಡೆಯುತ್ತಿದ್ದು ಅದರ ಅಧಿಸೂಚನೆಯನ್ನು ಪ್ರಾಧಿಕಾರವು ಬಿಡುಗಡೆಗೊಳಿಸಿದೆ. ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 07-08-2023 ಕೊನೆಯ ದಿನಾಂಕವಾಗಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಳಗೆ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
MSIL -ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.
ಹುದ್ದೆಗಳ ವಿವರ/ Post Details:
ಸಹಾಯಕ ವ್ಯವಸ್ಥಾಪಕರು – 23 (NHK 20 + HK 03) |
ಮೇಲ್ವಿಚಾರಕರು – 23 (NHK 20 + HK 03) |
ಪದವೀಧರ ಗುಮಾಸ್ತರು – 03(NHK 5 + HK 1) |
ಗುಮಾಸ್ತರು- 13 (NHK 12+ HK 1) |
ಮಾರಾಟ ಪ್ರತಿನಿಧಿ/ ಪ್ರೊಗ್ರಾಮರ್ – 06 (NHK 0 + HK 6) |
ಒಟ್ಟು ಹುದ್ದೆಗಳು- 71 ಹುದ್ದೆಗಳು |
ವೇತನ/ Salary
ಸಹಾಯಕ ವ್ಯವಸ್ಥಾಪಕರು – 44420-80100 |
ಮೇಲ್ವಿಚಾರಕರು – 35150-64250 |
ಪದವೀಧರ ಗುಮಾಸ್ತರು – 25200-50150 |
ಗುಮಾಸ್ತರು- 21900-43100 |
ಮಾರಾಟ ಪ್ರತಿನಿಧಿ/ ಪ್ರೊಗ್ರಾಮರ್ – 28950-55350 |
ಕರ್ನಾಟಕ ಸರ್ಕಾರದ ವೇತನ ನಿಯಮಾವಳಿಗಳ ಪ್ರಕಾರ ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.
ಶೈಕ್ಷಣಿಕ ಅರ್ಹತೆಗಳು/ Educational Qualification:
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ/ ಸಂಬಂಧಿಸಿದ ವಿಷಯದಲ್ಲಿ ಪದವಿ/ ಸ್ನಾತಕೋತ್ತರ ಪದವಿ ಮುಗಿಸಿದವರಿಗೆ ವಿವಿಧ ಉದ್ಯೋಗಾವಕಾಶಗಳು ಲಭ್ಯವಿರುತ್ತವೆ. ವಿದ್ಯಾರ್ಹತೆ ವಿವರಗಳು ಕೆಳಗಿನಂತಿದ್ದು, ಇದರ ಜೊತೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಟ 2 ವರ್ಷದಿಂದ 5 ವರ್ಷದವರೆಗೆ ಅನುಭವ ಹೊಂದಿರಬೇಕು.
ಸಹಾಯಕ ವ್ಯವಸ್ಥಾಪಕರು (ಸೇಲ್ಸ್): MBA
ಸಹಾಯಕ ವ್ಯವಸ್ಥಾಪಕರು (ಅಕೌಂಟ್ಸ್): CA/ CWA/ MBA/ MCom
ಸಹಾಯಕ ವ್ಯವಸ್ಥಾಪಕರು (ಪರ್ಸೊನಲ್): MSW/ MBA
ಸಹಾಯಕ ವ್ಯವಸ್ಥಾಪಕರು (ಫಾರ್ಮಾ): M.Sc in Chemistry/ M.Pharma
ಸಹಾಯಕ ವ್ಯವಸ್ಥಾಪಕರು (ಟೂರ್ಸ್ & ಟ್ರಾವೆಲ್ಸ್): Post Graduate, IATA in tours & Travels
ಸಹಾಯಕ ವ್ಯವಸ್ಥಾಪಕರು (EDP): BE in Computer Science/ MCA
ಸೇಲ್ಸ್ ಸುಪರವೈಸರ್: ಯಾವುದೇ ಪದವಿ
ಸೇಲ್ಸ್ ಇಂಜೀನಿಯರ್ (ಮೆಕ್ಯಾನಿಕಲ್): Diploma in Mechanical Engineering
ಸೇಲ್ಸ್ ಇಂಜೀನಿಯರ್ (ಎಲೆಕ್ಟ್ರಿಕಲ್): Diploma in Electrical Engineering
ಸೇಲ್ಸ್ ಇಂಜೀನಿಯರ್ (ಸಿವಿಲ್): Diploma in Civil Engineering
ಸೇಲ್ಸ್ ಇಂಜೀನಿಯರ್ (E & C): Diploma in Electrical & Communication Engineering
ಅಕೌಂಟ್ಸ್ ಕ್ಲರ್ಕ್: B.Com/ BBA/ Statistics/ Economics/ Mathematics
ಗುಮಾಸ್ತ: ಯಾವುದೇ ಪದವಿ
ಮಾರಾಟ ಪ್ರತಿನಿಧಿ: ಯಾವುದೇ ಪದವಿ
ಅರ್ಜಿ ಶುಲ್ಕ/ Application Fees:
ಸಾಮಾನ್ಯ ಅರ್ಹತಾ & ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ: ರೂ. 1000/-
ಪ.ಜಾ/ ಪಪಂ/ ಕೆ1 ಸೇರಿದ ಅಭ್ಯರ್ಥಿಗಳಿಗೆ : ರೂ. 750/-
ಅಂಗವಿಕಲ & ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 250/-
ಅರ್ಜಿ ಶುಲ್ಕವನ್ನು ಕಂಪ್ಯೂಟರೈಸ್ಡ್ ಅಂಚೆ ಕಛೇರಿಗಳಲ್ಲಿ ಪಾವತಿ ಮಾಡಬಹುದು.
ವಯೋಮಿತಿ/ Age limit:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ಪೂರೈಸಿರಬೇಕು & 35 ವರ್ಷವನ್ನು ಮೀರಿರಬಾರದು.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ
ಇತರೆ ಹಿಂದೂಳಿದ ವರ್ಗ (OBC) : 03 ವರ್ಷ
ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.
ಆಯ್ಕೆವಿಧಾನ/ Selection procedure:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ
ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಬೆಳಗಾವಿ, ಕಲಬುರಗಿ, ಬಿಜಾಪುರ, ಶಿವಮೊಗ್ಗ & ತುಮಕೂರು
ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಪತ್ರಿಕೆ & ನಿರ್ದಿಷ್ಟ ಪತ್ರಿಕೆಗಳನ್ನು ಹೊಂದಿದ್ದು, ಪ್ರತಿಯೊಂದು ಪತ್ರಿಕೆಯು 100 ಅಂಕಗಳನ್ನು ಹೊಂದಿರುತ್ತದೆ. ಒಟ್ಟು 200 ಅಂಕಗಳಿಗೆ ಪರೀಕ್ಷೆ ಇರುತ್ತದೆ.
ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನವಿದ್ದು ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದು ಭಾಗ ಅಂಕಗಳನ್ನು ಕಳೆಯಲಾಗುತ್ತದೆ.
ಅರ್ಜಿ ಹಾಕುವ ವಿಧಾನ/ Application Submission Method:
ಈ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 23.06.2023 ರಿಂದ 22.07.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು ಪ್ರಾಧಿಕಾರದ ವೆಬ್ ಸೈಟ್ www.kea.kar.nic.in ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗೆ ನೀಡಲಾಗಿದೆ.
The Candidates who interested to apply online Click the NEXT button to Application submission.
Important Date/ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 23-06-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:07-08-2023
ಅಂಚೆ ಕಛೇರಿಯಲ್ಲಿ ಅರ್ಜಿ ಪಾವತಿಸುವ ಪ್ರಾರಂಭದ ದಿನಾಂಕ: 26-06-2023
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 10-08-2023
Important Links/ ಪ್ರಮುಖ ಲಿಂಕುಗಳು:
Ashwin.gowda.m.s
Age.20
.s.lc95.5
Madarahalli
Wow, marvelous blog structure! How lengthy have you been running a blog for? you made running a blog look easy The full glance of your site is excellent, as neatly as the content material!