ಕರ್ನಾಟಕ ರಾಜ್ಯ ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ 1222 ಫೈರ್‌ಮ್ಯಾನ್ ಹುದ್ದೆಗಳ ಭರ್ತಿ ಕುರಿತಂತೆ ಪರಿಷ್ಕೃತ ಅರ್ಹತಾ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ: Karnataka Fire Dept. Fireman Recruitment eligibility list 2023

Click here to Share:

ಕರ್ನಾಟಕ ರಾಜ್ಯ ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ 1222 ಫೈರ್‌ಮ್ಯಾನ್ ಹುದ್ದೆಗಳ ಭರ್ತಿ ಕುರಿತಂತೆ ಪರಿಷ್ಕೃತ ಅರ್ಹತಾ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ: Karnataka Fire Dept. Fireman Recruitment eligibility list 2023

ಕರ್ನಾಟಕ ರಾಜ್ಯ ಅಗ್ನಿಶಾಮಕ & ತುರ್ತು ಸೇವಾ‌ಇಲಾಖೆಯಲ್ಲಿ 2020 ರಲ್ಲಿ ಅಧಿಸೂಚಿಸಲಾಗಿದ್ದ ಒಟ್ಟು 1222 ಅಗ್ನಿಶಾಮಕ ಹುದ್ದೆಗಳ ನೇಮಕಾತಿ ಕುರಿತಂತೆ ಪರಿಷ್ಕೃತ ತಾತ್ಕಾಲಿಕ ಅರ್ಹತಾ ಆಯ್ಕೆಪಟ್ಟಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಖಾಲಿ ಇರುವ ಅಗ್ನಿಶಾಮಕ ಹುದ್ದೆಗೆ 2020-21 ನೇ ಸಾಲಿನಲ್ಲಿ ನೇರ ನೇಮಕಾತಿಯನ್ವಯ ಈಗಾಗಲೇ ಹೊರಡಿಸಿರುವ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ನೇಮಕವಾಗದ ಉಳಿದ ಮೂಲ ವೃಂದ 126 ಮತ್ತು ಕಲ್ಯಾಣ-ಕರ್ನಾಟಕ ವೃಂದ 45 ಸೇರಿ ಒಟ್ಟು 171 ಅಭ್ಯರ್ಥಿಗಳ ಪರಿಷ್ಕೃತ ಅರ್ಹತಾ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕೆಳಗಿನ ಲಿಂಕ್ ಮೂಲಕ ಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. 

4055 ಪಿಯು ಲೆಕ್ಚರರ್ ನೇಮಕಾತಿಗೆ ಅಧಿಸೂಚನೆ: ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ಅಗ್ನಿಶಾಮಕ ಹುದ್ದೆಯ ಉಳಿದ ಮೂಲ ವೃಂದದ 983 ಮತ್ತು ಕಲ್ಯಾಣ-ಕರ್ನಾಟಕ 239 ಹುದ್ದೆಗಳು ಒಟ್ಟು 1222 ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಿಕೊಳ್ಳಲು 18-06-2020 ರಂದು ಅಧಿಸೂಚನೆ ಹೊರಡಿಸಿದ್ದು, ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ 30-11-2021 ರಂದು 1222 ಅಗ್ನಿಶಾಮಕರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಘೋಷಿಸಲಾಗಿರುತ್ತದೆ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳ ಎಲ್ಲಾ ಮೂಲ ದಾಖಲೆಗಳು ನೈಜತೆ ಪೂರ್ಣಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸಲಾಗಿರುತ್ತದೆ.

ಕರ್ನಾಟಕ ಶಿಕ್ಷಣ ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ: ಕೇಂದ್ರ ಕಛೇರಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ- ವೇತನ ರೂ. 75000

ಮುಂದುವರೆದು 1222 ಅಭ್ಯರ್ಥಿಗಳ ಅಂಕಪಟ್ಟಿಗಳ ಪರಿಶೀಲನೆ ವೇಳೆ ನಕಲಿ ದಾಖಲೆ ಎಂದು ಬಂದ ಅಭ್ಯರ್ಥಿಗಳು, ವೈದ್ಯಕೀಯ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಅಭ್ಯರ್ಥಿಗಳು, ಮೃತಹೊಂದಿರುವ ಅಭ್ಯರ್ಥಿ, ಮಾಜಿ ಸೈನಿಕ ಮೀಸಲಾತಿ ಅನ್ವಯಿಸದೇ ಇರುವ ಅಭ್ಯರ್ಥಿ ಹಾಗೂ ವಿವಿಧ ಕಾರಣಗಳಿಂದ ಅಭ್ಯರ್ಥಿಗಳ ಕೋರಿಕೆಯನ್ವಯ ಅಭ್ಯರ್ಥಿತನವನ್ನು ರದ್ದುಪಡಿಸಿರುವ ಅಭ್ಯರ್ಥಿಗಳು ಒಟ್ಟು 171 ಅಭ್ಯರ್ಥಿಗಳಿಗೆ ನಿಯಮಾನುಸಾರ ಈಗಾಗಲೇ ಅಭ್ಯರ್ಥಿತನವನ್ನು ರದ್ದುಪಡಿಸಿರುವ ಬಗ್ಗೆ ಹಿಂಬರಹ ನೀಡಲಾಗಿರುತ್ತದೆ. ಈಗ ಉಂಟಾಗಿರುವ 171 ಅಭ್ಯರ್ಥಿಗಳ ರಿಕ್ತಸ್ಥಾನ ಬದಲಾಗಿ ಮೆರಿಟ್ ಮತ್ತು ಮೀಸಲಾತಿ ಅನ್ವಯ ಪರಿಷ್ಕೃತ  ಅರ್ಹತಾ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಇಲಾಖಾ ವೃಂದ ಮತ್ತು ನೇಮಕಾತಿ ನಿಯಮಗಳು-2013 ರನ್ವಯ ತಯಾರಿಸಲಾಗಿರುತ್ತದೆ. ಇದರಲ್ಲಿ ಉಳಿದ ಮೂಲ ವೃಂದದ 126 ಮತ್ತು ಕಲ್ಯಾಣ ಕರ್ನಾಟಕ ವೃಂದದ 45, ಸೇರಿ ಒಟ್ಟು 171 ಅಭ್ಯರ್ಥಿಗಳ ಪರಿಷ್ಕೃತ ಅರ್ಹತಾ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಈ ಕೆಳಕಂಡ ಷರತ್ತುಗಳನ್ವಯ ಪ್ರಕಟಿಸಲಾಗಿರುತ್ತದೆ. ಕಂಡು

ಕರ್ನಾಟಕದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಾರ್ಯಲಯದಲ್ಲಿ ಖಾಲಿ ಇರುವ ಕಛೇರಿ ಸಹಾಯಕ, ಡಾಟಾ ಎಂಟ್ರಿ ಆಪರೇಟರ್ & ಬ್ಲಾಕ್ ಸಹಾಯಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

1) ಆಯ್ಕೆ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು ಇದ್ದ ಕಾರಣದಿಂದ ಸದರಿಯವರಿಗೆ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ, ಯಾವುದೇ ರೀತಿಯ ಕಾನೂನಾತ್ಮಕ ಹಕ್ಕು ಇರುವುದಿಲ್ಲ. ಸದರಿ ನೇಮಕಾತಿಯು ಮೇಲ್ಕಂಡಂತೆ ಹೇಳಲಾದ ಷರತ್ತುಗಳಿಗೆ ಒಳಪಟ್ಟಿರುತ್ತದೆ.

2) ಈ ಆಯ್ಕೆ ಪಟ್ಟಿಯು ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ / ಮಾನ್ಯ ಉಚ್ಚ ನ್ಯಾಯಾಲಯ | ಮಾನ್ಯ ಭಾರತದ ಸರ್ವೋಚ್ಚ ನ್ಯಾಯಾಲಯದ ಅಂತಿಮ ತೀರ್ಮಾನಗಳಿಗೆ ಒಳಪಟ್ಟಿರುತ್ತದೆ.

 

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.

ಪ್ರಮುಖ ಲಿಂಕುಗಳು/ Important Links

ಅರ್ಹತಾ ಪಟ್ಟಿ/ Eligibility Lists

ವೆಬ್ಸೈಟ್/ Website

 


Click here to Share:
Bookmark the permalink.

About sdkpscjob

www.kpscjobs.com Educator & Blogger

4 Responses to ಕರ್ನಾಟಕ ರಾಜ್ಯ ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ 1222 ಫೈರ್‌ಮ್ಯಾನ್ ಹುದ್ದೆಗಳ ಭರ್ತಿ ಕುರಿತಂತೆ ಪರಿಷ್ಕೃತ ಅರ್ಹತಾ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ: Karnataka Fire Dept. Fireman Recruitment eligibility list 2023

  1. Pingback: ಕರ್ನಾಟಕ ರಾಜ್ಯ ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ 1222 ಫೈರ್ಮ್ಯಾನ್ ಹುದ್ದೆಗಳ ಭರ್ತಿಗಾಗಿ ಪರಿಷ್ಕೃತ ಅರ್ಹತಾ

  2. Pingback: ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಗ್ರೂಪ್ ಎ & ಬಿ ಬೋಧಕೇತರ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ-

  3. Gururaj says:

    ಐತಿ pass

Leave a Reply

Your email address will not be published. Required fields are marked *