KPTCL Recruitment: AE, JE & Junior Assistant DV list Released| What Documents Required for Documents Verification?

Click here to Share:

KPTCL Recruitment: AE, JE & Junior Assistant DV list Released| What Documents Required for Documents Verification?

Karnataka Power Transmission Corporation Limited released Documents Verification Candidates list of Assistant Engineer, Junior Engineer & Junior Assistant Posts. The Aptitude & Kannada Compulsory Paper Examination has been conducted by Karnataka Examination Authority in the month of July/ August 2022. here the candidates are eligible to download the verification list. 

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ವಿವಿಧ ಎಸ್ಕಾಂಗಳಿಂದ.ದಿನಾಂಕ 01.02.2022 ರಂದು ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟವಾಗಿ  ಇದರಲ್ಲಿ ಸಹಾಯಕ ಇಂಜಿನಿಯರ್ (ವಿದ್ಯುತ್ /ಸಿವಿಲ್), ಕಿರಿಯ ಇಂಜಿನಿಯರ್(ವಿದ್ಯುತ್/ಸಿವಿಲ್) ಹಾಗೂ ಕಿರಿಯ ಸಹಾಯಕ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇದರ ಅನುಸಾರ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮತ್ತು ಕನ್ನಡ ಭಾಷಾ ಪರೀಕ್ಷೆಗಳನ್ನು ದಿನಾಂಕ: 23.07.2022, 24.07.2022 ಹಾಗೂ 07.08.2022 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸಲಾಗಿರುತ್ತದೆ.

ಆಪ್ಟಿಟ್ಯೂಡ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ, ತಾತ್ಕಾಲಿಕ ಸರಿ ಉತ್ತರಗಳನ್ನು (key-answers) ಪ್ರಕಟಿಸಿದ ನಂತರ, ಅವುಗಳಿಗೆ ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಪಡೆದು, ಅವುಗಳನ್ನು ಪರಿಶೀಲಿಸಿದ ನಂತರ ಆಪ್ಟಿಟ್ಯೂಡ್ ಪರೀಕ್ಷೆಗಳಲ್ಲಿ ಮತ್ತು ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ ಅಭ್ಯರ್ಥಿಗಳ ಹುದ್ದೆವಾರು ಅರ್ಹತಾ ಪಟ್ಟಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ದಿನಾಂಕ 04.02.2023 ಹಾಗೂ 07.02.2023 ರಂದು ಪ್ರಕಟಿಸಿರುತ್ತಾರೆ.

ಉದ್ಯೋಗ ಮಾಹಿತಿ: ಜಲ ಸಂಪನ್ಮೂಲ ಇಲಾಖೆಯಲ್ಲಿ 400 ಹುದ್ದೆಗಳ ನೇಮಕಾತಿ- KPSC ಯಿಂದ JE & AE ಹುದ್ದೆಗಳ ನೇರ ಭರ್ತಿಗೆ ಕ್ರಮ:

ಮುಂದುವರೆದು, ದಾಖಲಾತಿಗಳ ಪರಿಶೀಲನೆಗಾಗಿ, ಸೂಚಿತ ರಿಕ್ತ ಸ್ಥಾನಗಳ ಆಧಾರದ ಮೇಲೆ ಹುದ್ದೆವಾರು ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಕವಿಪ್ರನಿನಿ ವೆಬ್‌ಸೈಟ್ https://kptcl.karnataka.gov.in/ ರಲ್ಲಿ ಪ್ರಕಟಿಸಲಾಗಿದೆ. ಸದರಿ ಪಟ್ಟಿಯು ಆಯ್ಕೆ ಪಟ್ಟಿಯಾಗಿರುವುದಿಲ್ಲ. ದಾಖಲಾತಿ ಪರಿಶೀಲನೆಗೆ ಸಂಬಂಧಿಸಿದಂತೆ, ದಿನಾಂಕವನ್ನು ಮತ್ತು ಇತರೆ ಹೆಚ್ಚಿನ ಮಾಹಿತಿಯನ್ನು ನಂತರದಲ್ಲಿ ಕವಿಪ್ರನಿನಿ ವೆಬ್‌ಸೈಟ್ https://kptcl.karnataka.gov.in/ ರಲ್ಲಿ ಪ್ರಕಟಿಸಲಾಗುವುದು.

ಉದ್ಯೋಗ ಮಾಹಿತಿ: ಕರ್ನಾಟಕ ಕೃಷಿ ಇಲಾಖೆಯಲ್ಲಿ ಸಹಾಯಕರು, ಕಂಪ್ಯೂಟರ್ ಆಪರೇಟರ್ & ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ದಾಖಲಾತಿ ಪರಿಶೀಲನೆಗೆ ಬೇಕಾಗುವ ದಾಖಲೆಗಳ ವಿವರ:

  1. ಹತ್ತನೇ ತರಗತಿ ಅಂಕಪಟ್ಟಿ (ಜನ್ಮ ದಿನಾಂಕ ದೃಡಿಕರಿಸುವದಕ್ಕಾಗಿ)
  2. ವಿದ್ಯಾರ್ಹತೆಗೆ  ಸಂಬಂಧಿಸಿದ ಮೂಲ ದಾಖಲೆಗಳು
  3. ಇಂಜಿನೀಯರಿಂಗ್ ಪದವಿಯ Convocation Certificate/ Passing Certificate.
  4. ಆಧಾರ್ ಕಾರ್ಡ್
  5. ಇತ್ತೀಚೆಗೆ ಪಾಸ್ ಪೋರ್ಟ್ ಸೈಜಿನ ಭಾವಚಿತ್ರ
  6. ಚಾಲ್ತಿಯಲ್ಲಿರುವ ಜಾತಿ & ಆದಾಯ ಪ್ರಮಾಣಪತ್ರ (ಈ ಮೀಸಲಾತಿಯನ್ನು ಕೋರಿರುವ ಅಭ್ಯರ್ಥಿಗಳಿಗೆ ಮಾತ್ರ)
  7. ಗ್ರಾಮೀಣ & ಕನ್ನಡ ಮಾಧ್ಯಮ ಪ್ರಮಾಣ ಪತ್ರ (ಈ ಮೀಸಲಾತಿಯನ್ನು ಕೋರಿರುವ ಅಭ್ಯರ್ಥಿಗಳಿಗೆ ಮಾತ್ರ)
  8. 371j ಕಲ್ಯಾಣ ಕರ್ನಾಟಕ ಮೀಸಲಾತಿ ಪ್ರಮಾಣಪತ್ರ (ಈ ಮೀಸಲಾತಿಯನ್ನು ಕೋರಿರುವ ಅಭ್ಯರ್ಥಿಗಳಿಗೆ ಮಾತ್ರ)
  9. ನಿಗದಿಯ ಪ್ರಾಧಿಕಾರದಿಂದ ಪಡೆದಿರುವ ಅಂಗವಿಕಲ ಪ್ರಮಾಣಪತ್ರ (ಈ ಮೀಸಲಾತಿಯನ್ನು ಕೋರಿರುವ ಅಭ್ಯರ್ಥಿಗಳಿಗೆ ಮಾತ್ರ)
  10. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಸೈನ್ಯದಿಂದ ಬಿಡುಗಡೆ ಹೊಂದಿರುವ ಪ್ರಮಾಣಪತ್ರ (ಈ ಮೀಸಲಾತಿಯನ್ನು ಕೋರಿರುವ ಅಭ್ಯರ್ಥಿಗಳಿಗೆ ಮಾತ್ರ)
  11. ಅಭ್ಯರ್ಥಿಗಳು ಕೋರಿರುವ ಇತರೆ ಮೀಸಲಾತಿ ದೃಢಿಕರಿಸುವ ಪ್ರಮಾಣಪತ್ರಗಳು

ಮೇಲಿನ ಎಲ್ಲ ಅಗತ್ಯ ಮೂಲ ದಾಖಲಾತಿಗಳ ಜೊತೆಗೆ ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ನಿಗದಿತ ಸಮಯ & ಸ್ಥಳಕ್ಕೆ ಹಾಜರಾಗಬೇಕು.

 IMPORTANT LINKS

Download the DV List


Click here to Share:
Tagged . Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *