RDPR ಇಲಾಖೆಯಲ್ಲಿ ಖಾಲಿ ಇರುವ PDO, GP ಕಾರ್ಯದರ್ಶಿ ಗ್ರೇಡ್ 1 & 2 ಹಾಗೂ SDAA ಹುದ್ದೆಗಳ ಭರ್ತಿ 2023- RDPR PDO SDAA Recruitment 2023
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್ 1 & ಗ್ರೇಡ್ 2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಖಾಲಿ ಹುದ್ದೆಗಳ ನೇಮಕಾತಿಗೆ ಚಾಲನೆ ದೊರೆತಿದೆ. ಈ ಹುದ್ದೆಗಳ ನೇಮಕಾತಿ ಕುರಿತಂತೆ ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಬಹುದು.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯಡಿ ಮಂಜೂರಾಗಿರುವ 6021 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಉನ್ನತಿಕರಿಸಿ/ ಪುನಾರ್ ಪದನಾಮೀಕರಿಸಿ ಆದೇಶಿಸಲಾಗಿದೆ. ಇದರ ಪ್ರಕಾರ ಹಿರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (SPDO) (ಗ್ರೂಪ್ ಬಿ) & ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಗ್ರೂಪ್ ಸಿ) ಹುದ್ದೆಗಳನ್ನಾಗಿ ಉನ್ನತಿಕರಿಸಿ/ ಪುನಾರ್ ಪದನಾಮೀಕರಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಮಂಜೂರಾಗಿರುವ 6021 ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಈ ಕೆಳಕಂಡಂತೆ ಉನ್ನತೀಕರಿಸಿ / ಪುನರ್ ಪದನಾಮೀಕರಿಸಿ ಆದೇಶಿಸಲಾಗಿದೆ.
1) ವೇತನ ಶ್ರೇಣಿ ರೂ. 37,900-70,850 ರ ಗ್ರೂಪ್ “ಸಿ” ವೃಂದದ 1500 ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ವೇತನ ಶ್ರೇಣಿ ರೂ.40,900-78,200 (ಗ್ರೂಪ್ ಬಿ ಕಿರಿಯ ವೃಂದ) ರಲ್ಲಿ ಉನ್ನತೀಕರಿಸಿ ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂದು ಮರು ಪದನಾಮೀಕರಿಸಿದೆ.
2) ಉಳಿದ 4521 ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ವೇತನ ಶ್ರೇಣಿ ರೂ. 37,900-70,850 (ಗ್ರೂಪ್ ಸಿ ವೃಂದಲ್ಲಿ) ಮುಂದುವರೆಸಿದೆ.
3) ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಗ್ರೂಪ್ ಸಿ) ಒಟ್ಟು ಹುದ್ದೆಗಳಲ್ಲಿ ಶೇಕಡ 65% ಹುದ್ದೆಗಳನ್ನು ನೇರ ನೇಮಕಾತಿ ಅಂದರೇ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ತುಂಬಲಾಗುತ್ತದೆ ಹಾಗೂ ಶೇಕಡ 35% ಹುದ್ದೆಗಳನ್ನು ಬಡ್ತಿ ಮೂಲಕ ತುಂಬಲಾಗುತ್ತದೆ.
ಈ ಅರ್ಟಿಕಲ್ ನಲ್ಲಿ ಪ್ರಮುಖವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಗ್ರೂಪ್ ಸಿ) ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಚರ್ಚಿಸಲಾಗಿದೆ.
ಹುದ್ದೆಗಳ ವಿವರ/ Post Details:
ಪಂಚಾಯತ್ ಅಭಿವೃದ್ಧಿ ಅಧಿಕಾರಿ- 727 |
ಗ್ರಾಮ ಪಂಚಾಯತ್ ಗ್ರೇಡ್ 1 ಕಾರ್ಯದರ್ಶಿ- 635 |
ಗ್ರಾಮ ಪಂಚಾಯತ್ ಗ್ರೇಡ್ 2 ಕಾರ್ಯದರ್ಶಿ- 956 |
ದ್ವಿತೀಯ ದರ್ಜೆ ಲೆಕ್ಕ ಸಹಾಯಕರು- 625 |
ಕರ್ನಾಟಕದಾದ್ಯಂತ ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 570 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಇತ್ತೀಚೆಗೆ ಲೋಕೋಪಯೋಗಿ ಸಚಿವರು ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಶೈಕ್ಷಣಿಕ ಅರ್ಹತೆಗಳು/ Educational Qualification:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಅಂಗೀಕೃತ ಬೋರ್ಡ್/ ವಿಶ್ವವಿದ್ಯಾಲಯದಿಂದ ಪಿಯುಸಿ/ ಯಾವುದೇ ವಿಷಯದಲ್ಲಿ ಪದವಿ ಮುಗಿಸಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಅರ್ಜಿ ಶುಲ್ಕ/ Application Fees:
ಸಾಮಾನ್ಯ & ಇತರೆ ಹಿಂದೂಳಿದ ಅಭ್ಯರ್ಥಿಗಳಿಗೆ : ಇನ್ನು ತಿಳಿದಿಲ್ಲ
ಪ.ಜಾ/ ಪಪಂ/ ಅಂಗವಿಕಲ/ ಮಾಜಿ ಸೈನಿಕ & ಎಲ್ಲ ಮಹಿಳಾ ಅಭ್ಯರ್ಥಿಗಳಿಗೆ: ಇನ್ನು ತಿಳಿದಿಲ್ಲ.
ವಯೋಮಿತಿ/ Age Limit:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ಪೂರೈಸಿರಬೇಕು & ಗರಿಷ್ಟ 35 ವರ್ಷ ಮೀರಿರಬಾರದು.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ
ಇತರೆ ಹಿಂದೂಳಿದ ವರ್ಗ (OBC) : 03 ವರ್ಷ
ಮಾಜಿ ಸೈನಿಕರಿಗೆ: 05 ವರ್ಷ
ಆಯ್ಕೆವಿಧಾನ/ Selection procedure:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ
ನೇಮಕಾತಿ ಪ್ರಾಧಿಕಾರ:
ಕರ್ನಾಟಕ ನಾಗರೀಕ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ರ ಷೆಡ್ಯೂಲ್ (1) ತಿದ್ದುಪಡಿ ತರುವುದನ್ನು ಬಾಕಿಯಿರಿಸಿ, ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ರಾಜ್ಯ ವೃಂದವನ್ನಾಗಿ ಪರಿಗಣಿಸಿ ಸರ್ಕಾರವನ್ನು ನೇಮಕಾತಿ ಮತ್ತು ಪ್ರಾಧಿಕಾರವನ್ನಾಗಿ ನೇಮಿಸಿದೆ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ರಾಜ್ಯ ವೃಂದವನ್ನಾಗಿ ಪರಿಗಣಿಸಿ ಆಯುಕ್ತರು, ಪಂಚಾಯತ್ ರಾಜ್ ರವರನ್ನು ನೇಮಕಾತಿ ಮತ್ತು ಪ್ರಾಧಿಕಾರವನ್ನಾಗಿ ನೇಮಿಸಿ ಆದೇಶಿಸಿದೆ.
When Notification/ ಯಾವಾಗ ಅಧಿಸೂಚನೆ? :
ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಗ್ರೂಪ್ ಸಿ) ಹುದ್ದೆಗಳನ್ನು ತುಂಬಲು ಸರ್ಕಾರ ಆಸಕ್ತಿಯನ್ನು ತೋರಿದ್ದು ಅದಕ್ಕಿದ್ದ ಕೇಡರ್ & ತಾಂತ್ರಿಕ ಪರಿಹರಿಸುವ ಪ್ರಯತ್ನವನ್ನು ಮಾಡಿದೆ. ಬಹುತೇಕ ಇನ್ನು ಕೆಲವೇ ತಿಂಗಳುಗಳಲ್ಲಿ ನೇಮಕಾತಿಗೆ ಚಾಲನೆ ದೊರೆಯುವ ಸಾದ್ಯತೆ ಇದೆ.
Important Links/ ಪ್ರಮುಖ ಲಿಂಕುಗಳು:
Pingback: ಕರ್ನಾಟಕ ರೈಲ್ವೇ ನೇಮಕಾತಿ 2023: ಕರ್ನಾಟಕದಲ್ಲಿ ಖಾಲಿ ಇರುವ ಕಂಪ್ಯೂಟರ್ ಆಪರೇಟರ್ & ಸಹಾಯಕ ಸೇರಿ ವಿವಿಧ ಹುದ್ದೆ
I think the admin of this site is really working hard for his website since here every stuff is quality based data. dubai racing live 26
I really like reading through a post that can make men and women think.<a href="https://www.clients1.google.com.kh/url?sa=t
o great to find someone with some original thoughts on this topic.-zwischen tüll und tränen kostenlos online schauen
Good post! We will be linking to this particularly great post on our site.OLANLY Dog Door Mat for Muddy Paws Absorbs Moisture and Dirt Absorbent Non-Slip Washable Mat Quick Dry Microfiber Mud Mat for Dogs Entry Indoor Door Mat for Inside Floor(24×16 Inches Beige) – Hot Deals
I very delighted to find this internet site on bing just what I was searching for as well saved to fav . – mens hey dude shoes
I do not even understand how I ended up here but I assumed this publish used to be great . Shoe Palace
I really like reading through a post that can make men and women think.
Fascinating information shared, learning from you is a pleasure! Get More Information