ಕರ್ನಾಟಕ ಲೋಕಸೇವಾ ಆಯೋಗದ ಕಛೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: KPSC Office Recruitment 2023
ಕರ್ನಾಟಕ ಲೋಕಸೇವಾ ಆಯೋಗದಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಆಯೋಗದ ಗಣಕಕೇಂದ್ರಕ್ಕೆ “ಜೂನಿಯರ್ ಪ್ರೋಗ್ರಾಮರ್, ಡಾಟಾ ಬೇಸ್ ಅಡ್ಮಿನ್ ನೆಟ್ವರ್ಕ್ ಅಡ್ಡಿನ್” ಹುದ್ದೆಗಳನ್ನು Contract ಮುಖಾಂತರ ಮತ್ತು ಹಾರ್ಡ್‌ವೇರ್ ಟೆಕ್ನಿಷಿಯನ್ ಅನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳುವ ಹೊಸ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆಸಕ್ತರು ಅಧಿಸೂಚನೆ ಹೊರಡಿಸಿದ 7 ದಿನಗಳ ಒಳಗಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು. ನೋಟಿಫಿಕೇಶನ್ ಡೌನ್ಲೋಡ್ ಮಾಡಲು ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ.
ಕರ್ನಾಟಕ ಲೋಕಸೇವಾ ಆಯೋಗದ ಗಣಕ ಕೇಂದ್ರದ ಬಲವರ್ಧನೆಗಾಗಿ ಪ್ರೋಗ್ರಾಮರ್, ಡಾಟಾ ಬೇಸ್ ಅಡ್ಮಿನ್ ಮತ್ತು ನೆಟ್ವರ್ಕ್ ಅಡ್ಡಿನ್” ಹುದ್ದೆಗಳನ್ನು Contract ಮುಖಾಂತರ ಭರ್ತಿ ಮಾಡಿಕೊಳ್ಳಲು ದಿನಾಂಕ:04-01-2023ರಂದು ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ. ಅಧಿಸೂಚನೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ NIC ಮುಖಾಂತರ ಒಂದು ಕಿರು ಪರೀಕ್ಷೆಯನ್ನು ನಡೆಸಿ ಅದರನ್ವಯ ಅರ್ಹ ಅಭ್ಯರ್ಥಿಗಳನ್ನು Short List ಮಾಡಿ ತದನಂತರ ಆಯೋಗಕ್ಕೆ ತಾಂತ್ರಿಕವಾಗಿ ಸೂಕ್ತ ಆಯೋಗದ ಮತ್ತು NIC (National Informatics ಅಭ್ಯರ್ಥಿಗಳನ್ನು Counselling ಮಾಡಿ ಆಯ್ಕೆ ಮಾಡಲು Centre) ಸಂಸ್ಥೆ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿತ್ತು.
ಸದರಿ ಸಮಿತಿಯು ಅಧಿಸೂಚನೆಯಲ್ಲಿ ಅಧಿಸೂಚಿಸಲಾಗಿದ್ದ ಹುದ್ದೆಗಳಿಗೆ ನಿಗದಿತ ವಿದ್ಯಾರ್ಹತೆಯೊಂದಿಗೆ ಸೇವಾನುಭವವನ್ನು ನಿಗದಿಪಡಿಸಿರುವ ಕಾರಣ ಹೆಚ್ಚಿನ ಅಭ್ಯರ್ಥಿಗಳಿಂದ ಅರ್ಜಿಗಳು ಸ್ವೀಕೃತವಾಗದೇ ಇರುವುದರಿಂದ ಕೇವಲ 03 ಹುದ್ದೆಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗಿದ್ದು, ಇನ್ನುಳಿದ ಮಾಡಲು ಸಾಧ್ಯವಾಗಿರುವುದಿಲ್ಲ.
KEA ಯಿಂದ ಆಹಾರ ಇಲಾಖೆ ಸೇರಿ 4 ಇಲಾಖೆಗಳಲ್ಲಿ ಖಾಲಿ ಇರುವ 670 ಹುದ್ದೆಗಳಿಗೆ ಅರ್ಜಿ ಆಹ್ವಾನ:
ಹುದ್ದೆಗಳಿಗೆ ಆದ್ದರಿಂದ 03 ಹುದ್ದೆಗಳಾದ ಜೂನಿಯರ್ ಪ್ರೋಗ್ರಾಮರ್, ಡಾಟಾ ಬೇಸ್ ಅಡ್ಮಿನ್ ಮತ್ತು ನೆಟ್ ವರ್ಕ್ ಅಡ್ಡಿನ್ ಹುದ್ದೆಗಳಿಗೆ ಕೇವಲ ವಿದ್ಯಾರ್ಹತೆ ಮತ್ತು ಸೇವಾನುಭವದ ಬದಲಿಗೆ ವಿದ್ಯಾರ್ಹತೆ ಮತ್ತು ತಾಂತ್ರಿಕ ನೈಪುಣ್ಯತೆಯ ಆಧಾರದ ಮೇಲೆ ಮಾತ್ರ ಆಯ್ಕೆ ಮಾಡುವುದು ಸೂಕ್ತವಾಗಿರುತ್ತದೆ ಎಂದು ಸಮಿತಿಯು ಅಭಿಪ್ರಾಯಪಟ್ಟಿರುತ್ತದೆ.
ಅಭ್ಯರ್ಥಿಗಳನ್ನು ಆಯ್ಕೆ ಸಮಿತಿಯ ಶಿಫಾರಸ್ಸಿನಂತೆ ಆಯೋಗದ ಗಣಕಕೇಂದ್ರಕ್ಕೆ ಕೇವಲ ವಿದ್ಯಾರ್ಹತೆ ಮತ್ತು ತಾಂತ್ರಿಕ ನೈಪುಣ್ಯತೆ ಆಧಾರದ ಮೇಲೆ 03 ಹುದ್ದೆಗಳನ್ನು (ಜೂನಿಯರ್ ಪ್ರೋಗ್ರಾಮರ್, ಡಾಟಾ ಬೇಸ್ ಅಡ್ಮಿನ್, ನೆಟ್ವರ್ಕ್ ಅಡ್ಡಿನ್) ಗುತ್ತಿಗೆ ಆಧಾರದ ಮೇಲೆ ಆಯೋಗದಿಂದ ನೇರವಾಗಿ ನೇಮಿಸಿಕೊಳ್ಳಲು ಹಾಗೂ ಟೆಕ್ನಿಷಿಯನ್ ಹುದ್ದೆಯನ್ನು ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿರುತ್ತದೆ. ಹುದ್ದೆಗಳ ವಿವರ ಈ ಕೆಳಕಂಡಂತಿರುತ್ತದೆ.
ಹುದ್ದೆಗಳ ವಿವರ/ Post Details
ಜೂನಿಯರ್ ಪ್ರೊಗ್ರಾಮರ್ – 01 |
ಡಾಟಾ ಬೇಸ್ ಅಡ್ಮಿನ್- 01 |
ನೆಟ್ವರ್ಕ್ ಅಡ್ಮಿನ್- 01 |
ಹಾರ್ಡವೇರ್ ಟೆಕ್ನಿಶಿಯನ್- 01 |
ಒಟ್ಟು ಹುದ್ದೆಗಳು – 04 |
ಶೈಕ್ಷಣಿಕ ಅರ್ಹತೆಗಳು/ Education Qualification:
KPSC ಯು ನಿಗದಿಪಡಿಸಿದ ವಿದ್ಯಾರ್ಹತೆ & ಅನುಭವವನ್ನು ಹೊಂದಿರಬೇಕು. ಹೆಚ್ಚಿನ ವಿವರಗಳಿಗೆ ಕೆಳಗೆ ನೀಡಲಾಗಿರುವ ಲಿಂಕ್ ಮೂಲಕ ನೋಟಿಫಿಕೇಶನ್ ಡೌನ್ಲೊಡ್ ಮಾಡಿಕೊಳ್ಳಿ.
ನಿಬಂಧನೆಗಳು/ ಷರತ್ತುಗಳು
1) ಸೇವೆಯನ್ನು 03 ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತಿದ್ದು, 01 ವರ್ಷದ ನಂತರ ಅವರ ಕಾರ್ಯನಿರ್ವಹಣೆಯ ಆಧಾರದ ಮೇಲೆ ನಂತರದ ಅವಧಿಯ ಬಗ್ಗೆ ನಿರ್ಧರಿಸಲಾಗುವುದು.
2) ಅಭ್ಯರ್ಥಿಗಳನ್ನು ನೇಮಕಮಾಡಿಕೊಂಡ ನಂತರ ಪ್ರಥಮ 03 ತಿಂಗಳ ಅವಧಿಯನ್ನು ಪರೀಕ್ಷಾರ್ಥ ಅವದಿಯೆಂದು ಪರಿಗಣಿಸಲಾಗುವುದು. ತದನಂತರ ಅವರ ಕಾರ್ಯನಿರ್ವಹಣೆಯನ್ನು ಪುನರ್ ವಿಮರ್ಶಿಸಲಾಗುವುದು.
3) ಸದರಿಯವರು ಕಛೇರಿಯ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಿರಬೇಕು(ಆಯೋಗದ ಕಾರ್ಯ ವಿಧಾನವು ಇತರೆ ಇಲಾಖೆಗಳಿಗಿಂತ ಭಿನ್ನವಾಗಿರುವುದರಿಂದ ಕಛೇರಿ ವೇಳೆಯ ಮುನ್ನ ಮತ್ತು ಕಛೇರಿ ವೇಳೆಯ ನಂತರ ಹಾಗೂ ಸಾರ್ವತ್ರಿಕ ರಜಾ ದಿನಗಳನ್ನೊಳಗೊಂಡಂತೆ ಭಾನುವಾರ ಸಹ ಕಾರ್ಯನಿರ್ವಹಿಸಲು ಸಿದ್ಧರಿರಬೇಕು).
4) ಆಯೋಗದ ಕಾರ್ಯವೈಖರಿಯು ಅತ್ಯಂತ ಗೋಪ್ಯ ಮತ್ತು ಸೂಕ್ಷ್ಮವಾಗಿರುವುದರಿಂದ ಆಯೋಗದ ಕಾರ್ಯವೈಖರಿಯ ಬಗ್ಗೆ ಕಛೇರಿಯ ಹೊರಗಡೆ ಎಲ್ಲಿಯೂ ಮಾಹಿತಿಯನ್ನು ನೀಡತಕ್ಕದ್ದಲ್ಲ.
5) ಆಯೋಗಕ್ಕೆ ನಿಯೋಜನೆಗೊಂಡಲ್ಲಿ ಕಡ್ಡಾಯವಾಗಿ ಆಯೋಗದ ಕಛೇರಿಯಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು. Work From Home ಕಾರ್ಯನಿರ್ವಹಿಸಲು ಅವಕಾಶವಿರುವುದಿಲ್ಲ.
6) ಆಯೋಗಕ್ಕೆ ನಿಯೋಜನೆಗೊಂಡಲ್ಲಿ ಆಯೋಗದ ಕರ್ತವ್ಯದ ವೇಳೆ, ಕಛೇರಿ ವೇಳೆಯ ಮುನ್ನ, ಕಛೇರಿ ವೇಳೆಯ ನಂತರ ಅಥವಾ ರಜಾ ದಿನಗಳಂದು ಬೇರೆ ಸಂಸ್ಥೆಯೊಂದಿಗೆ ನಿರ್ವಹಿಸಲು (Moonlighting) ಅವಕಾಶವಿರುವುದಿಲ್ಲ.
7) ಆಯೋಗಕ್ಕೆ ನಿಯೋಜನೆಗೊಳ್ಳುವ ಸಿಬ್ಬಂದಿಯು ಆಯೋಗದ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಎಲ್ಲಿಯೂ ನೀಡದ ಬಗ್ಗೆ Non Disclosure Agreement ಗೆ ಸಹಿ ಮಾಡಿಕೊಡಬೇಕು.
8) ನಿಯೋಜನೆಗೊಂಡ ನೌಕಕರು ತಿಂಗಳಿಗೆ ಒಂದು ದಿನದ ಸಾಂದರ್ಭಿಕ ರಜೆ ಪಡೆಯಲು ಅರ್ಹರಿರುತ್ತಾರೆ.
9) ಸದರಿ ನೇಮಕಾತಿಯು ಸಂಪೂರ್ಣವಾಗಿ Contract ಮಾದರಿಯಾಗಿದ್ದು, ಇವರ ನೇಮಕಾತಿಯು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ಇತರೆ ಯಾವುದೇ ಸೌಲಭ್ಯಗಳನ್ನು ಒಳಗೊಂಡಿರುವುದಿಲ್ಲ.
10) ಸದರಿ ನೇಮಕಾತಿಗೆ ಸಂಬಂಧಿಸಿದಂತೆ ಆಯೋಗವು ಸರ್ಕಾರದ ಇತರೆ ಇಲಾಖೆಗಳಲ್ಲಿ ಸಮಾನಾಂತರ ಹುದ್ದೆಗಳಿಗೆ ನಿಗದಿಪಡಿಸಿರುವಷ್ಟು ಕ್ರೋಡೀಕೃತ ಮೊತ್ತವನ್ನು ನೀಡಲಾಗುವುದು. ಉಳಿದಂತೆ ಯಾವುದೇ ಸೌಲಭ್ಯವು ಒಳಗೊಂಡಿರುವುದಿಲ್ಲ ಹಾಗೂ ಸದರಿ ಮೊತ್ತದಲ್ಲಿ ನಿಯಮಾನುಸಾರ ಆದಾಯ ತೆರಿಗೆಯನ್ನು ಕಟಾವು ಮಾಡಲಾಗುವುದು.
11) ನಿಯೋಜನೆಗೊಂಡ ನೌಕರರು ಯಾವುದೇ ಕಾರಣಕ್ಕೂ ಅಭ್ಯರ್ಥಿಗಳೊಂದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕವನ್ನು ಹೊಂದತಕ್ಕದ್ದಲ್ಲ.
12) ಒಮ್ಮೆ ಆಯ್ಕೆಯಾದ ನಂತರ ಕಡ್ಡಾಯವಾಗಿ ಒಂದು ವರ್ಷ ಸೇವೆ ಸಲ್ಲಿಸಲು ಬದ್ಧರಿರಬೇಕು. ಒಂದು ವೇಳೆ ಅನಿವಾರ್ಯ ಸಂದರ್ಭಗಳಲ್ಲಿ ಕೆಲಸ ಬಿಡಲು ನಿರ್ಧರಿಸಿದಲ್ಲಿ ಈ ಬಗ್ಗೆ ಆಯೋಗಕ್ಕೆ 03 ತಿಂಗಳ ಮುಂಚೆ ಲಿಖಿತ ರೂಪದಲ್ಲಿ ಮಾಹಿತಿಯನ್ನು ನೀಡತಕ್ಕದ್ದು,
13) ಸೇವೆಯನ್ನು 03 ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತಿದ್ದು, 01 ವರ್ಷದ ನಂತರ ಅವರ ಕಾರ್ಯನಿರ್ವಹಣೆಯ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದರೂ ಸದರಿಯವರ ಕಾರ್ಯವೈಖರಿಯು ಸಮರ್ಪಕವಾಗಿರದ ಬಗ್ಗೆ ಮೇಲಾಧಿಕಾರಿಗಳಿಗೆ ಮನವರಿಕೆಯಾದಲ್ಲಿ ಅಥವಾ ಅವರು ಆಯೋಗದ ಕಾರ್ಯವೈಖರಿಯ ತಕ್ಕದ್ದಲ್ಲದ ರೀತಿಯಲ್ಲಿ ನಡೆದುಕೊಂಡಲ್ಲಿ ಯಾವುದೇ ನೋಟೀಸ್ ನೀಡದೇ ಯಾವುದೇ ಸಂದರ್ಭದಲ್ಲಿ ಅವರನ್ನು ಕೆಲಸದಿಂದ ತೆಗೆದು ಹಾಕುವ ಅಧಿಕಾರ ಕಾರ್ಯದರ್ಶಿಯವರಿಗೆ ಇರುತ್ತದೆ.
14) ಆಯೋಗದ ಪ್ರಕಾರ್ಯಗಳು ಅತ್ಯಂತ ಗೋಪ್ಯವಾಗಿರುವುದರಿಂದ ಯಾವುದಾದರೂ ಮಾಹಿತಿ ಹಾಗೂ ದಾಖಲೆಗಳನ್ನು ಸೋರಿಕೆ ಮಾಡಿದ ಸಂದರ್ಭದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
15) ಕಾಲಕಾಲಕ್ಕೆ ಅನುಗುಣವಾಗಿ ಅಗತ್ಯತೆಯನುಸಾರ ಯಾವುದಾದರೂ ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಬೇಕಾದಲ್ಲಿ ಅದನ್ನು ತದನಂತರ ತಿಳಿಸಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ/ How to Apply:
ನಿಗದಿತ ವಿದ್ಯಾರ್ಹತೆ ಹಾಗೂ ಅಗತ್ಯ ಸೇವಾನುಭವ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸುತ್ತಿದ್ದು, ಆಸಕ್ತರು ಅರ್ಜಿಯೊಂದಿಗೆ ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ವಿದ್ಯಾರ್ಹತೆ, ಸೇವಾ ವಿವರಗಳನ್ನೊಳಗೊಂಡ ಸಂಪೂರ್ಣ ಮಾಹಿತಿ (Curriculum vitae) ಹಾಗೂ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅಧಿಸೂಚನೆಯ ಪ್ರಕಟಣಾ ದಿನಾಂಕದಿಂದ 07 ದಿನಗಳ ಒಳಗಾಗಿ “To be opened by Secretary only” ಎಂದು ನಮೂದಿಸಿದ ಮುಚ್ಚಿದ ಲಕೋಟೆಯಲ್ಲಿ ಶ್ರೀ ಸುರಳ್ಕರ್ ವಿಕಾಸ್ ಕಿಶೋರ್, ಭಾಅಸೇ, ಕಾರ್ಯದರ್ಶಿಗಳು ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ,ಬೆಂಗಳೂರು- 560001 ಇವರಿಗೆ ರವಾನಿಸತಕ್ಕದ್ದು.
Important Links:
Pingback: ಸಮಾಜ ಕಲ್ಯಾಣ ಇಲಾಖೆಯಲ್ಲಿ ಇರುವ ಕ್ಲರ್ಕ್, ಅಕೌಂಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Salary Rs. 50000/-: Social Welfare Dept.
Pingback: ಸ್ಟಾಫ್ ಸೆಲೆಕ್ಷನ್ ಕಮಿಶನ್ ಯಿಂದ ಖಾಲಿ ಇರುವ 1876 PSI ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Any Degree- SSC Sub Inspector Recruitment 2023 - KPSC Jobs
Pingback: ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 6329 ವಾರ್ಡನ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ- NEST 6329 Posts Recruitment
2puc pass sir.please job kodi sir
accutane 2019 accutane online prescription cost accutane 20mg