ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರದಲ್ಲಿ ನೇಮಕಾತಿ ಅಧಿಸೂಚನೆ: ಪ್ರಾಂಶುಪಾಲರ ಹುದ್ದೆಗಳಿಗೆ ಅರ್ಜಿ ಆಹ್ವಾನ

Click here to Share:

ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರದಲ್ಲಿ ನೇಮಕಾತಿ ಅಧಿಸೂಚನೆ: ಪ್ರಾಂಶುಪಾಲರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರದಲ್ಲಿ ಹೊಸ ಅಧಿಸೂಚನೆ ಪ್ರಕಟವಾಗಿದ್ದು, ಇದರಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳಿಗೆ ಅರ್ಹ ಮತ್ತು ಆಕಾಂಕ್ಷಿತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಹುದ್ದೆಗಳು ಗುತ್ತಿಗೆ ಆಧಾರದ ಮೇಲೆ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದ್ದು ಆಸಕ್ತರು ದಿನಾಂಕ 22-08-2022 ರ ಒಳಗಾಗಿ ಕೆಳಗೆ ನೀಡಲಾಗಿರುವ ವಿಧಾನದ ಮೂಲಕ ಅರ್ಜಿ ಸಲ್ಲಿಸಬಹುದು.

 

ಹುದ್ದೆಯ ಪದನಾಮ : ಪ್ರಾಂಶುಪಾಲರು

ಹುದ್ದೆಗಳ ಸಂಖ್ಯೆ : 03

ಹುದ್ದೆಗಳು ಖಾಲಿ ಇರುವ ಜಿಲ್ಲೆಗಳು

1.ಕೋಲಾರ 2.ತುಮಕೂರು 3.ಚಿತ್ರದುರ್ಗ

ಕ್ರೋಢೀಕೃತ ಮಾಸಿಕ ಸಂಭಾವನೆ ರೂ:50000/

 

ವಯೋಮಿತಿ

ಕನಿಷ್ಠ -28 ವರ್ಷಗಳು

ಗರಿಷ್ಠ -63 ವರ್ಷಗಳು

 

ವಿದ್ಯಾರ್ಹತೆ

ಎಐಸಿಟಿಇ ಯಿಂದ ಅನುಮೋದಿತವಾದ ಮತ್ತು ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ / ಟೂಲ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ಸಮನಾಂತರವಾದ ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರಬೇಕು.

ಅನುಭವ:

ಎಐಸಿಟಿಇಯಿಂದ ಅನುಮೋದಿತವಾದ ಮತ್ತು ಮಾನ್ಯತೆ ಹೊಂದಿರುವ ಇಂಜಿನಿಯರಿಂಗ್ ಕಾಲೇಜು/ ಕೇಂದ್ರಗಳಲ್ಲಿ 5 ವರ್ಷಗಳ ಬೋಧನಾ ಅನುಭವವನ್ನು ಹೊಂದಿರಬೇಕು

 

ಪ್ರಮುಖ ದಿನಾಂಕ:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22.08.2022 ಸಂಜೆ 5:00 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆಯ ದಿನಾಂಕ:22.09.2022 ನಿಗದಿಪಡಿಸಲಾಗಿದೆ.

 

ಆಯ್ಕೆಯ ಪ್ರಕ್ರಿಯೆ:

1) ನಿಗದಿತ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಕೆಲಸದ ಅನುಭವದ ಅರ್ಹತಾ ಮಾನದಂಡವನ್ನು ಪೂರೈಸುವ ಅಭ್ಯರ್ಥಿಗಳನ್ನು ಅಂಕಗಳುಳ್ಳ ಲಿಖಿತ ಪರೀಕ್ಷೆಗೆ (Objective type)ಗೆ ಅಹ್ವಾನಿಸಲಾಗುತ್ತದೆ.

2) ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ತಾಂತ್ರಿಕ ಸಂದರ್ಶನಕ್ಕೆ ಅರ್ಹರಾಗುವ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ, ಅವರುಗಳನ್ನು ತಾಂತ್ರಿಕ ಸಂದರ್ಶನಕ್ಕೆ ಅಹ್ವಾನಿಸಲಾಗುವುದು.

 

ಗುತ್ತಿಗೆಯ ಅವಧಿ:

ಗುತ್ತಿಗೆ ಅವಧಿಯು ಒಂದು ವರ್ಷದ್ದಾಗಿರುತ್ತದೆ. ವ್ಯಕ್ತಿಯ ಕಾರ್ಯಕ್ಷಮತೆಯ ಮೌಲ್ಯಮಾಪನದ ಆಧಾರದ ಮೇಲೆ ಗರಿಷ್ಠ 3 ವರ್ಷಗಳ ವರೆಗೆ ವಿಸ್ತರಿಸಬಹುದಾಗಿದೆ

 

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿಗಳನ್ನು ಸಂಸ್ಥೆಯ ಜಾಲತಾಣ https://gttc.karnataka.gov.in ಯಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ವ್ಯವಸ್ಥಾಪಕ ನಿರ್ದೇಶಕರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ರಾಜಾಜಿನಗರ ಕೈಗಾರಿಕಾ ವಸಾಹತು, ಬೆಂಗಳೂರು-560010 ವಿಳಾಸಕ್ಕೆ ಕಳುಹಿಸತಕ್ಕದ್ದು, ಲಕೋಟೆಯ ಮೇಲ್ಬಾಗದ ಎಡಬದಿಯಲ್ಲಿ ‘ಪ್ರಾಂಶುಪಾಲರು’ ಹುದ್ದೆಗೆ ಎಂದು ನಮೂದಿಸತಕ್ಕದು. ಸಂದರ್ಶನದ ವೇಳೆಯಲ್ಲಿ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಪರಿಶೀಲನೆಗಾಗಿ ಒದಗಿಸುವುದು.

 

ಸಂದರ್ಶನ ದಿನಾಂಕ ಮತ್ತು ಸಮಯ ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ವ್ಯವಸ್ಥಾಪಕರು-ಆಡಳಿತ, ದೂರವಾಣಿ ಸಂಖ್ಯೆ:080-23384303, ಉಪ ಪ್ರಧಾನ ವ್ಯವಸ್ಥಾಪಕರು-ತರಬೇತಿ ದೂರವಾಣಿ ಸಂಖ್ಯೆ: 080-23385386 ಇವರನ್ನು ಸಂಪರ್ಕಿಸುವುದು.

 

IMPORTANT LINKS

Official Website

Notification

Application Format

 

 

Recent Job Notification:

KPSC New Notification

District Court Recruitment 2022

ಜಿಲ್ಲಾಧಿಕಾರಿಗಳ ಕಾರ್ಯಲಯದಿಂದ ಅಧಿಸೂಚನೆ

1411 Constable Recruitment

IBPS Recruitment 2022


Click here to Share:
Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *