ಸಹಕಾರಿ ಬ್ಯಾಂಕ್ ನಲ್ಲಿ ಖಾಲಿ ಇರುವ ಜೂ. ಅಸಿಸ್ಟೆಂಟ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ| Sri Basaveshwara Cooperative Bank Recruitment 2023|

Click here to Share:

ಸಹಕಾರಿ ಬ್ಯಾಂಕ್ ನಲ್ಲಿ ಖಾಲಿ ಇರುವ ಜೂ. ಅಸಿಸ್ಟೆಂಟ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ| Sri Basaveshwara Cooperative Bank Recruitment 2023|

ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ ನಿ., ಬಾಗಲಕೋಟ ಇದರಲ್ಲಿ ಖಾಲಿ ಇರುವ ಈ ಕೆಳಕಂಡ 35 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬ್ಯಾಂಕಿನಿಂದ ಪಡೆದ ಅರ್ಜಿಯನ್ನು ಅಭ್ಯರ್ಥಿಗಳು ಬ್ಯಾಂಕು ನಿಗದಿಪಡಿಸಿದ ಅರ್ಜಿ ನಮೂನೆಗಳಲ್ಲಿಯೇ ಅರ್ಜಿಗಳನ್ನು ಸಲ್ಲಿಸಬೇಕು. ಈ ನೇಮಕಾತಿ ಕುರಿತು ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ. ನೋಟಿಫಿಕೇಶನ್ & ಅರ್ಜಿ ನಮೂನೆಯನ್ನು ಕೆಳಗೆ ನೀಡಲಾಗಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ.

ನೇಮಕಾತಿಗೆ ಪ್ರಕಟಿಸಲಾಗಿರುವ ಹುದ್ದೆಗಳ ವಿವರ ಈ ಕೆಳಗಿನಂತೆ ಇರುತ್ತದೆ. 

ಕಿರಿಯ ಸಹಾಯಕರು- 25

ಸಿಪಾಯಿ- 10

ಒಟ್ಟು ಹುದ್ದೆಗಳು- 35

ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬೃಹತ್ ಭರ್ತಿಗೆ ಅಧಿಸೂಚನೆ: ಹುದ್ದೆಗಳಿಗೆ ಅರ್ಜಿ ಆಹ್ವಾನ


ವೇತನ ಶ್ರೇಣಿ:

ಕಿರಿಯ ಸಹಾಯಕರು : 33450- 62600

ಸಿಪಾಯಿ: 27650-52650

ವಿದ್ಯಾರ್ಹತೆ: 

ಕಿರಿಯ ಸಹಾಯಕರು: ಅಧಿಕೃತವಾಗಿ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದ ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು ಹಾಗೂ ಕಂಪ್ಯೂಟರ ಕಾರ್ಯನಿರ್ವಹಣೆ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು. ಈ ಕುರಿತು ಪ್ರಮಾಣ ಪತ್ರವನ್ನು ಲಗತ್ತಿಸಬೇಕು.

ಸಿಪಾಯಿ: SSLC ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಕನ್ನಡ ಓದಲು ಹಾಗೂ ಬರೆಯಲು ಬರಬೇಕು.

ವಯೋಮಿತಿ: ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕನಿಷ್ಟ 18 ವರ್ಷಗಳಾಗಿರಬೇಕು ಹಾಗೂ ಕರ್ನಾಟಕ ರಾಜ್ಯ ಸರಕಾರದ ರೀತ್ಯಾ ಈ ಕೆಳಕಂಡ ಗರಿಷ್ಠ ವಯೋಮಿತಿಗೊಳಪಟ್ಟಿರಬೇಕು.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ : 40 ವರ್ಷಗಳು

ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ  38 ವರ್ಷ

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 35 ವರ್ಷ

ಅರ್ಜಿ ಶುಲ್ಕ :

ಕಿರಿಯ ಸಹಾಯಕರ ಹುದ್ದೆಗೆ:  ಅರ್ಜಿ ಶುಲ್ಕ ರೂ.1,000/-

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ/ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ:500/-. 

ಸಿಪಾಯಿ ಹುದ್ದೆಗೆ ಅರ್ಜಿ ಶುಲ್ಕ ರೂ.500/- 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ/ ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ:250/- 

ಅರ್ಜಿ ಶುಲ್ಕವನ್ನು SHRI BASAVESHWAR SAHAKARI BANK NYT, BAGALKOT, A/C SS -568 ಹೆಸರಿನಲ್ಲಿ ಬಾಗಲಕೋಟೆದಲ್ಲಿ ಸಂದಾಯ ವಾಗುವಂತೆ ಡಿಮಾಂಡ್ ಡ್ರಾಪ್ಪ ಪಡೆದು ಅರ್ಜಿಯ ಜೊತೆಲಗತ್ತಿಸಬೇಕು. ಅಥವಾ ಬ್ಯಾಂಕಿನ ಕಛೇರಿ ಅವಧಿಯಲ್ಲಿ (ರವಿವಾರ ಮತ್ತು ರಜೆ ದಿನ ಹೊರತುಪಡಿಸಿ) ನಗದು ಪಾವತಿಸಿ, ನಕಲು ಪ್ರತಿಯನ್ನು (Xerox Copy) ಅರ್ಜಿಗೆ ಲಗತ್ತಿಸಬೇಕು. ಈ ಹಣವನ್ನು ಯಾವದೇ ಸಂದರ್ಭದಲ್ಲಿ ಹಿಂದಿರುಗಿಸಲಾಗುವದಿಲ್ಲ.

 

LIC Assistant Administrative Officer (AAO) Recruitment 2023- ಭಾರತೀಯ ಜೀವ ವಿಮಾ‌ ನಿಗಮ ನೇಮಕಾತಿ

ಅರ್ಜಿ ಸಲ್ಲಿಸುವ ವಿಧಾನ :

1) ಬ್ಯಾಂಕು ನಿಗದಿಪಡಿಸಿದ ಅರ್ಜಿಗಳಲ್ಲಿ ಮಾತ್ರ ಅರ್ಜಿಯನ್ನು ಸಲ್ಲಿಸತಕ್ಕದ್ದು, ನಿಗದಿತ ಅರ್ಜಿಗಳನ್ನು ರೂ.100/- + GST ಶುಲ್ಕವನ್ನು ತುಂಬಿ ಮಾಡಿ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 2.30 ಘಂಟೆಯವರಿಗೆ (ರವಿವಾರ ಹಾಗೂ ರಜಾ ದಿನಗಳನ್ನು ಹೊರತುಪಡಿಸಿ) ಪಡೆಯಬಹುದು.

2) ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಕಿರಿಯ ಸಹಾಯಕ ಮತ್ತು ಸಿಪಾಯಿ ಹುದ್ದೆಗೆ ಬೇರೆ ಬೇರೆಯಾಗಿ ಅರ್ಜಿ ಸಲ್ಲಿಸಬೇಕು. 

3) ಯಾವ ಹುದ್ದೆಗೆ ಅರ್ಜಿ ಸಲ್ಲಿಸಲಾಗುತ್ತದೆ ಎಂಬುದನ್ನು ಲಕೋಟೆಯ ಮೇಲೆ ಸ್ಪಷ್ಟವಾಗಿ ನಮೂದಿಸಬೇಕು. 

4) ಭರ್ತಿ ಮಾಡಿದ ಅಜಿಗಳನ್ನು ಸದಸ್ಯ ಕಾರ್ಯದರ್ಶಿ, ಸಿಬ್ಬಂದಿ ನೇಮಕಾತಿ ಸಮಿತಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ, ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ ನಿ., ಬಾಗಲಕೋಟೆ ಬಸವೇಶ್ವರ ಬ್ಯಾಂಕ್ ಸರ್ಕಲ್, ಸೆಕ್ಟರ ನಂ.25, ನವನಗರ, ಬಾಗಲಕೋಟೆ – 587103 ಈ ಹೆಸರಿಗೆ ಸಲ್ಲಿಸಬೇಕು.

5) ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ 31/01/2023 ಮಂಗಳವಾರ ಮಧ್ಯಾಹ್ನ 3.00 ಘಂಟೆ ಒಳಗಾಗಿ ಬ್ಯಾಂಕಿನ ಪ್ರಧಾನ ಕಛೇರಿ, ನವನಗರ, ಬಾಗಲಕೋಟೆಯಲ್ಲಿ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬೇಕು. 

6) ಅರ್ಜಿಯಲ್ಲಿರುವ ಎಲ್ಲಾ ಅಂಕಣಗಳನ್ನು ಪೂರ್ತಿ ಭರ್ತಿ ಮಾಡಿರಬೇಕು. ಅಪೂರ್ಣಗೊಂಡ ಅರ್ಜಿಗಳನ್ನು ತಿರಸ್ಕರಿಸಲಾಗುವುದು. 

7) ಅಭ್ಯರ್ಥಿಗಳು ಕನ್ನಡ, ಇಂಗ್ಲೀಷ್ ಭಾಷಾ ಜ್ಞಾನವನ್ನು ಹೊಂದಿರುವದು ಅವಶ್ಯಕ.

8) ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನಕ್ಕೆ ಹಾಜರಾಗಬೇಕು.

ಬಿಬಿಎಂಪಿಯಲ್ಲಿ ಬೃಹತ್ ಭರ್ತಿ 2023: ಒಟ್ಟು 3673 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೆಳಗಿನ ದಾಖಲಾತಿಗಳನ್ನು ಅಭ್ಯರ್ಥಿಯು ಸ್ವಯಂ ದೃಢೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಬೇಕು. 

1) ಅಭ್ಯರ್ಥಿಯು ಪಾಸ್‌ಪೋರ್ಟ ಅಳತೆಯ ಇತ್ತೀಚಿನ ಭಾವಚಿತ್ರ ಅಂಟಿಸಿ ಸಹಿಮಾಡಬೇಕು.

2) ವಯಸ್ಸಿನ ದೃಢಿಕರಣ ಬಗ್ಗೆ SSLC ಅಂಕ ಪಟ್ಟಿ/ವರ್ಗಾವಣೆ ಪ್ರಮಾಣಪತ್ರದ/Leaving Certificate ನಕಲು ಲಗತ್ತಿಸಬೇಕು. 3. ಕಿರಿಯ ಸಹಾಯಕ ಹುದ್ದೆಗಾಗಿ ವಿದ್ಯಾರ್ಹತೆ ಕುರಿತು ಎಸ್.ಎಸ್.ಎಲ್.ಸಿ./ಪಿಯುಸಿ/ಪದವಿಯ ಎಲ್ಲಾ ವರ್ಷಗಳ ಸೆಮಿಸ್ಟರ್‌ಗಳ ಅಂಕಪಟ್ಟಿ ಗಳ ನಕಲುಗಳನ್ನು ಲಗತ್ತಿಸಬೇಕು.

3) ಸಿಪಾಯಿ ಹುದ್ದೆಗಾಗಿ ವಿದ್ಯಾರ್ಹತೆ ಕುರಿತು ಎಸ್.ಎಸ್.ಎಲ್.ಸಿ.ಅಂಕಪಟ್ಟಿ ನಕಲನ್ನು ಲಗತ್ತಿಸಬೇಕು.

4) ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಕರ್ನಾಟಕ ಸರಕಾರ ನಿಗದಿಪಡಿಸಿದ ನಮೂನೆ ಯಲ್ಲಿ

Important Link:

Notification

 

ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ


Click here to Share:
Bookmark the permalink.

About sdkpscjob

www.kpscjobs.com Educator & Blogger

One Response to ಸಹಕಾರಿ ಬ್ಯಾಂಕ್ ನಲ್ಲಿ ಖಾಲಿ ಇರುವ ಜೂ. ಅಸಿಸ್ಟೆಂಟ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ| Sri Basaveshwara Cooperative Bank Recruitment 2023|

  1. Pingback: Intelligence Bureau Recruitment 2023- Application invites for Assistant/ Executive & MTS Posts: Apply Online for 1775 Posts: - KPSC Jobs

Leave a Reply

Your email address will not be published. Required fields are marked *