SDA, Group C, PSI Recruitment – ಕೊರೊನಾ ಲಾಕ್ಡೌನ್ ನಡುವೆ ಸ್ಪರ್ಧಾತ್ಮಕ ಪರೀಕ್ಷೆಗಳ  ಕಥೆಯೇನು? ಇನ್ನೆಷ್ಟು ದಿನ ಕಾಯಬೇಕು

Click here to Share:

SDA, Group C, PSI Recruitment – ಕೊರೊನಾ ಲಾಕ್ಡೌನ್ ನಡುವೆ ಸ್ಪರ್ಧಾತ್ಮಕ ಪರೀಕ್ಷೆಗಳ  ಕಥೆಯೇನು? ಇನ್ನೆಷ್ಟು ದಿನ ಕಾಯಬೇಕು:

SDA ಪರೀಕ್ಷೆ ಯಾವಾಗ ನಡೆಯುತ್ತೆ?

ಗ್ರೂಪ್ ಸಿ & ಇನ್ನಿತರ ಹುದ್ದೆಗಳ ಕಥೆಯೇನು?

ಪಿಎಸ್ಐ ಹುದ್ದೆಗಳ ಫಿಸಿಕಲ್ ಪರೀಕ್ಷೆ ಯಾವಾಗ?

ಕರ್ನಾಟಕ ಲೋಕಸೇವಾ ಆಯೋಗದಿಂದ SDA & ಗ್ರೂಪ್ C ಪರೀಕ್ಷೆಗಳನ್ನು ನಡೆಸಲು ಇನ್ನೇನು ದಿನಾಂಕ ಪ್ರಕಟಿಸುವುದು ಬಾಕಿ ಇತ್ತು, ಅಷ್ಟರಲ್ಲಿಯೇ ರಾಜ್ಯ ರಾಷ್ಟ್ರದಲ್ಲಿ ಕೊರೊನಾ ಮತ್ತೊಮ್ಮೆ ತನ್ನ ಕರಾಳ ಮುಖವನ್ನು ತೋರಿಸುತ್ತಿದೆ. ಹಾಗಾಗಿ ಇನ್ನು ಎರಡು ತಿಂಗಳು ಪರೀಕ್ಷೆಗಳ ದಿನಾಂಕ ಪ್ರಕಟವಾಗುವುದಿಲ್ಲ.

ಇದೇ ವರ್ಷದ ಆರಂಭದಲ್ಲಿ 545 ಪೋಲಿಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಎಲ್ಲ ಅಂದುಕೊಂಡಂತೆ ನಡೆದರೆ ಇಷ್ಟರಲ್ಲಿಯೇ ದೈಹಿಕ ಸಾಮಾರ್ಥ್ಯದ ಪರೀಕ್ಷೆಗೆ ದಿನಾಂಕ ಪ್ರಕಟಿಸಬೇಕಿತ್ತು. ಸಧ್ಯ ಅರ್ಜಿ ಚಾಲ್ತಿಯಲ್ಲಿ ರುವ 411 ಪಿಎಸೈ ಹುದ್ದೆಗಳು ಸೇರಿದಂತೆ  ಎರಡೂ ನೇಮಕಾತಿಗಳ PST-ET ಪರೀಕ್ಷೆಗಳು ಒಂದೇ ಬಾರಿಗೆ ನಡೆಯುವ ಸಾದ್ಯತೆ ಇದೆ.

 

ಇತ್ತೀಚಿನ State & Central Govt.  ನೇಮಕಾತಿ ಅಧಿಸೂಚನೆಗಳು

 

            ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಎಲ್ಲೆಡೆ  ತೀವ್ರಗತಿಯಲ್ಲಿ ಪಸರಿಸುತ್ತಿರುವ ಹಿನ್ನಲೆಯಲ್ಲಿ ಯಾವುದೇ ಪರೀಕ್ಷೆ ನಡೆಯವುದು ಅನುಮಾನವಾಗಿದೆ. ವಿಕೆಂಡ್ ಲಾಕ್ಡೌನ್ & ನೈಟ್ ಕರ್ಪ್ಯೂ ವನ್ನು ಹೇರಲಾಗಿದೆ ಇದು ಮುಗಿಯುವವರೆಗೂ ಪರೀಕ್ಷೆಯಂತೂ ನಡೆಯುವುದಿಲ್ಲ.

            ಪ್ರಸ್ತುತ ಕೊರೊನಾ ಸಾಂಕ್ರಾಮಿಕದ ವಿರುದ್ಧ ಎಲ್ಲರೂ ಒಟ್ಟಾಗಿ ಹೊರಡುವ ಅವಶ್ಯತೆ ಇದೆ. ಆದಕಾರಣ ಸ್ಪರ್ಧಾದೀಪ ಚಾನೆಲ್ ನ ಎಲ್ಲ ಸ್ಪರ್ಧಾರ್ಥಿಗಳು ಕೊರೊನಾ ದಿಂದ ರಕ್ಷಿಸಿಕೊಳ್ಳಲು ಸುರಕ್ಷತಾ ನಿಯಮಗಳನ್ನು (SOP) ಸರಿಯಾಗಿ ಪಾಲಿಸಿ.

  • ಸಾಮಾಜಿಕ ಅಂತರವನ್ನು ಪಾಲಿಸಿ (ಆದಷ್ಟು ಮನೆಯಲ್ಲಿಯೇ ಇರಿ)
  • ಮಾಸ್ಕನ್ನು ಕಡ್ಡಾಯವಾಗಿ ಧರಿಸಿ
  • ಹ್ಯಾಂಡ್ ಸ್ಯಾನಿಟೈಸರ್ ಅನ್ನು ಬಳಸಿ ಅಥವಾ ಕೈಗಳನ್ನು ಸೋಪಿನಿಂದ ಸ್ವಚ್ಛವಾಗಿಸಿಕೊಳ್ಳಿ.

ನೀವು ಮಾಡಬೇಕಿರುವುದೇನು?

  1. ಲಾಕ್ಡೌನ್ ನ ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ, ಪರೀಕ್ಷೆಗಾಗಿ ಇನ್ನು ಹೆಚ್ಚಿನ ಜ್ಞಾನವನ್ನು ನಿಮ್ಮದಾಗಿಸಿಕೊಳ್ಳಿ.
  2. ಮನೆ ಬಿಟ್ಟು ಹೊರಬರಬೇಡಿ, ಮನೆಯಲ್ಲಿ ಸಿಗುವ ಹೆಚ್ಚಿನ ಸಮಯವನ್ನು ನಿಮ್ಮಅಧ್ಯಯನಕ್ಕೆಂದು ಮೀಸಲಿಡಿ.
  3. SDA, FDA, Group C, PSI ಹಳೆಯ ಪ್ರಶ್ನೆಪತ್ರಿಕೆಗಳನ್ನು ವಿಶ್ಲೇಷಣೆ ಮಾಡಿ.
  4. ಪಿಎಸ್ಐ ಹುದ್ದೆಗಳ ET-PST ಗಾಗಿ ಪ್ರತಿದಿನ ಬೆಳಗ್ಗೆ ಪ್ರಾಕ್ಟೀಸ್ ಮಾಡಿ.
  5. PSI ಪರೀಕ್ಷೆಗಳಿಗಾಗಿ ಪ್ರಬಂಧ ಬರೆಯುವಿಕೆ & ಇಂಗ್ಲೀಷ್ ಭಾಷೆಯ ಜ್ಞಾನವನ್ನು ಹೆಚ್ಚಿಸಿಕೊಳ್ಳಿ.
  6. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೊಸ ಹೊಸ ಪುಸ್ತಕಗಳನ್ನು ಸಂಗ್ರಹಿಸಿ ಅದನ್ನು ಓದಿ. ಪಾಯಿಂಟ್ಸ್ ನೋಟ್ಸ್ ಓದುವುದಕ್ಕಿಂತ ಆದಷ್ಟು ರೆಫರೆನ್ಸ್ ಪುಸ್ತಕಗಳನ್ನು ಓದುವುದು ಒಳ್ಳೆಯದು.
  7. ಇದೊಂದು ಕಠಿಣ ಸಮಯವಾಗಿರುತ್ತದೆ, ಇದನ್ನು ಪ್ರಬಲವಾಗಿ ಎದುರಿಸಬೇಕೆ ಹೊರೆತು ಎದೆಗುಂದಬಾರದು.

 ಓದಲು ಉಪಯುಕ್ತ ನೋಟ್ಸ್, ಪಿಡಿಎಫ್, ಪ್ರಶ್ನೆಪತ್ರಿಕೆಗಳು, ಕ್ವಿಜ್ ಇತ್ಯಾದಿ

       ಸ್ನೇಹಿತರೇ, ದೃತಿಗೆಡಬೇಡಿ, ದೈರ್ಯಹೀನರಾಗಬೇಡಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ, ಪರಿಸ್ಥಿತಿಯಿಂದ ವಿಮುಖರಾಗಬೇಡಿ, ಸಮಯ ಎಂದಿಗೂ ಹಿಗೆಯೇ ಇರುವುದಿಲ್ಲ. ಈಗ ಕಷ್ಟಪಟ್ಟರೇ ಮುಂದಿನ ದಿನಗಳು ಒಳ್ಳೆಯವು ಆಗಲಿವೆ. ನೀವು ಜಗತ್ತಿನ ಯಾವ ಜೀವಜಂತು ಮೇಲೂ ವಿಶ್ವಾಸವಿಡದಿದ್ದರೂ ಪರವಾಗಿಲ್ಲ ಆದರೆ ನಿಮ್ಮ ಮೇಲಿನ ನಂಬಿಕೆ, ವಿಶ್ವಾಸ ಯಾವಾಗಲೂ ಕಳೆದುಕೊಳ್ಳಬೇಡಿ.

“ಕೊರೊನಾಕ್ಕೆ ನೀವು ಒಂದು ಜೀವ ಮಾತ್ರ, ಸರ್ಕಾರಕ್ಕೆ ನೀವು ಒಂದು ಸಂಖ್ಯೆ ಮಾತ್ರ, ಆದರೆ ನಿಮ್ಮ ಕುಟುಂಬಕ್ಕೆ ನೀವು ಒಂದು ಅಮೂಲ್ಯ ರತ್ನ”.  ಇದರಿಂದ ಸುರಕ್ಷತೆಯಿಂದಿರುವುದು ನಿಮ್ಮ ಕೈಯಲ್ಲಿಯೇ ಇದೆ. Stay home, Stay Safe

SDA & FDA Exam ಮಾದರಿ ಪರೀಕ್ಷೆ/ GK Mock Test/ Quiz- Part 1

 

Karnataka Police Sub Inspector- PSI Exam Pattern, Syllabus and Previous/ Old year Question Paper

 

Second Division Assistant- SDA 2020 Syllabus and Exam Pattern


Click here to Share:
Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *