ಉಚಿತ ಕೋಚಿಂಗ್ & ಉಪನ್ಯಾಸಕರ ನೇಮಕಾತಿ:
ಉಚಿತ ಕೋಚಿಂಗ್:
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅಂಬೇಡ್ಕರ್ ಸೆಂಟರ್ ಆಫ್ ಎಕ್ಸ್ ಲೆನ್ಸ್ ಅಡಿಯಲ್ಲಿ ಉಚಿತ ಕೋಚಿಂಗ್ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಹಾಗೂ ವಿವಿಧ ವಿಷಯಗಳಲ್ಲಿ ಕೋಚಿಂಗ್ ನೀಡಲು ಅರ್ಹ ಉಪನ್ಯಾಸಕ ರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅಂಬೇಡ್ಕರ್ ಸೆಂಟರ್ ಆಫ್ ಎಕ್ಸ್‌ಲೆನ್ಸ್ (DACE) ಅಡಿಯಲ್ಲಿ ಉಚಿತ (upsc – Civil Service) ಕೋಚಿಂಗ್ (ಪೂರ್ವಭಾವಿ ಮತ್ತು ಮುಖ್ಯ ಪ್ರವೇಶಕ್ಕಾಗಿ ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ವೆಬ್‌ಸೈಟ್‌ಗೆ https://www.cuk.ac.in/#/dace ಭೇಟಿ ನೀಡಬಹುದು. ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ 10-06-2022ರಂದು ಪ್ರಾರಂಭವಾಗುತ್ತದೆ ಮತ್ತು ಅರ್ಜಿಯನ್ನು ಸಲ್ಲಿಸಲು 15-07-2022 ಕೊನೆಯ ದಿನಾಂಕವಾಗಿರುತ್ತದೆ.
ಅರೆಕಾಲಿಕ ಉಪನ್ಯಾಸಕರು:
ನೇಮಕಾತಿ ಅಧಿಸೂಚನೆ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಡಾ. ಅಂಬೇಡ್ಕರ್ ಸೆಂಟರ್ ಆಫ್ ಎಕ್ಸ್‌ಲೆನ್ಸ್ (DACE) ಯೋಜನೆ ಯಡಿಯಲ್ಲಿ, ಇತಿಹಾಸ, ಭೂಗೋಳ ಮತ್ತು ಸಾರ್ವಜನಿಕ ಆಡಆತ ವಿಷಯದಲ್ಲಿ ಯು.ಪಿ.ಎಸ್.ಸಿ. (UPSC, Civil Service) ಕೋಚಿಂಗ್‌ಗಾಗಿ (ಪೂರ್ವಭಾವಿ ಮತ್ತು ಮುಖ್ಯ) ಅರೆಕಾಲಿಕ ಅಧ್ಯಾಪಕರ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ವೆಬ್‌ಸೈಟ್ https://www.cuk.ac.in/#/dace ಗೆ ಭೇಟಿ ನೀಡಬಹುದು. ಅನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ 10-06-2022 ರಿಂದ ಪ್ರಾರಂಭವಾಗುತ್ತದೆ ಮತ್ತು ಭರ್ತಿ ಮಾಡಿದಅರ್ಜಿ ಸಲ್ಲಿಸಲು 15-07-2022 ಕೊನೆಯ ದಿನಾಂಕವಾಗಿರುತ್ತದೆ.
ವಯೋಮಿತಿ: ಯಾವುದೇ ವಯೋಮಿತಿ ಇರುವುದಿಲ್ಲ
ಅರ್ಜಿ ಶುಲ್ಕ: ಅರ್ಜಿ ಹಾಕಲು ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 10-06-2022
ಅರ್ಜಿ ಹಾಕಲು ಕೊನೆಯ ದಿನಾಂಕ : 15-07-2022
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ ಅರ್ಜಿ ಹಾಕಬೇಕು.
ಪ್ರಮುಖ ಲಿಂಕ್
ನೋಟಿಫಿಕೇಶನ್