4055 ಪಿಯು ಲೆಕ್ಚರರ್ ನೇಮಕಾತಿಗೆ ಅಧಿಸೂಚನೆ: ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ- PU Guest Lecturer Recruitment 2023
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. 2023-24 ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಗಳಲ್ಲಿ ಖಾಲಿ ಇರುವ 4055 ಅತಿಥಿ ಉಪನ್ಯಾಸಕರ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ. ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳ ತಾತ್ಕಾಲಿಕ ಭರ್ತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಫ್ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ಮೇಲೆ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 4055 ಪಿಯು ಉಪನ್ಯಾಸಕರ ಹುದ್ದೆಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡಲು ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ/ Post Details:
ಬೆಳಗಾವಿ- 140 |
ಬಾಗಲಕೋಟೆ – 190 |
ವಿಜಯಪುರ- 130 |
ಕಲಬುರಗಿ – 110 |
ಬೀದರ- 50 |
ರಾಯಚೂರು – 120 |
ಕೊಪ್ಪಳ- 140 |
ಗದಗ- 95 |
ಧಾರವಾಡ- 60 |
ಉತ್ತರ ಕನ್ನಡ- 140 |
ಹಾವೇರಿ- 120 |
ಬಳ್ಳಾರಿ- 160 |
ಚಿತ್ರದುರ್ಗಾ- 70 |
ದಾವಣಗೆರೆ- 150 |
ಶಿವಮೊಗ್ಗ- 90 |
ಉಡುಪಿ- 200 |
ಚಿಕ್ಕಮಗಳೂರು- 160 |
ತುಮಕೂರು- 200 |
ಕೋಲಾರ- 180 |
ಬೆಂಗಳೂರು ದಕ್ಷಿಣ- 45 |
ಬೆಂಗಳೂರು ಗ್ರಾಮೀಣ- 70 |
ಮಂಡ್ಯ- 130 |
ಹಾಸನ- 180 |
ದಕ್ಷಿಣ ಕನ್ನಡ- 240 |
ಕೊಡಗು- 60 |
ಮೈಸೂರು- 150 |
ಚಾಮರಾಜನಗರ- 95 |
ಬೆಂಗಳೂರು ಉತ್ತರ- 80 |
ಚಿಕ್ಕಬಳ್ಳಾಪುರ- 100 |
ರಾಮನಗರ- 150 |
ಯಾದಗಿರಿ- 100 |
ಒಟ್ಟು ಹುದ್ದೆಗಳು- 4055 |
ವೇತನ/ Salary
ಪ್ರತಿ ತಿಂಗಳು ರೂ. 12000/- ಗೌರವ ಧನ ನೀಡಲಾಗುತ್ತದೆ
ಶೈಕ್ಷಣಿಕ ಅರ್ಹತೆಗಳು/ Educational Qualification:
ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಕನಿಷ್ಟ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ & ಬಿಎಡ್ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಅರ್ಜಿ ಶುಲ್ಕ/ Application Fees:
ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ
ವಯೋಮಿತಿ/ Age limit: (As on Closing date)
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಕೆಳಗೆ ನೀಡಿರುವ ಗರಿಷ್ಟ ವಯೋಮಿತಿಯನ್ನು ಮೀರುವಂತಿಲ್ಲ.
ಆಯ್ಕೆವಿಧಾನ/ Selection procedure:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿಗದಿಪಡಿಸಿರುವ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆಮಾಡಲಾಗುತ್ತದೆ.
ಪ್ರಮುಖ ಸೂಚನೆಗಳು:
1) ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55ರಷ್ಟು ಅಂಕಗಳನ್ನು ಅಭ್ಯರ್ಥಿಗಳನ್ನು ಅತಿಥಿ ಉಪನ್ಯಾಸಕರಾಗಿ ನೇಮಕ ಮಾಡಿಕೊಳ್ಳುವುದು.
2) ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ, ಕಡಿಮೆ ಕಾರ್ಯಭಾರ ಹೊಂದಿರುವ ವಿಷಯಗಳ ಉಪನ್ಯಾಸಕರನ್ನು ಜಿಲ್ಲೆಯ ಇತರೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನಿಯೋಜಿಸಿದ ನಂತರ ಉಳಿಕೆ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸುವುದು.
3) ಉಪನ್ಯಾಸಕರೇ ಇಲ್ಲದಿರುವ ಕಡೆ ಹಾಗೂ ನಿಯೋಜನೆಯಂತಹ ಬದಲಿ ವ್ಯವಸ್ಥೆ ಮಾಡಲು ಸಾಧ್ಯವಿಲ್ಲದಿರುವ ಕಡೆ ಮಾತ್ರ ಅತಿಥಿ ಉಪನ್ಯಾಸಕರನ್ನು ಉಪಯೋಗಿಸಿಕೊಳ್ಳಬಹುದು.
4) ಮಂಜೂರಾದ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ ಹಾಗೂ ಸಂಯೋಜನೆಯನ್ನು ಮಂಜೂರು ಮಾಡಿ ಹುದ್ದೆ ಮಂಜೂರಾಗದ ವಿಷಯಗಳಿಗೆ ಮಾತ್ರ ಅತಿಥಿ ಉಪನ್ಯಾಸಕರ ಸೇವೆಯನ್ನು ಉಪಯೋಗಿಸಿಕೊಳ್ಳತಕ್ಕದ್ದು.
5) ಪ್ರತಿ ಅತಿಥಿ ಉಪನ್ಯಾಸಕರಿಗೆ ವಾರದಲ್ಲಿ ಗರಿಷ್ಠ 10 ಗಂಟೆಗಳ ಕಾರ್ಯಭಾರವನ್ನು ಮಾತ್ರ ನಿರ್ವಹಿಸಲು ಅನುಮತಿ ನೀಡಬಹುದು.
6) ಯಾವುದೇ ಕಾಲೇಜಿನಲ್ಲಿ ಪ್ರತಿ ವಿಷಯದಲ್ಲಿ ವಾರದಲ್ಲಿ 10/12 ಗಂಟೆಗಳಿಗಿಂತ ಹೆಚ್ಚು ಕಾರ್ಯಭಾರವಿದ್ದಲ್ಲಿ ಇಬ್ಬರು ಅತಿಥಿ ಉಪನ್ಯಾಸಕರನ್ನು ಉಪಯೋಗಿಸಿಕೊಳ್ಳಬಹುದು.
7) ಈ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂ ಉಪನ್ಯಾಸಕರ ನೇಮಕಾತಿ ಆಗುವವರೆಗೆ ಅಥವಾ 2023-24ನೇ ಶೈಕ್ಷಣಿಕ ವರ್ಷದ ಅಂತ್ಯದ ವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮಾತ್ರ ಬಳಸಿಕೊಳ್ಳತಕ್ಕದ್ದು.
8) ಸರ್ಕಾರದ ನಿಯಮಗಳಲ್ಲಿ ಈ ಅವಧಿಯಲ್ಲಿ ಖಾಯಂ ಉಪನ್ಯಾಸಕರು ನೇಮಕಾತಿ ಹೊಂದಿ ಕರ್ತವ್ಯಕ್ಕೆ ಹಾಜರಾದ ತಕ್ಷಣದಿಂದ ಅತಿಥಿ ಉಪನ್ಯಾಸಕರ ಕಾರ್ಯ ನಿರ್ವಹಣೆಯು ತಂತಾನೆ ರದ್ದಾಗುತ್ತದೆ.
9) ಪ್ರಾಚಾರ್ಯರ ಬೋಧನಾ ವಿಷಯವೇ ಇರುವ ಹುದ್ದೆ ಖಾಲಿ ಇದ್ದಲ್ಲಿ, ಅಂತಹ ಹುದ್ದೆಯ ಕಾರ್ಯಭಾರವು ವಾರದಲ್ಲಿ 10 ಗಂಟೆಗೆ ಮೀರದಿದ್ದಲ್ಲಿ ಅತಿಥಿ ಉಪನ್ಯಾಸಕರ ಸೇವೆಯನ್ನು ಬಳಸುವಂತಿಲ್ಲ.
10) ಆಯಾ ವಿಷಯದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಲು ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಮುಂದೆ ಬಂದಲ್ಲಿ ಅಂತಹವರ ಪೈಕಿ ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚಿನ ಅಂಕ ಪಡೆವರನ್ನು ಆಯಾ ಕಾಲೇಜಿನ ಪ್ರಾಚಾರ್ಯರು ಹಾಗೂ ಕಾಲೇಜಿನ ಹಿರಿಯ ಉಪನ್ಯಾಸಕರು ಇರುವ ಸಮಿತಿಯ ಮೂಲಕ ಆಯ್ಕೆ ಮಾಡತಕ್ಕದ್ದು.
ಅರ್ಜಿ ಹಾಕುವ ವಿಧಾನ/ Application Submission Method:
ಆಸಕ್ತ ಹಾಗೂ ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ತಮ್ಮ ಬಯೋಡಾಟಾ, ಇತ್ತೀಚಿನ ಫೋಟೊ, ಅಗತ್ಯ ವಿದ್ಯಾರ್ಹತೆ, ಅನುಭವ & ಇನ್ನಿತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ ದಿನಾಂಕ: 15-06-2023 ರ ಒಳಗಾಗಿ ಸಂಬಂಧಿಸಿದ ಪಿಯು ಕಾಲೇಜಿಗೆ ಖುದ್ದಾಗಿ ಹಾಜರಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ನೋಟಿಫಿಕೇಶನ್ ಲಿಂಕ್ ಡೌನ್ಲೋಡ್ ಮಾಡಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
Important Date/ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 03-06-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15-06-2023
Important Links/ ಪ್ರಮುಖ ಲಿಂಕುಗಳು:
Pingback: 4055 ಪಿಯು ಲೆಕ್ಚರರ್ ನೇಮಕಾತಿಗೆ ಅಧಿಸೂಚನೆ: ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ನೇಮ
Pingback: ಕರ್ನಾಟಕ ರಾಜ್ಯ ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ 1222 ಫೈರ್‌ಮ್ಯಾನ್ ಹುದ್ದೆಗಳ ಭರ್ತಿ ಕುರಿತಂತೆ ಪರಿಷ್ಕೃತ
Pingback: KMF ಜಿಲ್ಲಾ ಹಾಲು ಉತ್ಪಾದಕರ ಸಂಘದಲ್ಲಿ ನೇಮಕಾತಿ ಅಧಿಸೂಚನೆ ಪ್ರಕಟ: ಕ್ಲರ್ಕ್, ಸಹಾಯಕ & ಚಾಲಕ ಸೇರಿ ವಿವಿಧ ಹುದ್ದೆ