ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿವಿಧ ಹುದ್ದೆಗಳ ನೇಮಕಾತಿ
Brief Information:
ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 400 ಹುದ್ದೆಗಳ ನೇಮಕಾತಿಗೆ ಬಿಬಿಎಂಪಿ ಯಿಂದ ಅಧಿಸೂಚನೆ ಪ್ರಕಟಿಸಲಾಗಿದೆ.
ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ(ರಿ)ದ ವ್ಯಾಪ್ತಿಯಲ್ಲಿ ಹಾಗೂ ಆರ್.ಸಿ.ಹೆಚ್ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ 01 ವರ್ಷದ ಅವಧಿಗೆ ಸಂಪೂರ್ಣ ಗುತ್ತಿಗೆ ಆಧಾರದ ಮೇಲೆ ವಾಕ್ ಇನ್ ಪ್ರಕ್ರಿಯೆ ಮೂಲಕ ನೇಮಕಾತಿ ಮಾಡಿಕೊಳ್ಳಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Name of the Post | No. of Posts | Education | Salary |
Male health worker | 217 | SSLC & Training / Diploma (Respective discipline) | Rs. 11500/- |
Physician | 05 | DNB / M.D or its equivalent | 1,10,000/- |
Radiologist | 05 | DMRD | 1,10,000/- |
OT Technician | 01 | Diploma in OT | 15,750/- |
Staff nurse | 18 | B.Sc/ GNM/ Diploma nursing | 15,750/- |
Pharmacist | 18 | B-Pharma/ D-Pharma | 15,750/- |
Lab Technician | 01 | Diploma in Lab technician | 15,750 |
ANM | 122 | ANM Training | 15,000 |
Vaccination supervisor | 01 | MSW/ equivalent | 20,000 |
Child health related posts | 25 | ||
Social worker | 01 | MSW/ equivalent | 25,000/- |
Counselor | 01 | MSW/ psychology | 16,000/- |
ವಯೋಮಿತಿ:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷಗಳು ತುಂಬಿರಬೇಕು ಹಾಗೂ ಈ ಕೆಳಗೆ ನಮೂದಿಸಿರುವ ವಯೋಮಿತಿಯನ್ನು ಮೀರಿರಬಾರದು
ಸಾಮಾನ್ಯ ವರ್ಗ: 35 ವರ್ಷ
2ಎ, 2ಬಿ, 3ಎ, 3ಬಿ: 38 ವರ್ಷ
ಪ.ಜಾತಿ, ಪ.ಪಂಗಡ, ವರ್ಗ-1: 40 ವರ್ಷ .
ನೇರ ಸಂದರ್ಶನದ ದಿನಾಂಕ:
13ನೇ ಸೆಪ್ಟಂಬರ್, 2021 ರಿಂದ 22ನೇ ಸೆಪ್ಟಂಬರ್, 2021 ರ ವರೆಗೆ ನಡೆಯಲಿದೆ (ಹುದ್ದೆವಾರು ಸಂದರ್ಶನದ ದಿನಾಂಕವನ್ನು ತಿಳಿಯಲು ಇಲ್ಲಿ ನೀಡಲಾಗಿರುವ ನೋಟಿಫಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಿ)
ಸಂದರ್ಶನ ನಡೆಯುವ ಸ್ಥಳ:
ನೌಕರರ ಭವನ, ಬಿಬಿಎಂಪಿ ಕೇಂದ್ರ ಕಛೇರಿ, ಬೆಂಗಳೂರು.
ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನದ ಆವಶ್ಯಕತೆ ಕಡ್ಡಾಯವಾಗಿರುತ್ತದೆ. ಆಸಕ್ತರು ಸಂಬಂಧಿಸಿದ ಮೂಲ ದಾಖಲೆಗಳೊಂದಿಗೆ ಅಭ್ಯರ್ಥಿಗಳು ಪಟ್ಟಿಯಲ್ಲಿ ಸೂಚಿಸಿರುವ ಸ್ಥಳ ಮತ್ತು ದಿನಾಂಕದಂದು ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ. ಮೇಲ್ಕಂಡ ಹುದ್ದೆಯ ಸಂಖ್ಯೆಗಳನ್ನು ಹೆಚ್ಚಿಸುವ / ಕಡಿತಗೊಳಿಸುವ ಅಧಿಕಾರವನ್ನು ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ(ರಿ) ತನ್ನಲ್ಲಿ ಹೊಂದಿದೆ,
ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ: 080-22110445, ಇಮೇಲ್ ಐಡಿ: cpmobbmp@gmail.com ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವೆಬ್ ಸೈಟ್ https://bbmp.gov.inನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿ
Karnataka High court Recruitment- 142 SDA Posts
The New India Assurance Company Ltd. Application invites for 300 Officer Posts
ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ನಲ್ಲಿ ಭರ್ಜರಿ ನೇಮಕಾತಿ