Brief Information
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆಯಲ್ಲಿ ಖಾಲಿಯಿರುವ ವಿವಿಧ ವೃಂದದ ಹುದ್ದೆಗಳನ್ನು ಭರ್ತಿಗೊಳಿಸುವ ಕುರಿತು.
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆಯಲ್ಲಿನ ವೃಂದಾವಾರು ಹುದ್ದೆಗಳನ್ನು ಕಲ್ಯಾಣ-ಕರ್ನಾಟಕ ಪ್ರದೇಶದ ಕಚೇರಿಗಳಿಗೆ ಹಾಗೂ ಉಳಿದ ಪ್ರದೇಶದ ಕಚೇರಿಗಳಿಗೆ ಒಟ್ಟು 1088 ವಿವಿಧ ಹುದ್ದೆಗಳು ಮಂಜೂರಾಗಿದ್ದು, ಹಾಲಿ 647 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, 441 ಹುದ್ದೆಗಳು ಖಾಲಿಯಿದ್ದು, ಡಿಸೆಂಬರ್ 2021 ರ ಅಂತ್ಯಕ್ಕೆ 37 ಸಿಬ್ಬಂದಿಗಳು ವಯೋನಿವೃತ್ತಿ ಹೊಂದಲಿದ್ದಾರೆ, ಕಳೆದ 4 ವರ್ಷಗಳಲ್ಲಿ 255 ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಗಳು ನಿವೃತ್ತಿಯಾಗಿದ್ದು, 2021ನೇ ಸಾಲಿನಲ್ಲಿ 77 ಸಿಬ್ಬಂದಿಗಳು ವಯೋನಿವೃತ್ತಿ ಹೊಂದಲಿದ್ದಾರೆ.
ಈ ಹಿನ್ನೆಲೆಯಲ್ಲಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆಯಲ್ಲಿ ಖಾಲಿಯಿರುವ ವಿವಿಧ ವೃಂದದ ಒಟ್ಟು 77 ಹುದ್ದೆಗಳನ್ನು ಸಂಸ್ಥೆಯ ಭರ್ತಿಗೊಳಿಸಲು ಆರ್ಥಿಕ ಇಲಾಖೆಯ ಸಹಮತಿಯಂತೆ ಸರ್ಕಾರವು ಅನುಮತಿ ನೀಡಲು ತೀರ್ಮಾನಿಸಿರುತ್ತದೆ.
ಆದ್ದರಿಂದ ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆಯಲ್ಲಿ ಖಾಲಿಯಿರುವ ವಿವಿಧ ವೃಂದದ ಒಟ್ಟು 77 ಹುದ್ದೆಗಳನ್ನು ಈ ಕೆಳಕಂಡಂತೆ ಭರ್ತಿಮಾಡಿಕೊಳ್ಳಲು ಅನುಮತಿ ನೀಡಿದೆ.
ಹುದ್ದೆಗಳ ವಿವರ:
ಪದನಾಮ | ಒಟ್ಟು ಹುದ್ದೆಗಳ ಸಂಖ್ಯೆ | ನೇಮಕಾತಿ ವಿಧಾನ |
ಸಹಾಯಕ ಅಭಿಯಂತರರು | 43 |
ವೃಂದ & ನೇಮಕಾತಿ ನಿಯಮಗಳನ್ವಯ |
ಕಿರಿಯ ಅಭಿಯಂತರರು (ಸಿವಿಲ್) | 18 | |
ಪ್ರಥಮ ದರ್ಜೆ ಸಹಾಯಕರು | 5 | |
ದ್ವಿತೀಯ ದರ್ಜೆ ಸಹಾಯಕರು | 10 | |
ಕಂಪ್ಯೂಟರ್ ಅಸಿಸ್ಟೆಂಟ್ | 1 | ಹೊರಗುತ್ತಿಗೆ |
ಒಟ್ಟು ಹುದ್ದೆಗಳು | 77 |
ಮೇಲಿನ ಹುದ್ದೆಗಳ ನೇರ ನೇಮಕಾತಿಯು ಶೀಘ್ರದಲ್ಲಿಯೇ ಆರಂಭವಾಗಲಿದ್ದು ಪಿಯುಸಿ, ಯಾವುದೇ ಪದವಿ, ಇಂಜಿನಿಯರಿಂಗ್, ಡಿಪ್ಲೋಮಾ ಮುಗಿದವರಿಗೆ ಖಾಯಂ ಹುದ್ದೆಗಳು ಲಭ್ಯವಾಗಲಿವೆ.