ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಖಾಲಿ ಇರುವ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ- Sirsi Urban Co-operative Bank Recruitment 2022

Click here to Share:

Sirsi Urban Cooperative Bank Recruitment 2022

ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿಮಿಟೆಡ್, ಶಿರಸಿ ವತಿಯಿಂದ ನೋಟಿಫಿಕೇಶನ್ ಬಿಡುಗಡೆಯಾಗಿದ್ದು ಶಾಖಾ ವ್ಯವಸ್ಥಾಪಕ/ ಲೆಕ್ಕಿಗ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬಿಕಾಂ, ಬಿಎಸ್ಸಿ, ಬಿಬಿಎ, ಬಿಬಿಎಂ, ಬಿಇ, ಬಿಎ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ & ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಅರ್ಜಿ ಸಲ್ಲಿಸಲು 06-09-2022 ರ ಒಳಗಾಗಿ ಅರ್ಜಿಯನ್ನು ಭರ್ತಿ ಮಾಡಿ ಪೋಸ್ಟಲ್ ಮೂಲಕ ಕಳುಹಿಸಬಹುದು. ಈ ನೇಮಕಾತಿಯ ಸಂಪೂರ್ಣ ವಿವರಗಳನ್ನು ಇಲ್ಲಿ ಪಡೆಯಿರಿ.

ಹುದ್ದೆಗಳ ವಿವರ:

ಶಾಖಾ ವ್ಯವಸ್ಥಾಪಕ/ ಲೆಕ್ಕಿಗ/ ಕಾಯ್ದೆ ಅಧಿಕಾರಿ/ ವ್ಯವಸ್ಥಾಪಕರು

ಒಟ್ಟು ಹುದ್ದೆಗಳು:

ಒಟ್ಟು 08 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ

ವೇತನ ಶ್ರೇಣಿ:

52650-97100 ( ಹಾಗೂ ಕಾಲಕಾಲಕ್ಕೆ ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ಅನ್ವಯವಾಗುವ ದರದಲ್ಲಿ ತುಟ್ಟಿಭತ್ಯೆ ಹಾಗೂ ಇತರೆ ಭತ್ಯೆಗಳನ್ನು ನೀಡಲಾಗುವುದು)

ವಿದ್ಯಾರ್ಹತೆ:

ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಈ ಕೆಳಗಿನ ಯಾವುದೇ ಪದವಿಯಲ್ಲಿ ಕಡ್ಡಾಯವಾಗಿ ಶೇಕಡಾ 60 ಹೆಚ್ಚು ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.

ಬಿ.ಕಾಮ್/ ಬಿ.ಬಿ.ಎ/ ಬಿ.ಬಿ.ಎಮ್/ ಬಿ.ಇ/ ಬಿ.ಎಸ್.ಸಿ/ ಬಿ.ಎ.

ಬಿ.ಎಸ್.ಸಿ – ಗಣಿತ ಅಥವಾ ಸಂಖ್ಯಾಶಾಸ್ತ್ರ ವಿಷಯವನ್ನು ಕಡ್ಡಾಯವಾಗಿ ಒಂದು ಐಚ್ಛಿಕ ವಿಷಯವನ್ನಾಗಿ ಅಧ್ಯಯನ ಮಾಡಿರಬೇಕು.

ಬಿ.ಎ – ಗಣಿತ, ಸಂಖ್ಯಾಶಾಸ್ತ್ರ ಅಥವಾ ಅರ್ಥಶಾಸ್ತ್ರ ವಿಷಯವನ್ನು ಕಡ್ಡಾಯವಾಗಿ ಒಂದು ಐಚ್ಛಿಕ ವಿಷಯ ವನ್ನಾಗಿ ಅಧ್ಯಯನ ಮಾಡಿರಬೇಕು.

ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನಿಷ್ಠ ಆಫೀಸರ್ ಹುದ್ದೆಗಿಂತ ಕಡಿಮೆ ಇಲ್ಲದ ಹುದ್ದೆಯಲ್ಲಿ ಕನಿಷ್ಠ 5 ವರ್ಷಗಳ ಸೇವೆ ಸಲ್ಲಿಸಿ ಅನುಭವ ಹೊಂದಿರತಕ್ಕದ್ದು,

ಹಾಗೂ ಕೆವೈಸಿ ಎಎಮ್ ಎಲ್ | ರಿಸ್ಕ್ ಮ್ಯಾನೇಜ್ಮೆಂಟ್ / ಕ್ರೇಡಿಟ್ ಅಪ್ರೆಸಲ್ / ಎಂಐಎಸ್ | ಸೈಚ್ಯುಟರಿ ಕಂಪ್ಲಾಯನ್ಸ್/ ಬಿಸಿನೆಸ್ ಡೆವೆಲಪ್ ಮೆಂಟ್ | ಇನ್ವೆಸ್ಟಮೆಂಟ್ / ಗ್ರಾಹಕ ಸೇವೆ ಹಾಗೂ ಕುಂದು ಕೊರತೆ ನಿರ್ವಹಣೆ ಹಾಗೂ ಇತರ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ವಿಶೇಷ ಅನುಭವವನ್ನು ಹೊಂದಿದವರಿಗೆ ಪ್ರಥಮ ಆಧ್ಯತೆ ನೀಡಲಾಗುವುದು.

ಎಂ.ಕಾಂ ಅಥವಾ ಗಣಿತ ಸಂಖ್ಯಾಶಾಸ್ತ್ರ ಅರ್ಥಶಾಸ್ತ್ರ ಬ್ಯಾಂಕಿಂಗ್/ ಎಕೌಂಟನ್ಸಿ ವಿಷಯಗಳೊಂದಿಗೆ ಶೇಕಡಾ 60 ಕ್ಕಿಂತ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾಗಿ, ಸ್ನಾತಕೋತ್ತರ ಪದವಿ (ಮಾಸ್ಟರ್‌ ಡಿಗ್ರಿ) ಪಡೆದಿದ್ದಲ್ಲಿ ಹಾಗೂ ಡಿಪ್ಲೊಮಾ ಇನ್ ಬ್ಯಾಂಕಿಂಗ್ / ಡಿಪ್ಲೊಮಾ ಇನ್ ಕೋ-ಆಪರೇಟಿವ್ ಬಿಸಿನೆಸ್ ಮ್ಯಾನೇಜ್ಮೆಂಟ್/ ಜೆ.ಎ.ಐ.ಐ.ಬಿ/ ಸಿ.ಎ.ಐ.ಐ.ಬಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಆಧ್ಯತೆ ನೀಡಲಾಗುವುದು.

ಹೆಚ್ಚಿನ ವಿವರಗಳು:

ಅರ್ಜಿ ನಮೂನೆ, ವಯೋಮಿತಿ, ಅರ್ಜಿಶುಲ್ಕ, ಆಯ್ಕೆ ವಿಧಾನ, ನಿಬಂಧನೆಗಳು ಮತ್ತು ಸೂಚನೆಗಳು ಇತ್ಯಾದಿ ವಿವರಗಳು ಬ್ಯಾಂಕಿನ ಅಧಿಕೃತ ಜಾಲತಾಣ “www.sirsiurbanbank.in” ದಲ್ಲಿ ಲಭ್ಯವಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಬ್ಯಾಂಕು ಪೂರೈಸುವ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಸೂಕ್ತ ದಾಖಲಾತಿಗಳನ್ನು ಸ್ವದೃಢೀಕೃತ ಪ್ರತಿಗಳೊಂದಿಗೆ ಅರ್ಜಿಯನ್ನು “ಪ್ರಧಾನ ವ್ಯವಸ್ಥಾಪಕರು, ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿ., ಕೇಂದ್ರ ಕಛೇರಿ, ರಾಯರಪೇಟೆ, ಶಿರಸಿ-581 401 (ಉ.ಕ.)”, ಈ ವಿಳಾಸಕ್ಕೆ ಪ್ರಕಟಣೆಯ ದಿನಾಂಕದಿಂದ 21 ದಿನಗಳೊಳಗಾಗಿ ತಲುಪುವಂತೆ ಸಲ್ಲಿಸತಕ್ಕದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಬ್ಯಾಂಕಿನ ಕೇಂದ್ರ ಕಛೇರಿಗೆ ದಿನಾಂಕ 06/09/2022 ರ ಸಾಯಂಕಾಲ 5:00 ಗಂಟೆಯೊಳಗೆ ತಲುಪುವಂತೆ ಕಳುಹಿಸತಕ್ಕದ್ದು,

 ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಸಾರ್ವತ್ರಿಕ ರಜೆ ದಿನವಾಗಿದ್ದರೆ, ಮುಂದಿನ ಕೆಲಸದ ದಿನವು ಅರ್ಜಿಯನ್ನು ಸ್ವೀಕರಿಸಲು ಕೊನೆಯ ದಿನಾಂಕವಾಗಿರುತ್ತದೆ. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಹಾಗೂ ಪರಿಗಣಿಸಲಾಗುವುದಿಲ್ಲ.

ಅರ್ಜಿ ಶುಲ್ಕ:

ಅರ್ಜಿಯ ಜೊತೆಗೆ “ಪ್ರಧಾನ ವ್ಯವಸ್ಥಾಪಕರು, ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿ, ಶಿರಸಿ” ಹೆಸರಿಗೆ ತೆಗೆದ ರೂ. 500-00 (ರೂಪಾಯಿ ಐದು ನೂರು ಮಾತ್ರ) ರ ಡಿಮಾಂಡ ಡ್ರಾಪ್ಟನ್ನು ಸಲ್ಲಿಸತಕ್ಕದ್ದು ಲಕೋಟೆಯ ಮೇಲೆ “ಶಾಖಾ ವ್ಯವಸ್ಥಾಪಕ/ ಲೆಕ್ಕಿಗ/ ಕಾಯ್ದೆ ಅಧಿಕಾರಿ/ ವ್ಯವಸ್ಥಾಪಕರು (ಮಾಹಿತಿ ಅಪೂರ್ಣ ಅರ್ಜಿಗಳನ್ನು ತಂತ್ರಜ್ಞಾನ) ಹುದ್ದೆಗೆ ಅರ್ಜಿ” ಎಂದು ಸ್ಪಷ್ಟವಾಗಿ ನಮೂದಿಸತಕ್ಕದ್ದು.

 

Important Links

Notification

Application Format

Official Website


Click here to Share:
Tagged . Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *