15000 GPSTR Result Announced :
ಶಿಕ್ಷಕ ಆಕಾಂಕ್ಷಿಗಳಿಗೆ ಒಂದು ಸಿಹಿಸುದ್ದಿಯನ್ನು ಶಿಕ್ಷಣ ಇಲಾಖೆ ನೀಡಿದ್ದು, ರಾಜ್ಯದ ಸರ್ಕಾರಿ ಮಾಧ್ಯಮಿಕ ಶಾಲೆಗಳಲ್ಲಿ ನಡೆಯುತ್ತಿರುವ 15000 ಪದವೀಧರ ಶಿಕ್ಷಕ ಹುದ್ದೆಗಳ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆಗೊಳಿಸಲಾಗಿದೆ. ಇದು ಕೇವಲ ಫಲಿತಾಂಶ ಮಾತ್ರವಾಗಿದ್ದು ಶೀಘ್ರದಲ್ಲಿಯೇ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಈ ಫಲಿತಾಂಶದಲ್ಲಿ ಯಾವುದೇ ಗೊಂದಲ ಅಥವಾ ದೋಶಗಳಿದ್ದಲ್ಲಿ ಅಂತಹ ಅಭ್ಯರ್ಥಿಗಳು ಸರಿಯಾದ ಮಾರ್ಗದ ಮೂಲಕ ಆಕ್ಷೇಪಣೆಯನ್ನು ಸಲ್ಲಿಸಬಹುದು.
ಕರ್ನಾಟಕ ಪ್ರಾಥಮಿಕ & ಪ್ರೌಢಶಾಲಾ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 15000 ಪದವೀಧರ ಶಿಕ್ಷಕರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮೇ, 2022 ರಲ್ಲಿ ಪರೀಕ್ಷೆಯನ್ನು ನಡೆಸಲಾಗಿದ್ದು ಅದರ ಕೀ ಉತ್ತರಗಳನ್ನು ಈಗಾಗಲೇ ಬಿಡುಗಡೆ ಗೊಳಿಸಲಾಗಿತ್ತು. ಸದ್ಯ ಅದರ ಫಲಿತಾಂಶವನ್ನು ಇಂದು ಅಂದರೇ ದಿನಾಂಕ 17-08-2022 ರಂದು ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆಗೊಳಿಸಿದೆ. 15000 ಪದವೀಧರ ಶಿಕ್ಷಕ ಹುದ್ದೆಗಳಿಗೆ ಪರೀಕ್ಷೆಯನ್ನು ಬರೆದ ಅಭ್ಯರ್ಥಿಗಳು ಕೆಳಗಿನ ಲಿಂಕ್ ಬಳಸಿ ತಾವು ಪಡೆದ ಅಂಕಗಳನ್ನು ವೀಕ್ಷಣೆಮಾಡಬಹುದಾಗಿದೆ.
Karnataka Primary & Highschool Department has released result of 15000 TGT teacher in official website of Department. The exam has been conducted in the month May 2022. The candidates can watch the result by using following link:
ಫಲಿತಾಂಶದಲ್ಲಿ ತಿದ್ದುಪಡಿ ಅಗತ್ಯವಿರುವ ಅಭ್ಯರ್ಥಿಗಳು ಮಾತ್ರ ತಮ್ಮ ಮನವಿಯನ್ನು ಅಗತ್ಯ ದೃಢೀಕೃತ ಪ್ರಮಾಣಪತ್ರಗಳೊಂದಿಗೆ ವಿಶೇಷಾಧಿಕಾರಿ, ಕೇಂದ್ರಿಕೃತ ದಾಖಲಾತಿ ಘಟಕ, ಕೆ.ಜಿ ರಸ್ತೆ ಬೆಂಗಳೂರು ಇವರಿಗೆ ಖುದ್ದಾಗಿ ಸಲ್ಲಿಸುವುದು. ಅಂಚೆ/ ಇನ್ನಿತರ ಯಾವುದೇ ವಿಧಾನದಲ್ಲಿ ಸಲ್ಲಿಸಲಾಗುವ ಮನವಿಗಳನ್ನು ಪರಿಗಣಿಸುವುದಿಲ್ಲ. ಆಕ್ಷೇಪಣೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ 24-08-2022
ಆನ್ಲೈನ್ ಅರ್ಜಿಯಲ್ಲಿನ ವೈಯಕ್ತಿಕ ವಿವರಗಳಾದ ಅಭ್ಯರ್ಥಿಯ ಹೆಸರು, ಅಭ್ಯರ್ಥಿಯ ತಂದೆ & ತಾಯಿಯ ಹೆಸರು, ಜನ್ಮದಿನಾಂಕ, ಪದವಿ, ಬಿಎಡ್/ಡಿಎಲ್.ಇಡಿ & ಸಿಟಿಇಟಿ/ ಟಿಇಟಿ ಅಂಕಗಳಿಗೆ ಸಂಬಂಧಿಸಿದಂತೆ ಮಾತ್ರ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ.
Press Note:-