High Court SDA Recruitment 2021
ಕರ್ನಾಟಕ ಹೈಕೋರ್ಟಿನಲ್ಲಿ ಖಾಲಿ ಇರುವ 142 ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಗಾಗಿ ದಿನಾಂಕ 24-08-2021 ರಂದು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಇದರಲ್ಲಿ ರಾಜ್ಯವೃಂದ ಕ್ಕೆ 127 & ಕಲ್ಯಾಣ ಕರ್ನಾಟಕ ವೃಂದಕ್ಕೆ 15 ಹುದ್ದೆಗಳು ಹಂಚಿಕೆಯಾಗಿದ್ದವು. ಈಗ ಅದರ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗಿದೆ.
ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗಳನ್ನು ವೃಂದ & ನೇಮಕಾತಿ ಮೀಸಲಾತಿಯನ್ವಯ 1:7 ಅನುಪಾತದಲ್ಲಿ ದಾಖಲಾತಿ ಪರಿಶೀಲನೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಒಟ್ಟು 997 ಅಭ್ಯರ್ಥಿಗಳು ಇದರಲ್ಲಿ ಆಯ್ಕೆಯಾಗಿದ್ದು, ಇವರು ಮೂಲ ದಾಖಲೆಗಳ ಪರಿಶೀಲನೆಗೆ ಒಳಪಡಬೇಕಾಗುತ್ತದೆ.
ದಾಖಲೆಗಳ ಪರಿಶೀಲನೆಯಾದ ನಂತರ ಮತ್ತೊಂದು ಪಟ್ಟಿಯನ್ನು 1:5 ಅನುಪಾತದಲ್ಲಿ ತಯಾರಿಸಲಾಗುತ್ತದೆ. ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಸದರಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆಯನ್ನು ನಿರ್ಧರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದಿನಾಂಕ 13-12-2021 ರಿಂದ 23-12-2021 ರವರೆಗೆ ದಾಖಲಾತಿ ಪರಿಶೀಲನೆ ನಡೆಯಲಿದ್ದು ಇದರಲ್ಲಿ ಬರುವ ಭಾನುವಾರ ವನ್ನು ಹೊರತುಪಡಿಸಿ ಉಳಿದ ದಿನಗಳಂದು ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳು, ಜೆರಾಕ್ಸ್ ಪ್ರತಿಗಳೊಂದಿಗೆ ಕೋರ್ಟ್ ಹಾಲ್ ನಂ. 35 ಗ್ರೌಂಡ್ ಪ್ಲೋರ್, ಕರ್ನಾಟಕ ಉಚ್ಛ ನ್ಯಾಯಾಲಯ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು ಇಲ್ಲಿಗೆ ಖುದ್ದಾಗಿ ಅಥವಾ ತಾವು ನೇಮಿಸುವ ಯಾವುದೇ ಅಧಿಕೃತ ವ್ಯಕ್ತಿಯು ಕಡ್ಡಾಯವಾಗಿ ಹಾಜರಾಗಬೇಕಾಗುತ್ತದೆ. ಇಲ್ಲವಾದಲ್ಲಿ ಮುಂದಿನ ಲಿಖಿತ ಪರೀಕ್ಷೆಗೆ ಅರ್ಹತೆಯನ್ನು ರದ್ದುಮಾಡಲಾಗುತ್ತದೆ.
Document Verification Eligibility List Download in below link
ನಿಗದಿತ ದಿನಾಂಕದ ಒಳಗಾಗಿ ಆಯ್ಕೆಯಾದ ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಯನ್ನು ಮಾಡಿಸಿಕೊಳ್ಳಿ. ಈ ಮಾಹಿತಿಯನ್ನು ಎಲ್ಲ ಕಡೆ ಶೇರ್ ಮಾಡಿ.