ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 300 ಹುದ್ದೆಗಳಿಗೆ ಅರ್ಜಿ ಆಹ್ವಾನ- BMTC Recruitment

Click here to Share:

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಶಿಶಿಕ್ಷು ಕಾಯ್ದೆ 1961ರ ಪ್ರಕಾರ ಫೆಬ್ರವರಿ2022ರ ಅಧಿವೇಶನಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ತಾಂತ್ರಿಕ ವೃತ್ತಿಗಳಲ್ಲಿ ಪೂರ್ಣಾವಧಿ ಶಿಶಿಕ್ಷು ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅಂತರಜಾಲ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತರಬೇತಿಯ ಅವಧಿಯು ಹತ್ತನೇ ತರಗತಿ ಮುಗಿದವರಿಗೆ 2 ವರ್ಷವಿದ್ದು ಐಟಿಐ ಮುಗಿದವರಿಗೆ ಒಂದು ವರ್ಷದ್ದಾಗಿರುತ್ತದೆ.

ವಯೋಮಿತಿ :

ದಿನಾಂಕ: 30-03-2022 ರಂದು ಕನಿಷ್ಠ 16 ವರ್ಷ ತುಂಬಿರಬೇಕು ಮತ್ತು 26 ವರ್ಷ ಮೀರಿರಬಾರದು.

ವಿದ್ಯಾರ್ಹತೆ :

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಥವಾ ಐಟಿಐ (ಮೆಕಾನಿಕ್ ಡೀಸಲ್ ಹಾಗೂ ಫಿಟ್ಟಿರ್ ವೃತ್ತಿ)ಯಲ್ಲಿ ಉತ್ತೀರ್ಣರಾಗಿರಬೇಕು.

 

Forest Guard Recruitment in Karnataka

ತರಬೇತಿ ಭತ್ಯೆ: ಆಯ್ಕೆಗೊಂಡ ಶಿಶಿಕ್ಷು ಆರ್ಭ್ಯಥಿಗಳಿಗೆ ಈ ಕೆಳಕಂಡಂತೆ ಮಾಸಿಕ ತರಬೇತಿ ಭತ್ಯೆ ನೀಡಲಾಗುವುದು.

ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ ರೂ. 6000/- ಪ್ರತಿ ತಿಂಗಳಿಗೆ ಹಾಗೂ ಐ.ಟಿ.ಐ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ ರೂ. 7000/- ಪ್ರತಿ ತಿಂಗಳಿಗೆ ನಿಗದಿಯಾಗಿರತ್ತದೆ.

ಅಭ್ಯರ್ಥಿಗಳು ಅಂತರಜಾಲ ಪೋರ್ಟಲ್ WWW.apprenticeshipindia.gov.in ನಲ್ಲಿ ಸಲ್ಲಿಸಿರುವ ಅರ್ಜಿಯ ಪ್ರತಿಯೊಂದಿಗೆ, ಇತ್ತೀಚಿನ 02 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಂಬಂಧಪಟ್ಟ ಎಲ್ಲಾ ಮೂಲ ದಾಖಲಾತಿಗಳಾದ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಆಧಾರ್ ಲಿಂಕ್ ಬ್ಯಾಂಕ್ ಖಾತೆಯ ಪ್ರತಿ, ಐ.ಟಿ.ಐ ತೇರ್ಗಡೆ ಹೊಂದಿದ್ದಲ್ಲಿ ಅದರ ಮೂಲ ಅಂಕಪಟ್ಟಿಗಳೊಂದಿಗೆ ದಿನಾಂಕ:30/03/2022 ರಂದು ಬೆಳಿಗ್ಗೆ 10.30 ಗಂಟೆಯಿಂದ 5.00 ಗಂಟೆಯೊಳಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ತರಬೇತಿ ಕೇಂದ್ರ, 2ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣ, ಬೆಂಗಳೂರು-560027, ಇಲ್ಲಿ ಖುದ್ದಾಗಿ ಮೂಲ ದಾಖಲಾತಿಗಳ ಪರಿಶೀಲನೆಗೆ ಹಾಜರಾಗತಕ್ಕದ್ದು ಹಾಗೂ ಮೂಲ ದಾಖಲಾತಿಗಳ ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು ಸಹ ತರುವುದು. ಅಪೂರ್ಣ ಅಥವಾ ವಿಳಂಬವಾಗಿ ಸಲ್ಲಿಸುವ ಅರ್ಜಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ / ಸೂಚನೆಗಳು;

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ನಿರ್ದೇಶನಾಲಯ, ನವ ದೆಹಲಿ ರವರು ಶಿಶಿಕ್ಷ ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಪೋರ್ಟಲ್ WWW.apprenticeshipindia.gov.inನಲ್ಲಿ ನೊಂದಣಿಗೊಳಿಸಿದ್ದಲ್ಲಿ ಮಾತ್ರ ಅವರುಗಳನ್ನು ನಿಯೋಜಿಸಿಕೊಳ್ಳಬೇಕೆಂದು ನಿರ್ದೆಶಿಸಿರುವುದರಿಂದ, ಅಭ್ಯರ್ಥಿಗಳು ಸದರಿ ಪೋರ್ಟಲ್‌ನಲ್ಲಿ ನೋಂದಣಿಗೊಳಿಸುವುದು ಕಡ್ಡಾಯವಾಗಿರುತ್ತದೆ.

1) ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸುವಾಗ ಅವರ ಹೆಸರು, ತಂದೆ ಹೆಸರು, ತಾಯಿ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ವಿದ್ಯಾರ್ಹತೆ, ಜಾತಿ, ಗುಂಪು ಮತ್ತು ಅಪೇಕ್ಷಿತ ವೃತ್ತಿಯ ಮಾಹಿತಿಯನ್ನು ಸ್ಪಷ್ಟವಾಗಿ ನಮೂಧಿಸಬೇಕು.

2) ಅಭ್ಯರ್ಥಿಗಳು ತಮ್ಮ ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ, ಅಭ್ಯರ್ಥಿ ಸಹಿ, ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ ಅಂಕಪಟ್ಟಿಗಳನ್ನು ಸ್ಕ್ಯಾನ್ (Scan) ಮಾಡಿ ಅಪ್ಲೋಡ್ ಮಾಡತಕ್ಕದ್ದು.

3) ವಿದ್ಯಾರ್ಹತೆ ಆಯ್ಕೆ ಮಾಡುವಾಗ 10ನೇ ತರಗತಿ ಎಂದು ಅಥವಾ ಐಟಿಐ ತೇರ್ಗಡೆ ಹೊಂದಿದ್ದಲ್ಲಿ ಐಟಿಐ ಎಂದು ಆಯ್ಕೆ ಮಾಡುವುದು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ವಿದ್ಯಾರ್ಹತೆಯನ್ನು ನಮೂದಿಸಬಾರದು.

4) ಐಟಿಐ ತೇರ್ಗಡೆಗೊಂಡಿರುವ ಅಭ್ಯರ್ಥಿಗಳು ಅವರು ಅಯ್ಕೆ ಮಾಡುವ ವೃತ್ತಿಯಲ್ಲಿ ವ್ಯಾಸಂಗ ಮಾಡಿದ್ದಲ್ಲಿ ಮಾತ್ರ ಅವರಿಗೆ ಶಿಶಿಕ್ಷು ಕಾಯಿದೆ 1961ರ ಪ್ರಕಾರ ತರಬೇತಿ ಅವಧಿಯಲ್ಲಿ ರಿಯಾಯಿತಿ ಪಡೆಯಲು ಅರ್ಹರಾಗಿರುತ್ತಾರೆ. (ಉದಾಹರಣೆಗೆ ಫಿಟ್ಟರ್‌ ವೃತ್ತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಫಿಟ್ಟಿರ್ ವೃತ್ತಿಯಲ್ಲೇ ಐಟಿಐ ತೇರ್ಗಡೆ ಹೊಂದಿರಬೇಕು)

5) ಅಭ್ಯರ್ಥಿಯ ಆಧಾರ್ ಲಿಂಕ್ ಬ್ಯಾಂಕ್ ಖಾತೆ ಸಂಖ್ಯೆ, IFSC Code ಮತ್ತು ಬ್ಯಾಂಕ್ ಖಾತೆಗೆ ಸಂಬಂಧಿಸಿದ ಇತರೆ ವಿವರಗಳನ್ನು ಸ್ಪಷ್ಟವಾಗಿ ನಮೂಧಿಸುವುದು.

6) ಅಭ್ಯರ್ಥಿಗಳಿಗೆ ತರಬೇತಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ಪೋರ್ಟಲ್/ವೆಬ್‌ಸೈಟ್ ಮೂಲಕ ನೇರವಾಗಿ ಅವರ email-idಗೆ ಕಳುಹಿಸಲಾಗುವುದರಿಂದ ಅಭ್ಯರ್ಥಿಗಳು ಅವರ ಸ್ವಂತ email-id ಮತ್ತು ಮೊಬೈಲ್ ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ಖಡ್ಡಾಯವಾಗಿ ನಮೂದಿಸುವುದು | ನೀಡುವುದು.

7) ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ತರಬೇತಿ ಪಡೆಯುವ ಸಂಸ್ಥೆ ಮತ್ತು ಬಿಟಿಪಿ (Establishment and Basic Training Provider (BTP) ಆಯ್ಕೆ ಮಾಡುವಾಗ Bangalore Metropolitan Transport Corporationನ್ನು ಆಯ್ಕೆ ಮಾಡಿಕೊಳ್ಳುವುದು. VI)

 

KPSC Recruitment 2022- Assistant Director Posts

ಸೂಚನೆಗಳು:

1) ಅಭ್ಯರ್ಥಿಗಳು ಈಗಾಗಲೇ ಶಿಶಿಕ್ಷು ಕಾಯ್ದೆ 1961 ರನ್ವಯ ಶಿಶಿಕ್ಷು ತರಬೇತಿ ಪಡೆದಿರುವವರು ಪುನಃ ಅರ್ಜಿ ಸಲ್ಲಿಸಲು ಅರ್ಹರಲ್ಲ.

2) ಶಿಶಿಕ್ಷು ತರಬೇತಿ ಪಡೆಯುವ ಅಭ್ಯರ್ಥಿಗಳು ತಮ್ಮ ತರಬೇತಿ ಪೂರ್ಣಗೊಳಿಸಿದ ನಂತರ ಸಂಸ್ಥೆಯಲ್ಲಿ ಅವರಿಗೆ ಯಾವುದೇ ರೀತಿಯ ನೇಮಕಾತಿ ಮಾಡಿಕೊಳ್ಳುವ ಒಪ್ಪಂದಕ್ಕೆ ಒಳಪಟ್ಟಿರುವುದಿಲ್ಲ ಮತ್ತು ತರಬೇತಿ ಪಡೆಯಲು ಅರ್ಹತೆ ಪಡೆದವರು ಶಿಶಿಕ್ಷು. ಕಾಯ್ದೆ 1961ರ ನಿಯಮಗಳು, ನಿಬಂಧನೆ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತಾರೆ.

3) ತಾಂತ್ರಿಕ ಶಿಶಿಕ್ಷು ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಉತ್ತಮ ದೇಹದಾರ್ಡ್ಯತೆ ಹೊಂದಿರಬೇಕು.

 

Important Links

Registration

Notification

Official Website

 

 

 

 


Click here to Share:
Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *