Karnataka High Court Recruitment 2022- ಕರ್ನಾಟಕ ಹೈಕೋರ್ಟಿನಲ್ಲಿ ಬೃಹತ್ ಭರ್ತಿ- 150 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ- Apply Online

Click here to Share:

Karnataka High Court Recruitment 2022- ಕರ್ನಾಟಕ ಹೈಕೋರ್ಟಿನಲ್ಲಿ ಬೃಹತ್ ಭರ್ತಿ- 150 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ- Apply Online

ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.  ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಖಾಲಿ ಇರುವ ಗ್ರೂಪ್ ಡಿ (ಪಿಯೊನ್, ವಾಚ್ ಮೆನ್, ಸ್ವೀಪರ್) ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸ್ಥಳೀಯ ವೃಂದ & ರಾಜ್ಯ ವೃಂದ ದಲ್ಲಿ ಖಾಲಿ ಇರುವ ಗ್ರೂಪ್ ಡಿ ಹುದ್ದೆಗಳ ನೇಮಕಾತಿಯನ್ನುನೇರ ನೇಮಕಾತಿಯ ಮೂಲಕ ತುಂಬಿಕೊಳ್ಳಲಾಗುತ್ತಿದೆ.

ಹತ್ತನೇ / ತತ್ಸಮಾನ ವಿದ್ಯಾರ್ಹತೆ ಪೂರ್ಣಗೊಳಿಸಿದವರು ಮಾತ್ರ ಅರ್ಜಿ ಹಾಕಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು 17ನೇ ಸೆಪ್ಟೆಂಬರ್ 2022 ರ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಚರ್ಚೆಮಾಡಲಾಗಿದ್ದು ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ವಿವರಗಳು & ಅಧಿಕೃತ ನೋಟಿಫಿಕೇಶನ್ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಪಡೆಯಿರಿ.

ಹುದ್ದೆಗಳ ವಿವರ:

ಉಳಿಕೆ ಮೂಲ ವೃಂದ: ಒಟ್ಟು 129 ಹುದ್ದೆಗಳು

ಪ್ರವರ್ಗ ಹುದ್ದೆಗಳ ಸಂಖ್ಯೆ
GM 68
SC 19
ST 4
Cat 1 5
IIA 19
IIB 5
IIIA 5
IIIB 7
Total Posts 129

ಸ್ಥಳೀಯ ವೃಂದ (ಕಲ್ಯಾಣ ಕರ್ನಾಟಕ ವೃಂದ): Total Posts 21

ವಯೋಮಿತಿ/ Age limit ( As on 17.09.2022)

ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 18 ರಿಂದ 35 ರ ನಡುವಿನ ವಯಸ್ಸಿನವರಾಗಿರಬೇಕು.

ಗರಿಷ್ಟ ವಯೋಮಿತಿಯಲ್ಲಿ ಕೆಲವು ವರ್ಗಗಳಿಗೆ ಸಡಿಲಿಕೆ ನೀಡಲಾಗಿದೆ.  ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 05 ವರ್ಷ, ಹಿಂದೂಳಿದ ವರ್ಗದವರಿಗೆ 03 ವರ್ಷ ಸಡಿಲಿಕೆ ಇರುತ್ತದೆ. ಹಾಗೇಯೇ ಮಾಜಿ ಸೈನಿಕ, ವಿಧವೆ ಅಭ್ಯರ್ಥಿಗಳು & ಇಲಾಖಾ ಅಭ್ಯರ್ಥಿಗಳಿಗೆ ಸರ್ಕಾರದ ನೀತಿ ನಿಯಮಗಳಂತೆ ಸಡಿಲಿಕೆ ಸಿಗುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ:

ಅಭ್ಯರ್ಥಿಗಳು ಹತ್ತನೇ/ ತತ್ಸಮಾನ ವಿದ್ಯಾರ್ಹತೆಯನ್ನು ಉತ್ತೀರ್ಣಗೊಳಿಸಿರಬೇಕು. ಇದಲ್ಲದೆ ಮತ್ತ್ಯಾವುದೇ ನಿಬಂಧನೆಗಳು ಇರುವುದಿಲ್ಲ.

ವೇತನ ಶ್ರೇಣಿ:

ರೂ. 19900-63200

ಇದಲ್ಲದೇ ಕಾಲಕಾಲಕ್ಕೆ ನಿಗದಿಯಾಗುವ ತುಟ್ಟಿಭತ್ಯೆ, ಮನೆಬಾಡಿಗೆ ಭತ್ಯೆ ಮುಂತಾದ ಭತ್ಯೆಗಳು ದೊರೆಯುತ್ತವೆ

ಆಯ್ಕೆವಿಧಾನ:

ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೀಸಲಾತಿವಾರು ಸಂದರ್ಶನಕ್ಕೆ ಅರ್ಹರಾದ ಪಟ್ಟಿಯನ್ನು ತಯಾರಿಸಲಾಗುತ್ತದೆ. 1:10 ಪ್ರಕಾರ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುತ್ತದೆ. ಸಂದರ್ಶನದಲ್ಲಿ ಒಟ್ಟು 10 ಅಂಕಗಳನ್ನು ನಿಗದಿಪಡಿಸಲಾಗಿದ್ದು ಇದರಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆಮಾಡಲಾಗುತ್ತದೆ.

ಅರ್ಜಿ ಶುಲ್ಕ:

ಪಜಾ/ ಪಪಂ/ ಪ್ರ1 : ರೂ. 100

ಇತರೆ ಅಭ್ಯರ್ಥಿಗಳಿಗೆ : ರೂ.200

ಅರ್ಜಿ ಶುಲ್ಕವನ್ನು Online/ Offline ಮೂಲಕ ಸಂದಾಯ ಮಾಡಲು ಅವಕಾಶವಿರುತ್ತದೆ.

ಅರ್ಜಿ ಶುಲ್ಕವನ್ನು ಸಂದಾಯ ಮಾಡಲು ಕೊನೆಯ ದಿನಾಂಕ 21-09-2022

 

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸುವ ಆರಂಭದ ದಿನಾಂಕ : 17.08.2022

ಅರ್ಜಿ ಹಾಕುವ ಕೊನೆಯ ದಿನಾಂಕ: 17.09.2022

Important Links:

Notification NHK Cadre  & HK Cadre

Apply Online NHK Cadre & HK Cadre

Website

Recent Job Notification:

ಅರ್ಬನ್ ಕೋ ಆಪರೇಟಿವ್ ಬ್ಯಾಂಕ್

4300 ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

GRAMA PANCHAYATH RECRUITMENT 2022

Income Tax Department Recruitment 2022

IBPS Probationary Officer Recruitment- 6432 Posts

ರೇಷ್ಮೆ ಇಲಾಖೆಯಲ್ಲಿ ಅರ್ಜಿ ಆಹ್ವಾನ


Click here to Share:
Tagged , , . Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *