GPSTR 15000 TGT ಶಿಕ್ಷಕರ ನೇಮಕಾತಿ – ಅಧಿಸೂಚನೆ ಪ್ರಕಟ- ಏನೆಲ್ಲಾ ಬದಲಾವಣೆಯಾಗಿವೆ ನೋಡಿ

Click here to Share:

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ (6-8 ನೇ ತರಗತಿ) ಖಾಲಿ ಇರುವ 15000 ಶಿಕ್ಷಕರ ನೇಮಕಾತಿಗೆ ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಬಿದ್ದಿದೆ. ಈ ಮೂಲಕ ವೃಂದ & ನೇಮಕಾತಿ ನಿಯಮಗಳನ್ನು ರೂಪಿಸಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ನೇಮಕಾತಿ ತಿದ್ದುಪಡಿ ನಿಯಮಗಳು 2020 ಅನ್ನು ರಚಿಸಿ ಅಧಿಸೂಚನೆ ಹೊಡಿಸಲಾಗಿದೆ.

 ಇದರಲ್ಲಿ 10,000 ಹುದ್ದೆಗಳು ರಾಜ್ಯ ವಂದಕ್ಕೆ ಸೇರಿಸುತ್ತವೆ & ಇನ್ನುಳಿದ 5000 ಹುದ್ದೆಗಳು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಾಗಿವೆ. ಈ ಹುದ್ದೆಗಳ ನೇಮಕಾತಿ ಕುರಿತಂತೆ ವಿವರಗಳನ್ನು ಇಲ್ಲಿ ಚರ್ಚಿಸೋಣ.

ಶೈಕ್ಷಣಿಕ ವಿದ್ಯಾರ್ಹತೆ:

ಪದವಿಯಲ್ಲಿ ಕನಿಷ್ಟ ಶೇ. 50 ಅಂಕಗಳೊಂದಿಗೆ ಉತ್ತೀರ್ಣ & ಪ್ರಾಥಮಿಕ ಶಿಕ್ಷಣದಲ್ಲಿ ಎರಡು ವರ್ಷಗಳ ಡಿಪ್ಲೋಮ ಉತ್ತೀರ್ಣರಾಗಿರಬೇಕು.

ಅಥವಾ

ಪದವಿಯಲ್ಲಿ ಕನಿಷ್ಟ ಶೇ. 50 ಅಂಕಗಳೊಂದಿಗೆ ಉತ್ತೀರ್ಣ & ಬಿ.ಇಡಿ ಪದವಿ /  ವಿಶೇಷ ಶಿಕ್ಷಣ ಪದವಿ ಪಡೆದಿರಬೇಕು.

ಅಥವಾ

ಪಿಯುಸಿಯಲ್ಲಿ ಕನಿಷ್ಟ ಶೇ. 50 ಅಂಕಗಳೊಂದಿಗೆ ಉತ್ತೀರ್ಣ & ನಾಲ್ಕು ವರ್ಷಗಳ ಬ್ಯಾಚುಲರ್ ಆಫ್ ಎಲಿಮೆಂಟರಿ ಎಜುಕೇಷನ್ ಪದವಿ/ ನಾಲ್ಕು ವರ್ಷಗಳ ಬ್ಯಾಚುಲರ್ ಆಫ್ ಎಜುಕೇಷನ್ ನಲ್ಲಿ ಉತ್ತೀರ್ಣರಾಗಿರಬೇಕು.

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ 1/ ವಿಕಲಚೇತನ ಅಭ್ಯರ್ಥಿಗಳಿಗೆ ಶೇ. 45 ಅಂಕಗಳನ್ನು ಪಿಯುಸಿ / ಪದವಿಯಲ್ಲಿ ಪಡೆದಿದ್ದರೆ ಅರ್ಹರಾಗಿರುತ್ತಾರೆ.

ಮೇಲ್ಕಾಣಿಸಿದ ವಿದ್ಯಾರ್ಹತೆಯೊಂದಿಗೆ ಕರ್ನಾಟಕ ಅಥವಾ ಭಾರತ ಸರ್ಕಾರ ನಡೆಸುವ  ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಪತ್ರಿಕೆ 2 ರಲ್ಲಿ ಅರ್ಹತೆ ಗಳಿಸಿರಬೇಕು.

ವಯೋಮಿತಿ:

ಸಾಮಾನ್ಯ ವರ್ಗ : 40  ವರ್ಷ

2ಎ, 2ಬಿ, 3ಎ, 3ಬಿ : 43 ವರ್ಷ

ಪ.ಜಾ, ಪ.ಪಂ, ಪ್ರವರ್ಗ 1 : 45 ವರ್ಷ

ಆಯ್ಕೆ ವಿಧಾನ:

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳು 0.50
ಟಿಇಟಿ ಪರೀಕ್ಷೆಯಲ್ಲಿ ಪಡೆದ ಅಂಕಗಳು 0.20
ಪದವಿಯಲ್ಲಿ ಪಡೆದ ಅಂಕಗಳು 0.20
ಶಿಕ್ಷಕರ ಶಿಕ್ಷಣ ಕೋರ್ಸಿನಲ್ಲಿ ಪಡೆದ ಅಂಕಗಳು 0.10

ಪರೀಕ್ಷಾ ವಿಧಾನ:

ಪತ್ರಿಕೆ 1:

ಎಲ್ಲರಿಗೂ ಕಡ್ಡಾಯವಾಗಿರುತ್ತದೆ.

ವಿಷಯ ಅಂಕಗಳು
ಸಾಮಾನ್ಯ ಕನ್ನಡ ಭಾಷೆ 25
ಸಾಮಾನ್ಯ ಅಂಗ್ಲ ಭಾಷೆ 25
ಸಾಮಾನ್ಯ ಜ್ಞಾನ 25
ಶೈಕ್ಷಣಿಕ ಮನೋವಿಜ್ಞಾನ & ವಿಕಸನ, ಬೋಧನಾ ವಿಧಾನ 55
ಮೌಲ್ಯ ಶಿಕ್ಷಣ & ಅರೋಗ್ಯ ಶಿಕ್ಷಣ 15
ಗಣಕ & ಪ್ರಬುದ್ದತೆ ಬಗ್ಗೆ 10
ಒಟ್ಟು ಅಂಕಗಳು 150

ಪತ್ರಿಕೆ 2:

ಭಾಷೆ, ಅಂಗ್ಲ ಗಣಿತ & ವಿಜ್ಞಾನ ಹಾಗೂ ಸಮಾಜ ಪಾಠಗಳ ಶಿಕ್ಷಕರಿಗೆ ಮಾತ್ರ
ವಿಷಯ ಅಂಕಗಳು
ಆಯಾ ವಿಷಯದ ಜ್ಞಾನ –MCQ 50
ಆಯಾ ವಿಷಯದ ಜ್ಞಾನ – ವಿವರಣಾತ್ಮಕ 100
ಒಟ್ಟು 150

ಪೇಪರ್ 2 ರ ಪತ್ರಿಕೆಯಲ್ಲಿ  ಕನಿಷ್ಠ ಶೇ. 50 ಅಂಕಗಳನ್ನು ಗಳಿಸುವುದು  ಕಡ್ಡಾಯವಾಗಿದೆ.

ಪತ್ರಿಕೆ 3: ಭಾಷಾ ಸಾಮರ್ಥ್ಯ ಪರೀಕ್ಷೆ

ಗಣಿತ & ವಿಜ್ಞಾನ ಹಾಗೂ ಸಮಾಜ ಪಾಠಗಳ ಶಿಕ್ಷಕರಿಗೆ ಮಾತ್ರ
ವಿಷಯ ಅಂಕಗಳು
ಆಯಾ ಬೋಧನಾ ಮಾಧ್ಯಮದ ಬಾಷಾ ಸಾಮರ್ಥ್ಯ – ವಿವರಣಾತ್ಮಕ  ಪರೀಕ್ಷೆ (ಭಾಷಾ ಬಳಕೆಯ ಸಾಮರ್ಥ್ಯ, ಗ್ರಹಿಸುವಿಕೆ, ಶಬ್ಧ ಭಂಡಾರ & ಬರವಣಿಗೆ ಸಾಮರ್ಥ್ಯಗಳು 100
ಒಟ್ಟು 100

 

ಪೇಪರ 3 ರಲ್ಲಿ ಕನಿಷ್ಟ ಶೇ. 60 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.

ಎಲ್ಲಾ ಮೂರು ಪತ್ರಿಕೆಗಳ ಅಂಕಗಳನ್ನು ಆಯ್ಕೆಗೆ ಪರಿಗಣಿಸಲಾಗುವುದು.

Download the Notification


Click here to Share:
Tagged . Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *