ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟ ನಿ. ಹುಬ್ಬಳ್ಳಿ ಯಲ್ಲಿ ನೇಮಕಾತಿ ಅಧಿಸೂಚನೆ:
ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟ ನಿ. ಹುಬ್ಬಳ್ಳಿ ಇದರಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.
ಸಾಮಾನ್ಯ ಕೆಲಸಗಾರ, ಚಾಲಕ, ಸಹಾಯಕ ಮಾರಾಟಾಧಿಕಾರಿ, ಸಹಾಯಕ ಆಡಳಿತಾಧಿಕಾರಿ, ಲೆಕ್ಕಾಧಿಕಾರಿ, ಕ್ಷೇತ್ರಾಧಿಕಾರಿ ಮುಂತಾದ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಇವು ಖಾಯಂ ಹುದ್ದೆಗಳಾಗಿರುತ್ತವೆ.
ಹತ್ತನೇ, ಪಿಯುಸಿ, ಯಾವುದೇ ಪದವಿ, ಪಡೆದವರಿಗೆ ಇಲ್ಲಿ ಉದ್ಯೋಗಾವಕಾಶಗಳಿದ್ದು ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ವಿಧಾನ, ಮುಂತಾದ ಮಾಹಿತಿಗಳನ್ನು ಇಲ್ಲಿ ತಿಳಿಯಬಹುದು.
ಹುದ್ದೆಗಳ ವಿವರ:
ಸಾಮಾನ್ಯ ಕೆಲಸಗಾರ:
ಒಟ್ಟು ಹುದ್ದೆಗಳು : 04
ವೇತನ ಶ್ರೇಣಿ: 17000-28950
ಕನಿಷ್ಠ ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ ಪಾಸಾಗಿರಬೇಕು.
ಚಾಲಕ:
ಒಟ್ಟು ಹುದ್ದೆಗಳು : 01
ವೇತನ ಶ್ರೇಣಿ: 17000-28950
ಕನಿಷ್ಠ ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ ಪಾಸಾಗಿರಬೇಕು.
ಲಘು & ಭಾರಿ ವಾಹನ ಚಾಲನೆ ಪರವಾನಿಗೆ ಹೊಂದಿರತಕ್ಕದ್ದು.
ಸಹಾಯಕ ಮಾರಾಟಾಧಿಕಾರಿ:
ಒಟ್ಟು ಹುದ್ದೆಗಳು : 04
ವೇತನ ಶ್ರೇಣಿ: 27600-52650
ಕನಿಷ್ಠ ವಿದ್ಯಾರ್ಹತೆ: ಅಂಗಿಕೃತ ವಿಶ್ವವಿದ್ಯಾಲಯದಿಂದ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಸಹಾಯಕ ಲೆಕ್ಕಾಧಿಕಾರಿ:
ಒಟ್ಟು ಹುದ್ದೆಗಳು : 03
ವೇತನ ಶ್ರೇಣಿ: 27600-52650
ಕನಿಷ್ಠ ವಿದ್ಯಾರ್ಹತೆ: ಅಂಗಿಕೃತ ವಿಶ್ವವಿದ್ಯಾಲಯದಿಂದ ಬಿಕಾಂ ಪದವಿ ಜೊತೆಗೆ ಟ್ಯಾಲಿ ಅಕೌಂಟಿಂಗ್, ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಸಹಾಯಕ ಆಡಳಿತಾಧಿಕಾರಿ:
ಒಟ್ಟು ಹುದ್ದೆಗಳು : 01
ವೇತನ ಶ್ರೇಣಿ: 27600-52650
ಕನಿಷ್ಠ ವಿದ್ಯಾರ್ಹತೆ: ಅಂಗಿಕೃತ ವಿಶ್ವವಿದ್ಯಾಲಯದಿಂದ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಕ್ಷೇತ್ರಾಧಿಕಾರಿ:
ಒಟ್ಟು ಹುದ್ದೆಗಳು : 04
ವೇತನ ಶ್ರೇಣಿ: 37900-70850
ಕನಿಷ್ಠ ವಿದ್ಯಾರ್ಹತೆ: ಅಂಗಿಕೃತ ವಿಶ್ವವಿದ್ಯಾಲಯದಿಂದ ಕೃಷಿ ಪದವಿ ಹೊಂದಿರಬೇಕು.
ಸಾಮಾನ್ಯ ಸೂಚನೆಗಳು:
- ಕನ್ನಡ ಓದುವುದು, ಬರೆಯುವುದು ಮತ್ತು ಮಾತನಾಡುವುದು ಕಡ್ಡಾಯವಾಗಿರುತ್ತದೆ.
- ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸತಕ್ಕದ್ದು, ಪ್ರತ್ಯೇಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದ್ದಲ್ಲಿ ಅರ್ಜಿ ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿಸಬೇಕು.
ವಯೋಮಿತಿ:
ಕನಿಷ್ಟ ವಯೋಮಿತಿ: 18 ವರ್ಷ ತುಂಬಿರಬೇಕು
ಸಾಮಾನ್ಯ ವರ್ಗ: 35 ವರ್ಷ ಮೀರಿರಬಾರದು
2ಎ, 2ಬಿ, 3ಎ, 3ಬಿ: 38 ವರ್ಷ ಮೀರಿರಬಾರದು
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ : 40 ವರ್ಷ ಮೀರಿರಬಾರದು
(ಅಂಗವಿಕಲರು, ಮಾಜಿ ಸೈನಿಕರಿಗೆ ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.)
ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ
ಮೌಖಿಕ ಪರೀಕ್ಷೆ/ ಸಂದರ್ಶನ
ಅರ್ಜಿ ಶುಲ್ಕ:
ಪ.ಜಾ, ಪ.ಪಂ, ಪ್ರವರ್ಗ 1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕ ರೂ 500/-
ಇತರೆ ವರ್ಗದ ಅಭ್ಯರ್ಥಿಗಳು ಪಾವತಿಸಬೇಕಾದ ಶುಲ್ಕ: 1000 ರೂ
ಅರ್ಜಿ ಸಲ್ಲಿಸುವ ವಿಧಾನ:
ನಿರ್ದಿಷ್ಟ ಪಡಿಸಿದ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ತುಂಬಿ ಎಲ್ಲ ಅಗತ್ಯ ದಾಖಲೆಗಳೊಂದಿಗೆ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಕೊನೆಯ ದಿನಾಂಕದ ಒಳಗಾಗಿ ಕಳುಹಿಸತಕ್ಕದ್ದು.
ವ್ಯವಸ‍್ಥಾಪಕ ನಿರ್ದೇಶಕರು
ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟ ನಿಯಮಿತ
ಹೆಬ್ಬಳ್ಳಿ ರಸ್ತೆ, ತಾಜನಗರ,
ಹುಬ್ಬಳ್ಳಿ -280031
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:
8ನೇ ಮೇ, 2021 ಸಂಜೆ 05:30 ಗಂಟೆಯವರೆಗೆ
Important Links